ತೆಲಂಗಾಣದಲ್ಲಿ ಹಿಂದೂ ಮಹಿಳೆಯರಿಗೆ ಪರೀಕ್ಷಾ ಕೇಂದ್ರದ ಪ್ರವೇಶಕ್ಕಾಗಿ’ ಮಂಗಳಸೂತ್ರ’ ತೆಗೆಯಲು ಹೇಳಲಾಯಿತು !

ಮುಸಲ್ಮಾನ ಮಹಿಳೆಯರು ಮಾತ್ರ ‘ಬುರ್ಖಾ’ ಸಹಿತ ಪ್ರವೇಶ

ಭಾಗ್ಯನಗರ – ತೆಲಂಗಾಣದಲ್ಲಿ ಒಂದು ಹೊಸ ವಾದ ಬೆಳಕಿಗೆ ಬಂದಿದೆ. ಇಲ್ಲಿಯ ಹಿಂದೂ ಮಹಿಳೆಯರಿಗೆ ಪರೀಕ್ಷಾ ಕೇಂದ್ರದ ಪ್ರವೇಶಕ್ಕಾಗಿ ‘ಮಂಗಳಸೂತ್ರ’ ತೆಗೆಯಲು ಹೇಳಲಾಗಿದೆ, ಹಾಗೂ ಮುಸಲ್ಮಾನ ಮಹಿಳೆಯರಿಗೆ ಬುರ್ಖಾಧರಿಸಿ ಪರೀಕ್ಷಾ ಕೇಂದ್ರದಲ್ಲಿ ಪ್ರವೇಶ ನೀಡಲಾಗಿದೆ. ಈ ಘಟನೆ ಅಕ್ಟೋಬರ್ ೧೬ ರಂದು ತೆಲಂಗಾಣ ರಾಜ್ಯದ ಸಾರ್ವಜನಿಕ ಸೇವಾ ಆಯೋಗದ ಪರೀಕ್ಷೆಯ ಸಮಯದಲ್ಲಿ ಆದಿಲಾಬಾದಿನ ಪದವಿ ಮಹಾವಿದ್ಯಾಲಯದಲ್ಲಿ ನಡೆದಿದೆ. ಈ ಘಟನೆಯ ವಿಡಿಯೋ ಕೂಡ ಟ್ವಿಟರ್ ನಲ್ಲಿ ಪ್ರಸಾರ ಮಾಡಲಾಗಿದೆ. (ಮಂಗಳಸೂತ್ರ ಧರಿಸಿರುವ ಹಿಂದೂ ಮಹಿಳೆಯಿಂದ ಪರೀಕ್ಷಾ ಕೇಂದ್ರದಲ್ಲಿ ಯಾವ ಅಡಚಣೆ ಇದೆ ಇದನ್ನು ಸ್ಪಷ್ಟ ಪಡಿಸದೆ ಕೇವಲ ಹಿಂದೂ ದ್ವೇಷಕ್ಕಾಗಿ ಈ ರೀತಿಯ ಕೃತಿ ಮಾಡಿ ಹಿಂದೂಗಳನ್ನು ಅವಮಾನಿಸುವ ತೆಲಂಗಾಣದಲ್ಲಿನ ಶಾಸಕರನ್ನು ಹಿಂದೂಗಳು ಕಾನೂನುರೀತ್ಯಾ ವಿರೋಧಿಸಬೇಕು ! – ಸಂಪಾದಕರು )

೧. ಕರ್ನಾಟಕದ ಶೈಕ್ಷಣಿಕ ಸಂಸ್ಥೆಗಳಲ್ಲಿ ಹಿಜಾಬದ (ಮುಸಲ್ಮಾನ ಮಹಿಳೆಯರು ತಲೆ ಮತ್ತು ಕತ್ತನ್ನು ಮುಚ್ಚಿಕೊಳ್ಳಲು ಉಪಯೋಗಿಸುವ ವಸ್ತ್ರ) ವಾದ ವಿವಾದದ ಮೇಲೆ ಸರ್ವೋಚ್ಚ ನ್ಯಾಯಾಲಯದಲ್ಲಿ ೨ ನ್ಯಾಯಾಧೀಶರು ಬೇರೆಬೇರೆ ತೀರ್ಪು ನೀಡಿರುವುದರಿಂದ ಈ ಪ್ರಕರಣದ ವಿಚಾರಣೆ ಒಂದು ದೊಡ್ಡ ಖಂಡ ಪೀಠ ಸ್ಥಾಪಿಸಲು ನಿರ್ಣಯಿಸಲಾಗಿದೆ.

೨. ಇದರ ನಂತರ ತೆಲಂಗಾಣದಲ್ಲಿ ಮತ್ತೊಮ್ಮೆ ಬುರ್ಖಾದ ವಾದ ಗರಿಗೆದರಿದೆ. ಅದಿಲಾಬಾದ ಇಲ್ಲಿಯ ಹಿಂದೂ ಮಹಿಳೆಯರಿಗೆ ಬಳೆ, ಕಿವಿ ಓಲೆ, ಕತ್ತಿನ ಚೈನು ಮತ್ತು ಮಂಗಳಸೂತ್ರ ಮುಂತಾದ ವಸ್ತುಗಳು ತೆಗೆಯಲು ಹೇಳಲಾಯಿತು. ಅದೇ ಸಮಯದಲ್ಲಿ ಮುಸಲ್ಮಾನ ಮಹಿಳೆಯರಿಗೆ ಬುರ್ಖಾ ಧರಿಸಿ ಪರೀಕ್ಷಾ ಕೇಂದ್ರಕ್ಕೆ ಪ್ರವೇಶ ನೀಡಲಾಯಿತು.

೩. ಭಾಜಪದ ನಾಯಕಿ ಪ್ರೀತಿ ಗಾಂಧಿ ಇವರು ಈ ವಿಷಯದ ವಿಡಿಯೋದ ಬಗ್ಗೆ ಮಾಹಿತಿ ನೀಡುವಾಗ ಇದು ತುಷ್ಟಿಕರಣದ ರಾಜಕಾರಣದ ಅತಿರೇಕ ಎಂದು ಹೇಳಲಾಗಿದೆ. ಅದರ ನಂತರ ರಾಜ್ಯದಲ್ಲಿನ ಇತರ ಭಾಜಪ ನಾಯಕರು ಕೂಡ ಟ್ವೀಟ್ ಮಾಡಿ ತೆಲಂಗಾಣ ರಾಷ್ಟ್ರ ಸಮಿತಿಯ ಸರಕಾರದ ಮೇಲೆ ಟೀಕೆ ಟಿಪ್ಪಣಿ ಮಾಡಿದ್ದಾರೆ ಮತ್ತು ಸರಕಾರ ಓಲೈಕೆಯ ರಾಜಕಾರಣ ಮಾಡುತ್ತಿದೆಯೆಂದು ಆರೋಪಿಸಿದ್ದಾರೆ.

ಸಂಪಾದಕೀಯ ನಿಲುವು

ಅಲ್ಪಸಂಖ್ಯಾತರನ್ನು ಒಲೈಸುವ ತೆಲಂಗಾಣ ರಾಷ್ಟ್ರ ಸಮಿತಿಯ ಸರಕಾರ ಯಾವ ರಾಜ್ಯದಲ್ಲಿ ಅಧಿಕಾರದಲ್ಲಿದೆಯೋ, ಅಲ್ಲಿ ಈ ರೀತಿಯ ಘಟನೆಗಳಾಗುವುದರಲ್ಲಿ ಆಶ್ಚರ್ಯವೇನು ಇಲ್ಲ ?