‘ನನ್ನ ಕುಟುಂಬದ ವಿರುದ್ಧ ಮಾತನಾಡಿದರೆ, ಬೆತ್ತಲೆ ಮಾಡಿ ರಸ್ತೆಯಲ್ಲಿ ಹೊಡೆಯುತ್ತೇನೆ!’ – ತೆಲಂಗಾಣದ ಮುಖ್ಯಮಂತ್ರಿ ರೇವಂತ್ ರೆಡ್ಡಿ

  • ಕಾಂಗ್ರೆಸ್ ಆಡಳಿತದ ತೆಲಂಗಾಣದ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರ ಹೇಳಿಕೆ

  • ಕುಟುಂಬದ ಮಹಿಳೆಯರ ಬಗ್ಗೆ ಬಳಸಿದ ಭಾಷೆಯಿಂದ ರಕ್ತ ಕುದಿಯುತ್ತಿದೆ ಎಂದು ಹೇಳಿಕೆ

ಭಾಗ್ಯನಗರ (ತೆಲಂಗಾಣ) – ನನ್ನ ಕುಟುಂಬದ ವಿರುದ್ಧ ಏನಾದರೂ ಮಾತನಾಡಿದರೆ, ಬೆತ್ತಲೆ ಮಾಡಿ ರಸ್ತೆಯಲ್ಲಿ ಹೊಡೆಯುತ್ತೇನೆ ಎಂದು ಕಾಂಗ್ರೆಸ್ ಆಡಳಿತದ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ತಮ್ಮನ್ನು ಟೀಕಿಸುವವರಿಗೆ ಬೆದರಿಕೆ ಹಾಕಿದ್ದಾರೆ.

‘ಪಲ್ಸ್ ನ್ಯೂಸ್’ ಎಂಬ ಯೂಟ್ಯೂಬ್ ಚಾನೆಲ್ ನಡೆಸುವ ರೇವತಿ ಪೊಗಡಂಡ ಮತ್ತು ಅವರ ಸಹೋದ್ಯೋಗಿ ಸಂಧ್ಯಾ ಅಲಿಯಾಸ್ ತನ್ವಿ ಯಾದವ್ ಅವರು ಮುಖ್ಯಮಂತ್ರಿ ರೆಡ್ಡಿ ಮತ್ತು ಅವರ ಕುಟುಂಬದ ಬಗ್ಗೆ ಆಕ್ಷೇಪಾರ್ಹ ಪೋಸ್ಟ್ ಪ್ರಸಾರ ಮಾಡಿದ್ದರು. ಈ ಪ್ರಕರಣದಲ್ಲಿ ಪೊಲೀಸರು ಮಾರ್ಚ್ 10 ರಂದು ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿ ಮಾರ್ಚ್ 12 ರಂದು ಬಂಧಿಸಿದ್ದರು. ರಾಜ್ಯದ ಮುಖ್ಯ ವಿರೋಧ ಪಕ್ಷವಾದ ಬಿ.ಆರ್.ಎಸ್. ಪಕ್ಷದ (ಭಾರತ ರಾಷ್ಟ್ರ ಸಮಿತಿ ಪಕ್ಷ) ಕಚೇರಿಯಲ್ಲಿ ಈ ವಿಡಿಯೋ ಚಿತ್ರೀಕರಣ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕುಟುಂಬದ ಮೇಲೆ ಟೀಕೆಗಳಿಂದ ರೆಡ್ಡಿ ತೀವ್ರ ಆಕ್ರೋಶಗೊಂಡಿದ್ದಾರೆ.

ಮುಖ್ಯಮಂತ್ರಿ ರೆಡ್ಡಿ ಮಾತುಮುಂದುವರೆಸಿ,

1. ನನ್ನ ಮತ್ತು ನನ್ನ ಕುಟುಂಬದ ಸದಸ್ಯರ ಬಗ್ಗೆ ಅತ್ಯಂತ ಅವಹೇಳನಕಾರಿ ಭಾಷೆಯಲ್ಲಿ ಪೋಸ್ಟ್ ಮಾಡಲಾಗಿದೆ. ನನ್ನ ಕುಟುಂಬದ ಮಹಿಳೆಯರ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿನ ಈ ಪೋಸ್ಟ್‌ನಲ್ಲಿ ಬಳಸಲಾದ ಭಾಷೆಯಿಂದ ನನ್ನ ರಕ್ತ ಕುದಿಯುತ್ತಿದೆ.

