‘ಗೂಗಲ್’ಗೆ ನೋಟಿಸ್ ಜಾರಿ ಮಾಡಿ ಛೀಮಾರಿ ಹಾಕಿದ ದೆಹಲಿ ಹೈಕೋರ್ಟ್ !

  • ‘ಗೂಗಲ್’ ಸನಾತನ ಸಂಸ್ಥೆಯ 5 ಆಪ್‌ಗಳನ್ನು ಅನ್ಯಾಯವಾಗಿ ಅಮಾನತುಗೊಳಿಸಿದ ಪ್ರಕರಣ

  • ಯಾವ ಆಧಾರದ ಮೇಲೆ ಅಮಾನತು ಮಾಡಲಾಗಿದೆ?, ಉತ್ತರ ಕೇಳಿದೆ !

ನವದೆಹಲಿ – ಸನಾತನ ಸಂಸ್ಥೆ ಮತ್ತು ಅದಕ್ಕೆ ಸಂಬಂಧಿಸಿದ ‘ಮೊಬೈಲ್ ಅಪ್ಲಿಕೇಶನ್‌’ಗಳ ಮೇಲಿನ ಹಠಾತ್ ನಿಷೇಧದ ಕುರಿತು ಜನವರಿ 10 ರಂದು ದೆಹಲಿ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯಿತು. ಈ ಸಮಯದಲ್ಲಿ, ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಶ್ರೀಧರ್ ಪೋತರಾಜು ಇವರು ನ್ಯಾಯಮೂರ್ತಿ ಸಚಿನ್ ದತ್ತಾ ಅವರಿಗೆ, ‘ಗೂಗಲ್ ಯಾವುದೇ ಪೂರ್ವ ಸೂಚನೆ ನೀಡದೆ ಅರ್ಜಿದಾರರ 5 ಅಪ್ಲಿಕೇಶನ್‌ಗಳನ್ನು ಅಮಾನತುಗೊಳಿಸಿದೆ’, ಎಂದು ಗಮನಕ್ಕೆ ತಂದುಕೊಟ್ಟರು. ಇದರ ಬಗ್ಗೆ ನ್ಯಾಯಮೂರ್ತಿ ದತ್ತಾ ಇವರು ಗೂಗಲ್‌ಗೆ ಛೀಮಾರಿ ಹಾಕುತ್ತಾ, “ಯಾವಾಗ ಅಪ್ಲಿಕೇಶನ್‌ಗಳನ್ನು ಸ್ಥಗಿತಗೊಳಿಸಲಾಗಿತ್ತು?” ಎಂದು ಕೇಳಿದರು. ಆ್ಯಪ್‌ಗಳನ್ನು ಅಮಾನತುಗೊಳಿಸುವ ಮೊದಲು ಅರ್ಜಿದಾರರಿಗೆ ಯಾವುದೇ ಪೂರ್ವ ಸೂಚನೆ ನೀಡಲಾಗಿದೆಯೇ?’ ನ್ಯಾಯಾಧೀಶರು ನಿರ್ದಿಷ್ಟವಾಗಿ ಪ್ರಮುಖ ಘಟನೆಗಳ ಸಂಗತಿಗಳು ಮತ್ತು ದಿನಾಂಕಗಳ ಬಗ್ಗೆ ಕೇಳಿದರು; ಆದರೆ ಗೂಗಲ್‌ನ ವಕೀಲರು ಸರಿಯಾದ ಉತ್ತರ ನೀಡುವುದನ್ನು ತಪ್ಪಿಸುತ್ತಿರುವುದು ಗಮನಕ್ಕೆ ಬಂದಿತು. ಈ ಸಮಯದಲ್ಲಿ, ನ್ಯಾಯಾಧೀಶರು, ‘ನಾನು ನಿಮಗೆ ಮೂರನೇ ಬಾರಿಗೆ ಅದೇ ಪ್ರಶ್ನೆಯನ್ನು ಕೇಳುತ್ತಿದ್ದೇನೆ; ಆದರೆ ನೀವು ನನ್ನ ಪ್ರಶ್ನೆಗೆ ಉತ್ತರಿಸುವುದನ್ನು ತಪ್ಪಿಸುತ್ತಿದ್ದೀರಿ, ಎಂದು ಕಿಡಿ ಕಾರಿದರು. ಈ ಸಮಯದಲ್ಲಿ, ನ್ಯಾಯಾಧೀಶರು Google ಗೆ, ‘ಆ್ಯಪ್ ಅಮಾನತುಗೊಳಿಸುವಿಕೆಗೆ ಸಂಬಂಧಿಸಿದಂತೆ Google ನ ನೀತಿಗಳನ್ನು ತೋರಿಸಿ’ ಎಂದು ಕೇಳಿದರು. ಅಲ್ಲದೆ, Google ನ ನೀತಿಗಳನ್ನು ಉಲ್ಲಂಘಿಸುವ ನಿರ್ದಿಷ್ಟ ವಿಷಯವನ್ನು ಅಪ್ಲಿಕೇಶನ್‌ಗಳಲ್ಲಿ ತೋರಿಸಿ!’ ಎಂದು ಅದು ಸೂಚನೆ ನೀಡಿದೆ. ಈ ವಿಷಯದಲ್ಲಿ ಅವರು ಗೂಗಲ್ ಹಾಗೂ ಕೇಂದ್ರ ಸರಕಾರಕ್ಕೆ ನೋಟಿಸ್ ಜಾರಿ ಮಾಡಿದ್ದಾರೆ. ಈ ಪ್ರಕರಣದ ಮುಂದಿನ ವಿಚಾರಣೆ ಮಾರ್ಚ್ 18 ರಂದು ನಡೆಯಲಿದೆ.

