ಮಹಾಕುಂಭದ ಕುರಿತು ಸೋಶಿಯಲ್ ಮೀಡಿಯಾಗಳಲ್ಲಿ ಸುಳ್ಳು ಮಾಹಿತಿ ಪೋಸ್ಟ್ ಮಾಡುವವರ ವಿರುದ್ಧ ದೂರು ದಾಖಲು

ಪ್ರಯಾಗರಾಜ (ಉತ್ತರ ಪ್ರದೇಶ) – ಸಾಮಾಜಿಕ ಮಾಧ್ಯಮಗಳಿಂದ ಮಹಾಕುಂಭದ ಬಗ್ಗೆ ಸುಳ್ಳು ಪೋಸ್ಟ್ ಮಾಡಿದವರ ವಿರುದ್ಧ ಉತ್ತರ ಪ್ರದೇಶ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಸಾಮಾಜಿಕ ಮಾಧ್ಯಮಗಳ 7 ಖಾತೆಗಳ ವಿರುದ್ಧ ಅಪರಾಧಗಳನ್ನು ದಾಖಲಿಸಲಾಗಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಆದೇಶದ ಮೇರೆಗೆ, ಪೊಲೀಸ ಮಹಾನಿರ್ದೇಶಕ ಪ್ರಶಾಂತ ಕುಮಾರ ಅವರು ಸಾಮಾಜಿಕ ಮಾಧ್ಯಮದಲ್ಲಿ ಅಂತಹ ಖಾತೆಗಳನ್ನು ಗುರುತಿಸಿ ಅವುಗಳ ವಿರುದ್ಧ ಕ್ರಮ ಕೈಗೊಂಡಿದ್ದಾರೆ.

ಈ ಖಾತೆಗಳು 2021 ರಲ್ಲಿ ಗಾಝಿಪುರದ ನದಿಯ ದಡದಲ್ಲಿ ಪತ್ತೆಯಾದ ಶವಗಳ ಹಳೆಯ ವೀಡಿಯೊವನ್ನು ಮಹಾಕುಂಭದಲ್ಲಿ ಸಂಭವಿಸಿದ ಕಾಲ್ತುಳಿತದ ಶವಗಳು ಎಂದು ಹೇಳಿ ತಪ್ಪಾಗಿ ಪ್ರಚಾರ ಮಾಡಿವೆ. ಈ ಖಾತೆಗಳ ಮೇಲೆ ರಾಜ್ಯ ಸರಕಾರ ಮತ್ತು ಪೊಲೀಸರ ವರ್ಚಸ್ಸಿಗೆ ಕಳಂಕ ತರುವ ಮತ್ತು ಸಮಾಜದಲ್ಲಿ ಉದ್ವಿಗ್ನತೆಯನ್ನು ಉಂಟುಮಾಡುತ್ತವೆ’, ಎಂದು ಆರೋಪಿಸಲಾಗಿದೆ. ಈ ಸಂಬಂಧ ಪ್ರಯಾಗರಾಜ ಕುಂಭಮೇಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಕುಂಭಮೇಳ ಪೊಲೀಸರು ತಮ್ಮ ಅಧಿಕೃತ ಖಾತೆಗಳಲ್ಲಿ ಈ ವೀಡಿಯೊವನ್ನು ಖಂಡಿಸುವ ಪೋಸ್ಟ್ ಅನ್ನು ಮಾಡಿದ್ದಾರೆ. ಪೊಲೀಸರು ನಾಗರಿಕರಲ್ಲಿ ಯಾವುದೇ ಭ್ರಮೆಗೊಳಿಸುವ ಮಾಹಿತಿಗೆ ಗಮನ ಕೊಡಬೇಡಿ ಮತ್ತು ಅನುಮಾನಾಸ್ಪದ ಪೋಸ್ಟ್‌ಗಳನ್ನು ತಕ್ಷಣವೇ ಪೊಲೀಸರಿಗೆ ವರದಿ ಮಾಡುವಂತೆ ಮನವಿ ಮಾಡಿದ್ದಾರೆ.

ಅಪರಾಧ ದಾಖಲಾಗಿರುವ 7 ಖಾತೆಗಳು ಕೆಳಗಿನಂತಿದೆ :

1. Yadavking००००११ (@Yadavking००००११) – ಇನ್ಸ್ಟಾಗ್ರಾಮ್
2. Komal Yadav (@komalyadav_lalubadi९४) – ಇನ್ಸ್ಟಾಗ್ರಾಮ್
3. Amar Nath Yadav (amar_ydvkvp_५३५४_) – ಮೆಟಾ ಥ್ರೆಡ್
4. Banwari Lal – Bairwa (@B_L__VERMA) – ಎಕ್ಸ್
5. Kavita Kumari (@KavitaK२२६२८) – ಎಕ್ಸ್
6. Sonu Chaudhary (SonyChaudhary७०) – ಎಕ್ಸ್
7. Putul Kumar Kumar (@Puatulkumar९७९५)) – ಯುಟ್ಯೂಬ