ನರಾಧಮ ‘ಲವ್-ಜಿಹಾದಿ’ಗಳನ್ನು ತಡೆಯಲು ರಾಜ್ಯದಲ್ಲಿ ಕಟ್ಟುನಿಟ್ಟಿನ ಮತ್ತು ಪ್ರತ್ಯೇಕ ಕಾನೂನು ರೂಪಿಸಿ !

ಲವ್ ಜಿಹಾದಿ ಅಫ್ತಾಬ್‌ಗೆ ಗಲ್ಲಿಗೇರಿಸಿ ! – ‘ರಣರಾಗಿಣಿ’ಯ ಆಗ್ರಹ

ಮುಂಬಯಿ – ಮುಂಬಯಿನ ಹಿಂದೂ ಯುವತಿ ಶ್ರದ್ಧಾ ವಾಲಕರ್ ಅನ್ನು ಪ್ರೀತಿಯ ಬಲೆಯಲ್ಲಿ ಸಿಲುಕಿಸಿ ‘ಲಿವ್-ಇನ್’ನಲ್ಲಿರಲು ಮತ್ತು ಮದುವೆಯ ಬಗ್ಗೆ ಕೇಳಿದಾಗ ಅವಳನ್ನು ಥಳಿಸಿ ಬರ್ಬರವಾಗಿ ಸಾಯಿಸಿದ ಲವ್-ಜಿಹಾದಿ ಆಫ್ತಾಬ್ ಈತ ಕ್ರೂರ, ನರಾಧಮನಾಗಿದ್ದಾನೆ. ಯಾರನ್ನು ಪ್ರೀತಿಸುತ್ತೇವೆಯೋ ಆ ವ್ಯಕ್ತಿಯನ್ನು ಯಾರೂ ಹೀಗೆ ಬರ್ಬರವಾಗಿ ಕೊಲ್ಲುವುದಿಲ್ಲ. ಹೀಗಾಗಿ ಈ ಕೊಲೆಯ ತನಿಖೆ ನಡೆಸುವಾಗ ಹತ್ಯೆಯ ಉದ್ದೇಶ ತಿಳಿಯಬೇಕಿದೆ. ಹಿಂದೂ ಯುವತಿಯರನ್ನು ಮೋಸ ಮಾಡಿ ಪ್ರೇಮದ ಬಲೆಗೆ ಬೀಳಿಸಿ ಮತಾಂತರಿಸುವುದು, ಅವರೊಂದಿಗೆ ‘ನಿಕಾಹ’ ಮಾಡುವುದು, ಅದಕ್ಕೆ ನಿರಾಕರಿಸಿದರೆ ಅತ್ಯಾಚಾರ ಮಾಡುವುದು, ಬ್ಲ್ಯಾಕ್‌ಮೇಲ್ ಮಾಡುವುದು, ಕೊಲ್ಲುವುದು ಇತ್ಯಾದಿ ಸಾವಿರಾರು ಗಂಭೀರ ಪ್ರಕರಣಗಳು ಈಗಾಗಲೇ ಬೆಳಕಿಗೆ ಬಂದಿವೆ. ಈ ಘಟನೆಗಳು ಈಗ ನಿತ್ಯದ್ದಾಗಿ ಬಿಟ್ಟಿದೆ. ನಮ್ಮ ಹೆಣ್ಣು ಮಕ್ಕಳನ್ನು ಅಪಹರಿಸಲು ಈ ನರಾಧಮರು ನಮ್ಮ ಮನೆಗಳಿಗೆ ತಲುಪಿದ್ದಾರೆ. ಹಿಂದೂ ಪೋಷಕರು ಮತ್ತು ಹಿಂದೂ ಯುವತಿಯರು ಎಚ್ಚರಗೊಳ್ಳುವುದು ಯಾವಾಗ ? ತಮ್ಮ ಒಡಹುಟ್ಟಿದವಳ ಪುನಃ ೩೫ ತುಂಡುಗಳಾಗಲು ಬಿಡುತ್ತೀರಾ ? ಈ ಘಟನೆಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯದಲ್ಲಿ ‘ಲವ್ ಜಿಹಾದ್ ವಿರೋಧಿ ಕಾಯ್ದೆ’ಯನ್ನು ಕೂಡಲೇ ಜಾರಿಗೊಳಿಸುವಂತೆ ಹಾಗೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಲವ್ ಜಿಹಾದಿ ಆಫ್ತಾಬ್‌ನನ್ನು ಕೂಡಲೇ ಗಲ್ಲಿಗೇರಿಸುವಂತೆ ಮುಖ್ಯಮಂತ್ರಿ ಮತ್ತು ಗೃಹ ಸಚಿವರನ್ನು ಒತ್ತಾಯಿಸುತ್ತಿದ್ದೇವೆ ಎಂದು ‘ರಣರಾಗಿಣಿ’ಯ ಡಾ.(ಸೌ.) ದೀಕ್ಷಾ ಪೆಂಡಭಾಜೆ ಹೇಳಿದ್ದಾರೆ.

ಈ ಘಟನೆಯನ್ನು ಖಂಡಿಸಲು ಮತ್ತು ಮೇಲಿನ ಬೇಡಿಕೆಗಳಿಗಾಗಿ ಹಿಂದೂ ಜನಜಾಗೃತಿ ಸಮಿತಿಯ ಮಹಿಳಾ ಶಾಖೆಯಾದ ‘ರಣರಾಗಿಣಿ’ಯ ವತಿಯಿಂದ ಮುಂಬಯಿನ ದಾದರ್ (ಪೂರ್ವ) ರೈಲು ನಿಲ್ದಾಣದ ಹೊರಗೆ ಪ್ರತಿಭಟನೆ ನಡೆಸಲಾಯಿತು. ಈ ಸಮಯದಲ್ಲಿ ಡಾ. ಪೆಂಡಭಾಜೆ ಮಾತನಾಡುತ್ತಿದ್ದರು. ಈ ಪ್ರತಿಭಟನೆಯಲ್ಲಿ ವಿವಿಧ ಹಿಂದೂ ಸಂಘಟನೆಗಳು ಭಾಗವಹಿಸಿದ್ದವು. ಈ ಸಂದರ್ಭದಲ್ಲಿ ‘ಅಬಲೆ ಅಲ್ಲ ನೀನು ಸಬಲೆಯಾಗು, ಚಂಡಿ, ದುರ್ಗಾ, ಕಾಳಿ ಆಗು !’, ‘ಲವ್ ಜಿಹಾದಿ ನರಾಧಮ ಅಫ್ತಾಬ್‌ಗೆ ಗಲ್ಲಿಗೇರಿಸಿ !’, ‘ಲವ್ ಜಿಹಾದ್‌ವಿರೋಧಿ ಕಾನೂನು ಜಾರಿಗೊಳಿಸಿ!’ ಎಂಬ ಘೋಷಣೆಗಳನ್ನು ನೀಡಲಾಯಿತು.