೧೩ ವರ್ಷದ ಅಪ್ರಾಪ್ತ ಹುಡುಗಿಯ ಮೇಲೆ ಸಾಮೂಹಿಕ ಬಲತ್ಕಾರ : ಹುಡುಗಿಯ ಸ್ತನಗಳು, ಗುಪ್ತಾಂಗ ಮತ್ತು ನಾಲಿಗೆ ಕತ್ತರಿಸಲಾಯಿತು

ಸಮಸ್ತಿಪುರ (ಬಿಹಾರ) – ಇಲ್ಲಿಯ ಓರ್ವ ೧೩ ವರ್ಷದ ಅಪ್ರಾಪ್ತ ಹುಡುಗಿಯ ಮೇಲೆ ಸಾಮೂಹಿಕ ಬಲಾತ್ಕಾರ ನಡೆಸಿ ಆಕೆಯ ಗುಪ್ತಂಗ, ಸ್ತನಗಳು ಮತ್ತು ನಾಲಿಗೆ ಕತ್ತರಿಸಲಾಯಿತು. ನಂತರ ಆಕೆಯನ್ನು ಮೃತಪಟ್ಟಳೆಂದು ಎಂದು ತಿಳಿದು ಉದ್ಯಾನವನದಲ್ಲಿ ಎಸೆದು ಆರೋಪಿಗಳು ಹೋಗಿದ್ದಾರೆ. ಈ ಘಟನೆಯ ನಂತರ ಸ್ಥಳೀಯ ನಾಗರೀಕರಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಈ ಪ್ರಕರಣ ಬೆಳಕಿಗೆ ಬಂದ ನಂತರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ವಿಷಯದ ಬಗ್ಗೆ ಒಂದು ವಾರ್ತೆಯ ಪ್ರಕಾರ ನವೆಂಬರ್ ೧೧ ರಂದು ಕೆಲವು ನರಾಧಮರು ಹುಡುಗಿಯನ್ನು ಅಪಹರಿಸಿದ್ದಾರೆ. ನಂತರ ಎಲ್ಲರೂ ಆಕೆಯ ಮೇಲೆ ಬಲಾತ್ಕಾರ ಮಾಡಿದ್ದಾರೆ. ಬಹಳ ಹುಡುಕಾಟದ ನಂತರ ಹುಡುಗಿ ಉದ್ಯಾನವನದಲ್ಲಿ ರಕ್ತಸಿಕ್ತವಾಗಿ ಸಿಕ್ಕಿದ್ದಾಳೆ. ನಮಸ್ತಿಪುರದ ಪೋಲಿಸ ಅಧಿಕಾರಿ ಹೃದಯಕಾಂತ ಇವರು, ೧೩ ವರ್ಷದ ಹುಡುಗಿಯ ಮೇಲಿನ ಬಲತ್ಕಾರದ ಪ್ರಕರಣ ಬೆಳಕಿಗೆ ಬಂದಿದೆ. ಈ ಪ್ರಕರಣದ ತನಿಖೆ ನಡೆಯುತ್ತಿದೆ. ಇದರಲ್ಲಿನ ತಪ್ಪಿತಸ್ಥರಿಗೆ ಯಾವುದೇ ಪರಿಸ್ಥಿತಿಯಲ್ಲಿ ಸುಮ್ಮನೆ ಬಿಡಲಾಗುವುದಿಲ್ಲ ಎಂದು ಹೇಳಿದರು.

ಸಂಪಾದಕೀಯ ನಿಲುವು

ಇಂತಹ ನರಾಧಮರಿಗೆ ನಡು ಬೀದಿಯಲ್ಲಿ ಗಲ್ಲಿಗೇರಿಸುವ ಶಿಕ್ಷೆ ನೀಡುವುದು ಅವಶ್ಯಕ !