2. ‘ನಾನು ಮುಖ್ಯಮಂತ್ರಿ ಎಂದು ಸುಮ್ಮನೆ ಕೂರುತ್ತೇನೆ’ ಎಂದು ತಿಳಿಯಬೇಡಿ. ನಾನು ನಿಮ್ಮನ್ನು ಬೆತ್ತಲೆ ಮಾಡಿ ಹೊಡೆಯುತ್ತೇನೆ. ನನ್ನ ಆದೇಶದಂತೆ ನಿಮ್ಮನ್ನು ಹೊಡೆಯಲು ಲಕ್ಷಾಂತರ ಜನರು ಬೀದಿಗಿಳಿಯುತ್ತಾರೆ. ನನ್ನ ಸ್ವಭಾವದಿಂದಾಗಿ ನಾನು ಸಹನೆಯಿಂದ ಇರುತ್ತೇನೆ. ಆದರೂ ನಾನು ಏನೇ ಮಾಡಿದರೂ ಕಾನೂನಿನ ವ್ಯಾಪ್ತಿಯಲ್ಲಿ ಮಾಡುತ್ತೇನೆ.

3. ನಾನು ಸಾರ್ವಜನಿಕ ಜೀವನದಲ್ಲಿ ಇರುವುದರಿಂದ ಟೀಕೆಗೆ ಸದಾ ಸಿದ್ಧನಿರುತ್ತೇನೆ; ಆದರೆ ನನ್ನ ಕುಟುಂಬದ ಸದಸ್ಯರನ್ನು ಏಕೆ ಗುರಿಯಾಗಿಸಲಾಗುತ್ತಿದೆ? ಪತ್ರಿಕೋದ್ಯಮದ ಹೆಸರಿನಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಅವಹೇಳನಕಾರಿ ವಿಷಯವನ್ನು ಹರಡುವ ದುಷ್ಕೃತ್ಯ ನಿಲ್ಲುವವರೆಗೂ ನಾನು ಸುಮ್ಮನೆ ಕೂರುವುದಿಲ್ಲ. ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ ಹರಡುವವರನ್ನು ಬಿಡುವುದಿಲ್ಲ.

ಯೂಟ್ಯೂಬ್ ಚಾನೆಲ್ ನಡೆಸುವವರನ್ನು ಪತ್ರಕರ್ತರೆಂದು ಪರಿಗಣಿಸಲಾಗುವುದಿಲ್ಲ!

ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ ಹರಡುವವರ ಮುಖವಾಡವನ್ನು ನಾವು ಜನರ ಮುಂದೆ ತರುತ್ತೇವೆ. ಯೂಟ್ಯೂಬ್ ಚಾನೆಲ್ ನಡೆಸುವವರನ್ನು ಪತ್ರಕರ್ತರೆಂದು ಪರಿಗಣಿಸಲಾಗುವುದಿಲ್ಲ. ನಾನು ನಮ್ಮ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಿ. ಶ್ರೀಧರ್ ಬಾಬು ಮತ್ತು ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಸಚಿವ ಪೊಂಗುಲೇಟಿ ಶ್ರೀನಿವಾಸ್ ರೆಡ್ಡಿ ಅವರಿಗೆ ಮಾನ್ಯತೆ ಪಡೆದ ಪತ್ರಕರ್ತರ ಪಟ್ಟಿಯನ್ನು ಸಿದ್ಧಪಡಿಸಲು ಆದೇಶಿಸಿದ್ದೇನೆ. ಈ ಪಟ್ಟಿಯಲ್ಲಿ ಹೆಸರಿಲ್ಲದವರು ಪತ್ರಕರ್ತರಲ್ಲ, ಅಪರಾಧಿಗಳು. ಅಪರಾಧಿಗಳಿಗೆ ನೀಡುವ ರೀತಿಯಲ್ಲಿಯೇ ಅವರಿಗೆ ಚಿಕಿತ್ಸೆ ನೀಡಲಾಗುವುದು’, ಎಂದು ಹೇಳಿದರು.

 

ಸಂಪಾದಕೀಯ ನಿಲುವು

  • ನಾಲಿಗೆ ಮೇಲೆ ನಿಯಂತ್ರಣವಿಲ್ಲದ ಮುಖ್ಯಮಂತ್ರಿ! ರಾಜ್ಯದ ಮುಖ್ಯಸ್ಥರೇ ಇಂತಹ ಭಾಷೆ ಬಳಸುವುದು ಅವರಲ್ಲಿ ಸುಸಂಸ್ಕಾರ ಇಲ್ಲದಿರುವುದು ತೋರಿಸುತ್ತದೆ!
  • ಮುಖ್ಯಮಂತ್ರಿಗಳು ತಮ್ಮ ಕುಟುಂಬದ ಮಹಿಳೆಯರ ಬಗ್ಗೆ ಮಾತ್ರವಲ್ಲ, ರಾಜ್ಯದ ಯಾವುದೇ ಮಹಿಳೆಯ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡುವವರ ವಿರುದ್ಧ ಅಥವಾ ಹಿಂದೂ ಹೆಣ್ಣುಮಕ್ಕಳ ವಿರುದ್ಧ ಲವ್ ಜಿಹಾದ್ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು!