ಗ್ರಾಹಕರಿಗೆ ೧೦ ಲಕ್ಷ ಪರಿಹಾರ ನೀಡಬೇಕೆಂದು ಇಬ್ಬರು ಅಂಗಡಿ ಮಾಲೀಕರಿಗೆ ಶಿಕ್ಷೆ

ಮದ್ಯ ಮಾರಾಟ ಮಾಡುವಾಗ ಗ್ರಾಹಕರಿಂದ ೩೦ ರೂಪಾಯಿ ಹೆಚ್ಚು ವಸೂಲಿ !

ಡೆಹ್ರಾಡೂನ್ (ಉತ್ತರಾಖಂಡ) – ನ್ಯಾಯಾಲಯವು ಹರಿದ್ವಾರದಲ್ಲಿ ಸಾರಾಯಿ ಮಾರಾಟ ಮಾಡುವ ೨ ಅಂಗಡಿಗಳಿಗೆ ಸಾರಾಯಿ ಮಾರಾಟ ಮಾಡುವಾಗ ಹೆಚ್ಚು ಬೆಲೆ ತೆಗೆದುಕೊಂಡಿರುವ ಪ್ರಕರಣದಲ್ಲಿ ೧೦ ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಆದೇಶ ನೀಡಿದೆ. ಅದರ ಜೊತೆಗೆ ಮೊಕದ್ದಮೆಯ ಖರ್ಚಿಗಾಗಿ ೧೦ ಸಾವಿರ ರೂಪಾಯಿ ದಂಡ ಕೂಡ ವಿಧಿಸಿದೆ. ವಿಜಯ ಕುಮಾರ ಮತ್ತು ಮೋನು ಕುಮಾರ ಇವರಿಗೆ ಅಂಗಡಿ ಮಾಲೀಕನಿಂದ ಪ್ರತಿಯೊಬ್ಬರಿಗೆ ೫ ಲಕ್ಷ ರೂಪಾಯಿ ಸಿಗಲಿದೆ. ಸಂಬಂಧಪಟ್ಟ ಅಂಗಡಿಯವರು ಇಬ್ಬರಿಂದ ವಿಕ್ಸಿ ಮತ್ತು ಬಿಯರ್ ಇದರ ೪ ಕ್ಯಾನಿಗಾಗಿ ಅನುಕ್ರಮವಾಗಿ ೧೦ ಮತ್ತು ೨೦ ರೂಪಾಯಿ ಹೆಚ್ಚಾಗಿ ವಸೂಲಿ ಮಾಡಿದ್ದರು.

ಮೋನು ಮತ್ತು ವಿಜಯ ಇವರು ಈ ಹಣವನ್ನು ಆನ್‌ಲೈನ್ ಮೂಲಕ ಪಾವತಿಸಿದ್ದರು. ಅದರಿಂದ ಕನಿಷ್ಠ ಬೆಲೆಯಗಿಂತ (‘ಎಂ.ಆರ್.ಪಿ.’ ಗಿಂತ) ಹೆಚ್ಚಿನ ಹಣ ಪಡೆದಿರುವ ಸಾಕ್ಷಿ ಅವರ ಹತ್ತಿರ ಇತ್ತು. ಈ ಕುರಿತು ಅವರು ಹರಿದ್ವಾರದ ಗ್ರಾಹಕ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು. ನ್ಯಾಯಾಲಯವು ಅಂಗಡಿಯವರಿಗೆ ಹಣ ಹಿಂತಿರುಗಿಸುವುದಕ್ಕಾಗಿ ೪ ಅವಕಾಶ ನೀಡಿದ್ದರು; ಆದರೆ ಅವರು ಹಣ ಹಿಂತಿರುಗಿಸಲಿಲ್ಲ.