1. ವಿಚಾರಣೆಯ ಆರಂಭದಲ್ಲಿ, ಹಿರಿಯ ವಕೀಲ ಶ್ರೀಧರ್ ಪೋತರಾಜು ಇವರು, ‘ಗೂಗಲ್ ಯಾವುದೇ ಪೂರ್ವ ಸೂಚನೆ ನೀಡದೆ ಅರ್ಜಿದಾರರ (ಸನಾತನ ಸಂಸ್ಥೆ) 5 ಅಪ್ಲಿಕೇಶನ್‌ಗಳನ್ನು ಅಮಾನತುಗೊಳಿಸಿದೆ, ಇದು ‘ಐಟಿ ನಿಯಮ 2021′ ರ ಉಲ್ಲಂಘನೆಯಾಗಿದೆ’, ಎಂದು ವಾದಿಸಿದರು.

2. ಈ ಬಗ್ಗೆ ಗೂಗಲ್‌ನ ವಕೀಲರು ಮಧ್ಯಪ್ರವೇಶಿಸಿ, ಸನಾತನ ಸಂಸ್ಥೆಯ ಮುಂಬಯಿ ಹೈಕೋರ್ಟ್‌ನಲ್ಲಿ ಇದೇ ರೀತಿಯ ಅರ್ಜಿಯನ್ನು ಸಲ್ಲಿಸಿತ್ತು, ಆದರೆ ಅದನ್ನು ವಜಾಗೊಳಿಸಲಾಗಿತ್ತು. ಎಂದು ಅವರು ದಾವೆ ಮಾಡಿದರು. ಇದಕ್ಕೆ ಪ್ರತ್ಯುತ್ತರ ನೀಡಿದ ವಕೀಲ ಪೋತರಾಜು ಮತ್ತು ವಕೀಲೆ ಅಮಿತಾ ಸಚ್‌ದೇವ ಅವರು, ಮುಂಬಯಿ ಹೈಕೋರ್ಟ್‌ನಲ್ಲಿನ ಅರ್ಜಿಯು ಗೂಗಲ್ ವಿರುದ್ಧವಲ್ಲ, ಫೇಸ್‌ಬುಕ್ ವಿರುದ್ಧವಾಗಿತ್ತು. ಹಾಗೂ ಸರಕಾರವು ‘ಐಟಿ ನಿಯಮ, 2021’ ಅನ್ನು ಪ್ರಕಟಿಸುವ ಮೊದಲು ಇದನ್ನು ನಮೂದಿಸಲಾಗಿತ್ತು ಎಂದು ಸ್ಪಷ್ಟಪಡಿಸಿದರು.

