Asaram Bapu Bail : 11 ವರ್ಷ 4 ತಿಂಗಳ ಬಳಿಕ, ಪೂಜ್ಯ ಸಂತ ಅಸಾರಾಂ ಬಾಪು ಇವರಿಗೆ ಜಾಮೀನು ಮಂಜೂರು

ಜೈಲಿನಿಂದ ಬಿಡುಗಡೆಯಾದ ನಂತರ, ಅವರು ಜೋಧಪುರದ ಆಶ್ರಮದಲ್ಲಿ ತಂಗುವರು

ಪೂಜ್ಯ ಸಂತ ಅಸಾರಾಂ ಬಾಪು

ಜೋಧಪುರ (ರಾಜಸ್ಥಾನ) – ಪೂಜ್ಯಪಾದ ಸಂತಶ್ರೀ ಅಸಾರಾಮಜಿ ಬಾಪು ಅವರನ್ನು ರಾಜಸ್ಥಾನ ಉಚ್ಚನ್ಯಾಯಾಲಯವು ತಥಾಕಥಿತ ಬಲಾತ್ಕಾರದ ಪ್ರಕರಣದಲ್ಲಿ ಮಧ್ಯಂತರ ಜಾಮೀನು ಮಂಜೂರು ಮಾಡಿದ ನಂತರ ಅವರನ್ನು ಜನವರಿ 14 ರ ತಡರಾತ್ರಿ ಜೈಲಿನಿಂದ ಬಿಡುಗಡೆ ಮಾಡಲಾಯಿತು. ಬಳಿಕ ಅವರು ಜೋಧಪುರದ ಪಾಲ ಗಾಗಾದಲ್ಲಿರುವ ತಮ್ಮ ಆಶ್ರಮದಲ್ಲಿ ವಾಸಿಸಲು ಹೋದರು. ಇಲ್ಲಿ ಸೇವಕರು ಪಟಾಕಿಗಳನ್ನು ಸಿಡಿಸಿ ಪೂ. ಬಾಪುರವರನ್ನು ಸ್ವಾಗತಿಸಿದರು. ಅವರಿಗೆ ಮಾರ್ಚ್ 31 ರವರೆಗೆ ಜಾಮೀನು ನೀಡಲಾಗಿದೆ. ಅದಾದ ನಂತರ ಅವರು ಮತ್ತೆ ಜೈಲಿಗೆ ಹೋಗುವ ಸಾಧ್ಯತೆ ಇದೆ.

ಪೂ. ಬಾಪು ಅವರ ಮೇಲೆ ಗುಜರಾತ್‌ನ ಗಾಂಧಿನಗರ ಮತ್ತು ರಾಜಸ್ಥಾನದ ಜೋಧಪುರದಲ್ಲಿ ತಥಾಕಥಿತ ಬಲಾತ್ಕಾರದ ಆರೋಪದ ಪ್ರಕರಣಗಳು ದಾಖಲಾಗಿವೆ. ಈ ಎರಡೂ ಪ್ರಕರಣಗಳಲ್ಲಿ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಗುಜರಾತ್‌ಗೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಜನವರಿ 7 ರಂದು ಸರ್ವೋಚ್ಚ ನ್ಯಾಯಾಲಯವು ಅವರಿಗೆ ಜಾಮೀನು ನೀಡಿತ್ತು. ತದನಂತರ, ಜನವರಿ 14 ರಂದು ಜೋಧಪುರ ಪ್ರಕರಣವನ್ನು ಉಚ್ಚನ್ಯಾಯಾಲಯವು ಸಹ ಅನುಮೋದಿಸಿತು. ಸುಮಾರು 11 ವರ್ಷ, 4 ತಿಂಗಳು ಮತ್ತು 12 ದಿನಗಳ ನಂತರ ಅವರು ಜೈಲಿನಿಂದ ಬಿಡುಗಡೆಯಾದರು. ಇದಕ್ಕೂ ಮೊದಲು, ಅವರನ್ನು ವೈದ್ಯಕೀಯ ಚಿಕಿತ್ಸೆಗಾಗಿ ಹೊರಗೆ ಹೋಗಲು ಬಿಡಲಾಗಿತ್ತು.

3 ಷರತ್ತುಗಳ ಮೇರೆಗೆ ಜಾಮೀನು

ನ್ಯಾಯಾಲಯಗಳು ಜಾಮೀನು ನೀಡುವಾಗ, ಪೂ. ಬಾಪು ಅವರಿಗೆ 3 ಷರತ್ತುಗಳನ್ನು ಹಾಕಿದ್ದಾರೆ. ಇದರಲ್ಲಿ ಪೂ. ಬಾಪು ತಮ್ಮ ಅನುಯಾಯಿಗಳನ್ನು ಭೇಟಿಯಾಗಲು ಸಾಧ್ಯವಿಲ್ಲ. ಸಾಧಕರನ್ನು ಗುಂಪುಗಳಲ್ಲಿ ಭೇಟಿಯಾಗಲು ಸಾಧ್ಯವಾಗುವುದಿಲ್ಲ. ಅವರು ಪ್ರಸಾರಮಾಧ್ಯಮಗಳೊಂದಿಗೆ ಮಾತನಾಡಲು ಅಥವಾ ಸಾರ್ವಜನಿಕವಾಗಿ ಪ್ರವಚನವನ್ನು ನೀಡಲು ಸಾಧ್ಯವಿಲ್ಲ. ಅವರೊಂದಿಗೆ ಯಾವಾಗಲೂ 3 ಭದ್ರತಾ ಸಿಬ್ಬಂದಿ ಇರುತ್ತಾರೆ ಮತ್ತು ಅವರ ವೆಚ್ಚಗಳನ್ನು ಪೂ. ಬಾಪು ಅವರು ಭರಿಸಬೇಕಾಗುವುದು.

ಪೂ. ಬಾಪು ಅವರಿಗೆ ದೇಶದ ಯಾವುದೇ ಆಶ್ರಮದಲ್ಲಿ ಉಳಿಯಲು ಅನುಮತಿ ನೀಡಲಾಗಿದೆ. ಆಸ್ಪತ್ರೆಗೆ ಅಥವಾ ಆಶ್ರಮದಲ್ಲಿ ಚಿಕಿತ್ಸೆ ಪಡೆಯಲು ಅನುಮತಿ ನೀಡಲಾಗಿದೆ.