2002 ರಲ್ಲಿ ನಡೆದಿದ್ದ ಗುಜರಾತ್ ಗಲಭೆಯ ಬಗ್ಗೆ ಪ್ರಧಾನಿ ಮೋದಿ ಇವರಿಂದ ಹೇಳಿಕೆ !
ನವದೆಹಲಿ – ಗುಜರಾತದಲ್ಲಿ ೨೦೦೨ ರಲ್ಲಿ ನಡೆದಿರುವ ಗಲಭೆ ಇಲ್ಲಿಯವರೆಗಿನ ದೊಡ್ಡ ಗಲಭೆ ಆಗಿತ್ತು, ಈ ಧೋರಣೆ ತಪ್ಪಾಗಿದೆ. ವಾಸ್ತವದಲ್ಲಿ ೨೦೦೨ ಹಿಂದೆ ಕೂಡ ಗುಜರಾತದಲ್ಲಿ ಧಾರ್ಮಿಕ ಗಲಭೆಗಳು ನಡೆದಿದ್ದವು. ಆದರು ಕೂಡ ೨೦೦೨ ರಂತೆ ಅವುಗಳು ಎಂದಿಗೂ ಅಂತರಾಷ್ಟ್ರೀಯ ಮಟ್ಟದ ವಾರ್ತೆಗಳು ಆಗಲಿಲ್ಲ. ಆಗ ನಮ್ಮ ಸರಕಾರವು ಸ್ಥಿರವಾಗಿಸಲು ಪ್ರಯತ್ನ ಮಾಡಿದೆವು; ಆದರು ಕೂಡ ರಾಜಕೀಯ ವಿರೋಧಿಗಳು ಮತ್ತು ಮಾಧ್ಯಮಗಳ ವಿಶಿಷ್ಟ ಗುಂಪಿನಿಂದ ನಮ್ಮ ಘನತೆಗೆ ಧಕ್ಕೆ ತರಲು ಪ್ರಯತ್ನ ಮಾಡಿದರು. ಸುಳ್ಳು ವದಂತಿಗಳು ಹಬ್ಬಿಸುವ ಪ್ರಯತ್ನವಾಯಿತು; ಆದರೆ ಕೊನೆಗೆ ನ್ಯಾಯಕ್ಕೆ ವಿಜಯ ದೊರೆಯಿತು ಮತ್ತು ನ್ಯಾಯಾಲಯದಿಂದ ನಾನು ಖುಲಾಸೆಗೊಂಡೆನು, ಎಂದು ಪ್ರಧಾನಮಂತ್ರಿ ಮೋದಿ ಇವರು ಒಂದು ಪ್ರಶ್ನೆಗೆ ಉತ್ತರಿಸಿದರು. ಅಮೇರಿಕಾದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇವರ ಜೊತೆಗೆ ಲೆಕ್ಸ್ ಫ್ರೀಡಮನ್ ನ ‘ಪಾಡ್ಕಾಸ್ಟ್’ (ವಿವಿಧ ವಿಷಯದ ಸಂಭಾಷಣೆ ರೆಕಾರ್ಡ ಮಾಡಿ ಪ್ರಸಾರ ಮಾಡುವುದು) ಪ್ರಸಾರವಾಯಿತು, ಪಾಡ್ಕಾಸ್ಟ್ ನಲ್ಲಿ ಪ್ರಧಾನಮಂತ್ರಿ ಇವರಿಗೆ ಗುಜರಾತ ಗಲಭೆಯ ಬಗ್ಗೆ ಕೇಳಿರುವ ಪ್ರಶ್ನೆಗೆ ಅವರು ಮೇಲಿನ ಉತ್ತರ ನೀಡಿದರು. ಈ ಪಾಡ್ಕಾಸ್ಟ್ ನಲ್ಲಿ ಪ್ರಧಾನಮಂತ್ರಿ ಮೋದಿ ಇವರು ಸುಮಾರು ೩ ಗಂಟೆಗಳ ಕಾಲ ಸಂವಾದ ನಡೆಸಿದರು. ಈ ಸಂಪೂರ್ಣ ಸಂದರ್ಶನದಲ್ಲಿ ಪ್ರಧಾನಮಂತ್ರಿ ಇವರ ಜೀವನದ ಪ್ರವಾಸದ ಸಹಿತ ದೇಶದಲ್ಲಿನ ವಿವಿಧ ವಿಷಯಗಳ ಬಗ್ಗೆ ಹೇಳಿಕೆ ನೀಡಿದರು. ಹಾಗೂ ಭಾರತ-ಚೀನಾ, ಭಾರತ-ಪಾಕಿಸ್ತಾನ ಇವುಗಳಲ್ಲಿನ ರಾಜಕೀಯ ಸಂಬಂಧದ ಬಗ್ಗೆ ಕೂಡ ಹೇಳಿದರು.’ಮೋದಿ ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ ಹೇಗೆ ಸಹಭಾಗಿಯಾದರು, ‘ಅವರ ಜೀವನದ ಮೇಲೆ ಸಂಘ ಏನು ಪ್ರಭಾವ ಬೀರಿದೆ ?’, ಇಂತಹ ಅನೇಕ ಪ್ರಶ್ನೆಗಳಿಗೆ ಪ್ರಧಾನಮಂತ್ರಿಗಳು ಈ ಸಂದರ್ಶನದಲ್ಲಿ ಉತ್ತರಿಸಿದರು.