3. ಈ ಕುರಿತು ನ್ಯಾಯಮೂರ್ತಿ ದತ್ತಾ ಅವರು, ಮುಂಬಯಿ ಹೈಕೋರ್ಟ್‌ನಲ್ಲಿರುವ ಅರ್ಜಿಯ ವ್ಯಾಪ್ತಿಯು ಸಧ್ಯದ ಅರ್ಜಿಗೆ ಸಂಪೂರ್ಣವಾಗಿ ಭಿನ್ನವಾಗಿದೆ ಮತ್ತು ಪ್ರಸ್ತುತ ಅರ್ಜಿಗೆ ಅಪ್ರಸ್ತುತವಾಗಿದೆ ಎಂದು ಸ್ಪಷ್ಟಪಡಿಸಿದರು.

4. ಬಳಿಕ ವಕೀಲ ಪೋತರಾಜು ಅವರು ಸನಾತನ ಸಂಸ್ಥೆಯ ಎಲ್ಲಾ ಆ್ಯಪ್‌ಗಳ ಉದ್ದೇಶ ಮತ್ತು ವಿಷಯದ ಬಗ್ಗೆ ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.

5. ಈ ಸಮಯದಲ್ಲಿ ಗೂಗಲ್‌ನ ವಕೀಲರು ಗೂಗಲ್‌ನ ನೀತಿಯನ್ನು ಓದಿದರು; ಆದರೆ ಅವರು ಸನಾತನ ಸಂಸ್ಥೆ ಅಪ್ಲಿಕೇಶನ್ ‘ಹಿಂಸಾಚಾರ’ ಅಥವಾ ‘ಭಯೋತ್ಪಾದನೆ’ಯನ್ನು ಉತ್ತೇಜಿಸುತ್ತದೆ, ಎಂಬ ಯಾವುದೇ ಮಾಹಿತಿಯನ್ನು ಒದಗಿಸಲು ವಿಫಲರಾದರು.

6. ವಕೀಲ ಪೋತರಾಜು ಇವರು, 2021 ರ ಐಟಿ ಕಾಯ್ದೆಯ ನಿಯಮಗಳು 4(8)(ಅ) ಮತ್ತು (ಬ) ಗಳನ್ನು ಉಲ್ಲೇಖಿಸಿ ಗೂಗಲ್‌ನ ಮತ್ತಷ್ಟು ಬಾಧ್ಯತೆಯ ಬಗ್ಗೆ ಒತ್ತಿ ಹೇಳಿದರು, ಇದರಲ್ಲಿ ‘ಪೂರ್ವ ಸೂಚನೆ ನೀಡುವುದು’ ಮತ್ತು ‘ಅರ್ಜಿದಾರರಿಗೆ ತನ್ನ ವಾದವನ್ನು ಮಂಡಿಸಲು ಅವಕಾಶ ನೀಡುವುದು’ ಸೇರಿವೆ. ಇದಕ್ಕಾಗಿ ನ್ಯಾಯಮೂರ್ತಿ ದತ್ತಾ ಗೂಗಲ್ ವಕೀಲರನ್ನು ಖಂಡಿಸಿದರು. ಅವರು, ಅರ್ಜಿದಾರರಿಗೆ ನೀಡಿದ ಉತ್ತರವು ‘ಮನಬಂದಂತೆ’ ಮತ್ತು ‘ವಿವರಗಳ ಕೊರತೆ’ ಯಿಂದ ಕೂಡಿತ್ತು’, ಎಂದು ಹೇಳಿದರು.

