Sanatan Prabhat Exclusive : ಮಹಾಕುಂಭಮೇಳಕ್ಕೆ ಅಗೌರವ ತೋರುವ ಪ್ರಸಾರ ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮಗಳ ದೊಡ್ಡ ವ್ಯವಸ್ಥೆ ಕಾರ್ಯನಿರತ !

ಶ್ರೀ. ಪ್ರೀತಮ ನಾಚಣಕರ, ಕುಂಭಮೇಳ

ಕುಂಭಮೇಳದಲ್ಲಿ ಅಪಾರ ಖ್ಯಾತಿ ಗಳಿಸಿದ ಹರ್ಷ ರಿಚಾರಿಯಾ, ಸನ್ಯಾಶಿ ಅಭಯ್ ಸಿಂಗ್ ಮತ್ತು ಮೊನಾಲಿಸಾ ಭೋಸಲೆ

ಪ್ರಯಾಗರಾಜ, ಜನವರಿ 25 (ಸುದ್ದಿ) – ನೈಜಸ್ಥಿತಿಯನ್ನು ತಿರುಚಿ ಮಹಾಕುಂಬ ಮೇಳಕ್ಕೆ ಅಗೌರವ ತೋರುವುದು, ಸಾಧನೆ ಮಾಡುತ್ತಿರುವ ಸಂತರ ವರದಿಯನ್ನು ಮಾಡದೇ ಜನಪ್ರಿಯತೆಯನ್ನು ಬಯಸುವ ತಥಾಕಥಿತ ಸಾಧುಗಳಿಗೆ ಪ್ರಸಿದ್ಧಿ ನೀಡುವುದು, ಬಿಸಿ ಬಿಸಿ ಸುದ್ಧಿಗಳನ್ನು ಪ್ರಸಾರ ಮಾಡಿ ಕುಂಭಮೇಳದ ಧಾರ್ಮಿಕ ಸ್ವರೂಪದಿಂದ ಗಮನವನ್ನು ಬೇರೆಡೆಗೆ ತಿರುಗಿಸುವುದು. ಈ ರೀತಿ ಹಿಂದೂಗಳ ಭವ್ಯ ಮೇಳದ ಅವಮಾನ ಮಾಡುವ ದೊಡ್ಡ ವ್ಯವಸ್ಥೆಗಳಾದ ಪ್ರಸಾರ ಮಾಧ್ಯಮಗಳು ಹಾಗೂ ಸೋಶಿಯಲ್ ಮೀಡಿಯಾಗಳು ಕಾರ್ಯನಿರ್ವಹಿಸುತ್ತಿವೆ. ‘ಎಕ್ಸ್’, ‘ಇನ್‌ಸ್ಟಾಗ್ರಾಂ’, ‘ಯುಟ್ಯೂಬ್’ ಇತ್ಯಾದಿಗಳಲ್ಲಿ ಕುಂಭಮೇಳವನ್ನು ಅವಹೇಳನ ಮಾಡುವ ಹಲವಾರು ಸಂದೇಶಗಳು ಮತ್ತು ವೀಡಿಯೊಗಳು ಪ್ರಸಾರವಾಗುತ್ತಿರುವ ರೀತಿ ನೋಡಿದರೆ, ಇದು ಯೋಜಿತ ಕೃತ್ಯ ಎಂಬುದು ದಟ್ಟವಾಗಿ ಗೋಚರಿಸುತ್ತಿದೆ.