ಪ್ರಧಾನಮಂತ್ರಿ ಇವರು, ಯಾರು ಗಲಭೆಯ ಕುರಿತು ನನ್ನನ್ನು ಟಿಕಿಸಿದ್ದರು, ಅವರಿಗೆ ೨೦೦೨ ರ ಹಿಂದಿನ ಗುಜರಾತ್‌ದ ಹಿಂಸಾಚಾರದ ಇತಿಹಾಸದ ಚಿಂತೆ ಇರಲಿಲ್ಲ. ಈ ಗಲಭೆಯ ನಂತರ ಆಗಿರುವ ಪರಿವರ್ತನೆಯಲ್ಲಿ ಕೂಡ ಅವರಿಗೆ ಆಸಕ್ತಿ ಇರಲಿಲ್ಲ. ಕೇವಲ ಅವರಿಗೆ ಅವರ ಧೋರಣೆಗಳಿಗೆ ಅನುಕೂಲವಾದಂತಹ ಕಥೆಯನ್ನು ಸಿದ್ಧಗೊಳಿಸುವುದಿತ್ತು. ನಿಜವೆಂದರೆ ಅನೇಕ ದಶಕಗಳಿಂದ ರಾಜಕಾರಣದಲ್ಲಿ ಮತಗಳಿಗಾಗಿ ಒಂದು ಗುಂಪು ಸಂತೋಷವಾಗಿರಿಸುವ ಪ್ರಯತ್ನ ಮಾಡಲಾಗುತ್ತಿದೆ; ಆದರೆ ನಾವು ಅದನ್ನು ಸಂಪೂರ್ಣವಾಗಿ ಬದಲಾಯಿಸಿದ್ದೇವೆ. ನಾವು ಮಹತ್ವಕಾಂಕ್ಷಿ ರಾಜಕಾರಣದ ಮೇಲೆ ಗಮನ ಕೇಂದ್ರೀಕರಿಸಿದ್ದೇವೆ. ೨೦೦೨ ನಂತರ ಗುಜರಾತದಲ್ಲಿ ಒಂದು ಕೂಡ ದೊಡ್ಡ ಗಲಭೆ ನಡೆದಿಲ್ಲ. ಈಗ ರಾಜ್ಯದಲ್ಲಿ ಶಾಶ್ವತವಾದ ಶಾಂತಿ ನೆಲೆಸಿದೆ, ಎಂದು ಹೇಳಿದರು.
ಟೀಕಿಸುವವರು ಯಾವಾಗಲೂ ಹತ್ತಿರ ಇರಬೇಕು !
ಟೀಕೆ ಪ್ರಜಾಪ್ರಭುತ್ವದ ಆತ್ಮ ಆಗಿದೆ. ನಮ್ಮ ಧರ್ಮ ಗ್ರಂಥಗಳಲ್ಲಿ, ‘ನಿಮ್ಮನ್ನು ಟೀಕಿಸುವವರನ್ನು ಯಾವಾಗಲೂ ಹತ್ತಿರ ಇರಿಸಿಕೊಳ್ಳಿ; ಕಾರಣ ಅವರು ನಿಮ್ಮನ್ನು ಸುಧಾರಿಸುವಲ್ಲಿ ಸಹಾಯ ಮಾಡುತ್ತಾರೆ.’ ಎಂದು ಹೇಳಿದೆ. ನಿಜವಾದ ಟೀಕೆ ಇದು ಸಂಶೋಧನೆ ಮತ್ತು ವಿಶ್ಲೇಷಣೆಯ ಮೇಲೆ ಆಧಾರಿತವಾಗಿರುತ್ತದೆ. ದೌರ್ಭಾಗ್ಯದಿಂದ ಪ್ರಸ್ತುತ ಮಾಧ್ಯಮಗಳು ಮತ್ತು ರಾಜಕೀಯ ವಿರೋಧಿಗಳು ಅನೇಕ ಬಾರಿ ‘ಶಾರ್ಟ್ ಕಟ್’ (ಹತ್ತಿರದ ಸುಲಭ ಮಾರ್ಗ) ಪಡೆಯುತ್ತಾರೆ. ವಿಚಾರ ಮಾಡಿ ಟೀಕೆ ಮಾಡುವ ಬದಲು ಆಧಾರ ರಹಿತ ಆರೋಪ ಮಾಡುತ್ತಾರೆ; ಆದರೆ ಈಗ ನೀವು ಗಲಭೆಯ ಬಗ್ಗೆ ಯಾವ ಆಧಾರ ನೀಡುತ್ತಿದ್ದೀರಿ, ಅದು ಆರೋಪವಾಗಿದೆ, ಅದು ಟಿಕೆ ಅಲ್ಲ, ಹೀಗೂ ಕೂಡ ಮೋದಿಯವರು ಈ ಸಮಯದಲ್ಲಿ ಹೇಳಿದರು.
https://twitter.com/SanatanPrabhat/status/1901613150061174838