‘ಜನ ಗಣ ಮನ’ ಮತ್ತು ‘ವಂದೇ ಮಾತರಂ’ ಇವುಗಳಿಗೆ ಸಮಾನ ಸ್ಥಾನ ಇರುವುದರಿಂದ ಅದನ್ನು ಗೌರವಿಸಿ ! – ಕೇಂದ್ರ ಸರಕಾರ

ನವದೆಹಲಿ – ರಾಷ್ಟ್ರಗೀತೆ ‘ಜನ ಗಣ ಮನ’ ಮತ್ತು ರಾಷ್ಟ್ರೀಯ ಗೀತೆ ‘ವಂದೇ ಮಾತರಂ’ ಇವೆರಡಕ್ಕೂ ಸಮಾನ ಸ್ಥಾನ ಇರುವುದರಿಂದ ದೇಶದಲ್ಲಿನ ಪ್ರತಿಯೊಬ್ಬ ನಾಗರೀಕನು ಎರಡನ್ನೂ ಗೌರವಿಸಬೇಕೆಂದು, ಕೇಂದ್ರ ಸರಕಾರ ದೆಹಲಿ ಉಚ್ಚ ನ್ಯಾಯಾಲಯದಲ್ಲಿ ಹೇಳಿದೆ. ಭಾಜಪದ ನಾಯಕ ನ್ಯಾಯವಾದಿ ಶ್ರೀ. ಅಶ್ವಿನಿ ಉಪಾಧ್ಯಾಯ ಇವರ ಅರ್ಜಿಯ ಕುರಿತು ಉತ್ತರ ನೀಡುವಾಗ ಕೇಂದ್ರ ಸರಕಾರ ಮೇಲಿನ ಅಭಿಪ್ರಾಯ ಮಂಡಿಸಿದೆ.

ನ್ಯಾಯವಾದಿ ಶ್ರೀ. ಅಶ್ವಿನಿ ಉಪಾಧ್ಯಾಯ ಇವರು ಅರ್ಜಿಯಲ್ಲಿ, ರಾಷ್ಟ್ರಗೀತೆಯ ಹಾಗೆ ರಾಷ್ಟ್ರೀಯ ಗೀತೆ ‘ವಂದೇ ಮಾತರಂ’ಗಾಗಿ ನಿರ್ದೇಶಗಳು ಸಿದ್ಧಪಡಿಸಬೇಕು. ಶೈಕ್ಷಣಿಕ ಸಂಸ್ಥೆಗಳಲ್ಲಿ ಪ್ರತಿದಿನ ವಂದೇ ಮಾತರಂ ಹೇಳಿವುದು ಕಡ್ಡಾಯಗೊಳಿಸುವಂತೆ ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ಆದೇಶ ನೀಡಬೇಕೆಂದು ಈ ಮನವಿಯಲ್ಲಿ ಒತ್ತಾಯಿಸಲಾಗಿದೆ ಎಂದು ಹೇಳಿದರು.