‘ಓ.ಆರ್.ಎಸ್.’ ಜನಕ ಡಾ. ದಿಲೀಪ್ ಮಹಾಲೆನೋಬಿಸ್ ನಿಧನ

(ಓ.ಆರ್.ಎಸ್ ಎಂದರೆ ಓರಲ್ ರೀಹೈಡ್ರೇಶನ ಸೊಲ್ಯೂಶನ್ – ನೀರು, ಸಕ್ಕರೆ ಮತ್ತು ಉಪ್ಪು ಇವುಗಳ ಮಿಶ್ರಣ)

ಕೋಲಕತ್ತಾ (ಬಂಗಾಳ) – ಖ್ಯಾತ ಬಾಲರೋಗತಜ್ಞರಾದ. ಡಾ.ದಿಲೀಪ್ ಮಹಾಲನೋಬಿಸ್ ಇವರು ಇಲ್ಲಿನ ಒಂದು ಖಾಸಗಿ ಆಸ್ಪತ್ರೆಯಲ್ಲಿ ಅಕ್ಟೋಬರ್ ೧೭ ರಂದು ನಿಧನರಾದರು. ಅವರು ೮೮ ವರ್ಷದವರಾಗಿದ್ದರು. ಕಳೆದ ಕೆಲವು ದಿನಗಳಿಂದ ಅವರು ಔಷಧೋಪಚಾರ ಪಡೆಯುತ್ತಿದ್ದರು. ಡಾ. ದಿಲೀಪ್ ಮಹಾಲನೋಬಿಸ್ ಇವರು ೧೯೭೧ ರ ಬಾಂಗ್ಲಾದೇಶದ ಯುದ್ಧದ ಸಮಯದಲ್ಲಿ ಓ.ಆರ್.ಎಸ್. ಕಂಡು ಹಿಡಿದರು. ಈ ಯುದ್ಧದ ಸಮಯದಲ್ಲಿ ಸಾಂಕ್ರಾಮಿಕ ಕಾಲರಾ ರೋಗ ಹರಡಿತ್ತು. ಇಂತಹ ಸಂದರ್ಭದಲ್ಲಿ ಲಕ್ಷಾಂತರ ಜನರಿಗೆ ಓಆರ್.ಎಸ್. ನೀಡಿದ್ದರಿಂದ ಅವರ ಜೀವ ಉಳಿದಿತ್ತು. ಆ ಸಮಯದಲ್ಲಿ ಮರಣದರ ಶೇಕಡಾ ೩೦ ರಿಂದ ೩ ಕ್ಕೆ ಬಂದಿತ್ತು. ಇದರಿಂದ ಓಆರ್.ಎಸ್.ಗೆ ಜಾಗತಿಕ ಮಾನ್ಯತೆ ದೊರಕಿತ್ತು. ೨೦೦೨ ರಲ್ಲಿ ‘ಯುನಿವರ್ಸಿಟಿ ಆಫ್ ಕೋಲಂಬಿಯಾ ಮತ್ತು ಕಾರ್ನೆಲ್’ ಇದರ ವತಿಯಿಂದ ಪೊಲೀನ ಪ್ರಶಸ್ತಿ ನೀಡಿದರೆ, ೨೦೦೬ ರಲ್ಲಿ ಥೈಲ್ಯಾಂಡ್’ ಸರಕಾರವು ‘ಪ್ರಿನ್ಸ್ ಮಹಿಡೋಲ ಅವಾರ್ಡ್’ ನೀಡಿ ಗೌರವಿಸಿತು. ಆದರೆ ಭಾರತ ಸರ್ಕಾರ ಮಾತ್ರ ಯಾವುದೇ ಪ್ರಶಸ್ತಿ ನೀಡಲಿಲ್ಲ. (ಭಾರತದಲ್ಲಿ ಪ್ರತಿಭಾವಂತರರಿಗೆ ಬೆಲೆಯಿಲ್ಲ ಎಂದು ಹೇಳಿದರೆ ಆಶ್ಚರ್ಯ ಪಡಬೇಕಾಗಿಲ್ಲ. – ಸಂಪಾದಕರು)


ಡಾ. ಮಹಾಲನೋಬೀಸ್ ಇವರು ಕೋಲಕಾತಾದ ‘ಇನ್ಸಟಿಟ್ಯೂಟ ಆಫ ಚೈಲ್ಡ್ ಹೆಲ್ತ್’ಗೆ ತಮ್ಮ ಬಳಿಯ ೧ ಕೋಟಿ ರೂಪಾಯಿಯನ್ನು ದಾನ ಮಾಡಿದ್ದರು.