ದಕ್ಷಿಣ ಭಾರತದಲ್ಲಿ ಮೊಟ್ಟ ಮೊದಲ ‘ವಂದೇ ಭಾರತ ರೈಲಿ’ಗೆ ಪ್ರಧಾನಿಯವರಿಂದ ಹಸಿರು ನಿಶಾನೆ !

‘ಭಾರತ ಗೌರವ ಕಾಶಿ ದರ್ಶನ’ಕ್ಕೂ ಹಸಿರು ನಿಶಾನೆ !

ಬೆಂಗಳೂರು – ಪ್ರಧಾನಿ ನರೇಂದ್ರ ಮೋದಿಯವರು ದಕ್ಷಿಣ ಭಾರತದ ಎರಡು ದಿನದ ಪ್ರವಾಸ ಮಾಡುತ್ತಿದ್ದಾರೆ. ಅವರು ಬೆಂಗಳೂರು ರೈಲು ನಿಲ್ದಾಣದಲ್ಲಿ ಮೈಸೂರು-ಚೆನ್ನೈ ವಂದೇ ಭಾರತ ರೈಲನ್ನು ನವೆಂಬರ್ ೧೧ ರಂದು ಹಸಿರು ನಿಶಾನೆ ತೋರಿಸಿದರು. ಇದು ದೇಶದಲ್ಲಿನ ಐದನೆಯ ಮತ್ತು ದಕ್ಷಿಣ ಭಾರತದ ಮೊದಲನೆಯ ವಂದೇ ಭಾರತ ರೈಲಾಗಿದೆ. ಇದರ ನಂತರ ‘ಭಾರತ ಗೌರವ ಕಾಶಿ ದರ್ಶನ’ ರೈಲಿಗೂ ಕೂಡ ಮೋದಿಯವರು ಹಸಿರು ನಿಶಾನೆ ತೋರಿಸಿದರು. ಇದರ ನಂತರ ಪ್ರಧಾನಿಯವರು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ‘ಟರ್ಮಿನಲ್-೨’ ರ ಉದ್ಘಾಟನೆ ಕೂಡ ಮಾಡಿದರು. ಈ ಟರ್ಮಿನಲ್ ಸುಮಾರು ೫ ಸಾವಿರ ಕೋಟಿ ರೂಪಾಯಿ ಖರ್ಚು ಮಾಡಿ ಸಿದ್ಧಪಡಿಸಲಾಗಿದೆ. ಅವರು ಬೆಂಗಳೂರಿನಿಂದ ಮುಂದೆ ತಮಿಳುನಾಡುಗೆ ಪ್ರಯಾಣ ಮಾಡುವವರಿದ್ದಾರೆ. ಅಲ್ಲಿ ಅವರು ದಿಂಡಿಗೂಲ್ ಇಲ್ಲಿಯ ಗಾಂಧೀಗ್ರಾಮ ಗ್ರಾಮಿಣ ಸಂಸ್ಥೆಯ ೩೬ ನೇ ದೀಕ್ಷಾಂತ ಸಮಾರಂಭಕ್ಕೆ ಉಪಸ್ಥಿತರಾಗುವವರು.