೧೦ ಸಾವಿರ ಹಿಂದೂಗಳ ಮೆರವಣಿಗೆಗೆ ಕಡಿಮೆ ಪ್ರಚಾರ; ಆದರೆ ಅದೇ ವಿಷಯದ ಪ್ರಗತಿಪರರ ವರದಿಗೆ ವ್ಯಾಪಕ ಪ್ರಚಾರ !
ಕೊಲ್ಲಾಪುರದ ಶಿವಾಜಿ ವಿಶ್ವವಿದ್ಯಾಲಯದ ಹೆಸರನ್ನು ‘ಛತ್ರಪತಿ ಶಿವಾಜಿ ಮಹಾರಾಜ ವಿಶ್ವವಿದ್ಯಾಲಯ’ ಎಂದು ಬದಲಾಯಿಸಲು ಹಿಂದೂ ಜನಜಾಗೃತಿ ಸಮಿತಿ ಮತ್ತು ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯ ನೇತೃತ್ವದಲ್ಲಿ ಮಾರ್ಚ್ ೧೭ ರಂದು ಕೊಲ್ಲಾಪುರದಲ್ಲಿ ಬೃಹತ್ ಮೆರವಣಿಗೆ ನಡೆಯಿತು. ಈ ಮೆರವಣಿಗೆಯಲ್ಲಿ ೧೦ ಸಾವಿರಕ್ಕೂ ಹೆಚ್ಚು ಹಿಂದೂತ್ವವಾದಿಗಳು ಭಾಗವಹಿಸಿದ್ದರು. ಈ ಮೆರವಣಿಗೆಗೂ ಮುನ್ನ ಪ್ರಗತಿಪರರು ಮತ್ತು ಕಮ್ಯುನಿಸ್ಟರು ಹೆಸರು ಬದಲಾವಣೆಯನ್ನು ವಿರೋಧಿಸಿ ಸಭೆಗಳನ್ನು ನಡೆಸಿದರು ಮತ್ತು ಜಿಲ್ಲಾಧಿಕಾರಿಗಳು ಮತ್ತು ಶಿವಾಜಿ ವಿಶ್ವವಿದ್ಯಾಲಯದ ಕುಲಪತಿಗಳಿಗೆ ಮನವಿ ಸಲ್ಲಿಸಿದರು. ಪ್ರಗತಿಪರರು ಮತ್ತು ಕಮ್ಯುನಿಸ್ಟ್ ಕಾರ್ಯಕರ್ತರು ಕಡಿಮೆ ಸಂಖ್ಯೆಯಲ್ಲಿದ್ದರೂ ಮಾಧ್ಯಮಗಳು ಈ ವರದಿಗೆ ವ್ಯಾಪಕ ಪ್ರಚಾರ ನೀಡಿದವು. ಇದಕ್ಕೆ ವಿರುದ್ಧವಾಗಿ, ಮಾರ್ಚ್ ೧೭ ರಂದು ಕೊಲ್ಲಾಪುರದಲ್ಲಿ ಹಿಂದೂತ್ವವಾದಿಗಳ ಮೆರವಣಿಗೆ ಆ ದಿನದ ನಗರದ ಪ್ರಮುಖ ಘಟನೆಯಾಗಿದ್ದರೂ ಕೆಲವು ಮಾಧ್ಯಮಗಳನ್ನು ಹೊರತುಪಡಿಸಿ ಅನೇಕ ಪತ್ರಿಕೆಗಳು ಈ ಸುದ್ದಿಯನ್ನು ಒಳಗಿನ ಪುಟಗಳಲ್ಲಿ ಪ್ರಕಟಿಸಿದವು.
ಮೆರವಣಿಗೆ ನಡೆದ ದಿನದಂದು ಹೆಸರು ಬದಲಾವಣೆಯನ್ನು ವಿರೋಧಿಸುವ ಕೆಲವು ಸಂಘಟನೆಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದವು, ಆದರೆ ಕೆಲವು ಸಂಘಟನೆಗಳು ಶಿವಾಜಿ ವಿಶ್ವವಿದ್ಯಾಲಯದಲ್ಲಿ ಪ್ರತಿಭಟನೆ ನಡೆಸಿದವು. ಇದಕ್ಕೂ ಬೆರಳೆಣಿಕೆಯಷ್ಟು ಜನರಿದ್ದರೂ ಹೋಲಿಸಿದರೆ ಅವರಿಗೆ ವರದಿಗಾಗಿ ಹೆಚ್ಚು ಸ್ಥಳಾವಕಾಶ ನೀಡಲಾಯಿತು. ಪ್ರಗತಿಪರರು ಹೇಗೆ ‘ನೆರೆಟಿವ್’ (ನಿರೂಪಣೆ) ಸೃಷ್ಟಿಸುತ್ತಾರೆ ಮತ್ತು ಪ್ರಗತಿಪರರ ‘ಇಕೋಸಿಸ್ಟಮ್’ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಇದು ತೋರಿಸುತ್ತದೆ.