1. ಕೆಲವು ದಿನಗಳ ಹಿಂದೆ, ಕುಂಭಮೇಳದ ಸೆಕ್ಟರ್ 19 ರಲ್ಲಿ ಕುಂಭಮೇಳವು ಮೂಢನಂಬಿಕೆ ಎಂದು ಬಹಿರಂಗವಾಗಿ ಪ್ರಸಾರ ಮಾಡುತ್ತಿದ್ದ ನಾಸ್ತಿಕರನ್ನು ನಾಗಾ ಸಾಧುಗಳು ಧರ್ಮದೇಟು ನೀಡಿದ್ದರು.
2. ಕುಂಭಮೇಳದ ಅವಮಾನ ಮಾಡಲು ಬಂದ ಈ ಗುಂಪುಗಳು ಬಹಿರಂಗವಾಗಿ ಕೆಲಸ ಮಾಡಲು ಸಾಧ್ಯವಾಗದ ಕಾರಣ, ಅವರೆಲ್ಲರೂ ತಮ್ಮ ಗುರುತುಗಳನ್ನು ಬಹಿರಂಗಪಡಿಸದೆ ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿದ್ದಾರೆ.
3. ಕುಂಭಮೇಳದ ಅಖಾಡಾಗಳಲ್ಲಿ ಕೆಲವು ‘ಯೂಟ್ಯೂಬ್’ ಚಾನೆಲ್ ನವರು ಕಂಡುಬರುತ್ತಿದ್ದಾರೆ. ಕುಂಭಮೇಳದಲ್ಲಿರುವ ಸಾಧುಗಳು ಹೇಗೆ ಮೋಸಗಾರರು ಎಂದು ತೋರಿಸಲು ಅವರು ಪ್ರಯತ್ನಿಸುತ್ತಿದ್ದಾರೆ.

‘ಕಾಟೇವಾಲೆ ಬಾಬಾ’ರವರ ವೀಡಿಯೊವನ್ನು ಮಾಡುತ್ತಿರುವ ಹುಡುಗಿ

4. ಕೆಲವು ದಿನಗಳ ಹಿಂದೆ, ಕುಂಭಮೇಳದಲ್ಲಿ ಮುಳ್ಳಿನ ಮೇಲೆ ಮಲಗುವ ‘ಕಾಟೇವಾಲೆ ಬಾಬಾ’ ಎಂದು ಕರೆಯಲ್ಪಡುವ ಸಾಧುವಿನ ವೀಡಿಯೊವನ್ನು ಮಾಡಲು ಪ್ರಯತ್ನಿಸುತ್ತಿರುವ ಹುಡುಗಿಯೊಬ್ಬಳ ವೀಡಿಯೊ ವೈರಲ್ ಆಗಿತ್ತು. ಈ ಹುಡುಗಿ ಕಾಟೇವಾಲೆ ಬಾಬಾ ಜೊತೆ ಅಸಭ್ಯವಾಗಿ ಮಾತನಾಡುತ್ತಿದ್ದ ರೀತಿ ನೋಡಿದರೆ ಅವಳು ಕುಂಭಮೇಳವನ್ನು ಅವಮಾನ ಮಾಡಲೆಂದೇ ಬಂದಿದ್ದಾಳೆ ಎಂದು ಅನಿಸುತ್ತಿತ್ತು.
5. ಕುಂಭಮೇಳಕ್ಕೆ ಕಾವಿಬಟ್ಟೆ ಧರಿಸಿ ಬಂದಿದ್ದ ಮಾಡೆಲಿಂಗ್ ಹರ್ಷ ರಿಚಾರಿಯಾ ಅವರಂತಹ ‘ಅತ್ಯಂತ ಸುಂದರ ಸಾಧ್ವಿ’ಯಂತಹ ವರದಿಗಳು, ಸನ್ಯಾಸಿ ಅಭಯ ಸಿಂಗ್ ಅವರನ್ನು ‘ಐಐಟಿ ಬಾಬಾ’ ಎಂದು ಕರೆಯುವ ಮೂಲಕ ಅವರಿಗೆ ನೀಡಿದ ಸಾರ ಇಲ್ಲದ ಪ್ರಚಾರ, ಜಪಮಾಲೆ ಮಾರುವ ಮೊನಾಲಿಸಾ ಭೋಸಲೆ ಹೆಸರಿನ ಸೌಂದರ್ಯ್ಯದ ವಾರ್ತೆಗಳು ಪ್ರಸಿದ್ಧವಾಗುವುದು ಇವೆಲ್ಲವೂ ಕುಂಭಮೇಳವನ್ನು ವ್ಯವಸ್ಥಿತವಾಗಿ ಅಪಖ್ಯಾತಿಗೊಳಿಸುವ ಪಿತೂರಿಯನ್ನು ಬಹಿರಂಗಪಡಿಸುತ್ತಿವೆ.