7. ಈ ಸಮಯದಲ್ಲಿ ಕೇಂದ್ರ ಸರಕಾರ ತನ್ನ ನಿಲುವನ್ನು ಮಂಡಿಸುತ್ತಾ, ಅರ್ಜಿದಾರರು ‘ದೂರುಗಳ ಮೇಲ್ಮನವಿ ಸಮಿತಿ’ಗೆ ದೂರು ಸಲ್ಲಿಸಬೇಕು. ನ್ಯಾಯಾಧೀಶರು ಈ ಸಲಹೆಯನ್ನು ಪ್ರಶ್ನಿಸಿದರು. ಅವರು, ‘ಯಾರ ಆದೇಶದ ವಿರುದ್ಧ ನಾನು ಮೇಲ್ಮನವಿ ಸಲ್ಲಿಸಬೇಕು?’ ಎಂದು ಕೇಳಿದರು. ಇದಕ್ಕೆ, ವಕೀಲ ಪೋತರಾಜು ಅವರು, ದೂರು ಅಧಿಕಾರಿಯ ಆದೇಶದ ವಿರುದ್ಧವಾಗಿದ್ದರೇ ಹಾಗೂ ಗೂಗಲ್ ಇಲ್ಲಿಯವರೆಗೆ ಯಾವುದೇ ದೂರು ಅಧಿಕಾರಿಯನ್ನು ಹೊಂದಿಲ್ಲ ಎಂಬುದು ಸ್ಪಷ್ಟ ಪಡಿಸಿದರು. ವಕೀಲ ಪೋತರಾಜು ಇವರು, ಅರ್ಜಿದಾರರು ಗೂಗಲ್‌ಗೆ ಮೇಲ್ಮನವಿ ಪತ್ರವನ್ನು ಕಳುಹಿಸಿದ್ದರು ಮತ್ತು ಸಚಿವಾಲಯಕ್ಕೆ ವಿವರವಾದ ಮನವಿಯನ್ನು ಸಲ್ಲಿಸಿದ್ದರು; ಆದರೆ ಅರ್ಜಿದಾರರಿಗೆ ಯಾರಿಂದಲೂ ಉತ್ತರ ಸಿಗಲಿಲ್ಲ, ಎಂಬುದು ಗಮನಕ್ಕೆ ತಂದುಕೊಟ್ಟರು.

8. ಈ ಸಮಯದಲ್ಲಿ, ನ್ಯಾಯಾಧೀಶರು ಗೂಗಲ್ ವಕೀಲರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಅವರು ‘ಗೂಗಲ್ ಪ್ರಶ್ನೆಗಳನ್ನು ತಪ್ಪಿಸುತ್ತಿದೆ ಮತ್ತು ನೇರ ಉತ್ತರಗಳನ್ನು ನೀಡುತ್ತಿಲ್ಲ!’, ಎಂದು ಹಲವಾರು ಬಾರಿ ಹೇಳಿದ್ದರು.

9. ನ್ಯಾಯಮೂರ್ತಿ ದತ್ತಾ ಅವರು ಗೂಗಲ್ ಮತ್ತು ಭಾರತ ಸರಕಾರಕ್ಕೆ ನೋಟಿಸ್ ಜಾರಿ ಮಾಡಿ ಅರ್ಜಿಯ ಕುರಿತು ಅಫಿಡವಿಟ್ ಸಲ್ಲಿಸುವಂತೆ ಸೂಚಿಸಿದರು.

೨೦೨೩ ರಲ್ಲಿ, ಗೂಗಲ್ ಸನಾತನ ಸಂಸ್ಥೆಯ ೫ ಆಪ್ ಗಳನ್ನು ನಿಷೇಧಿಸಿತ್ತು !
2023 ರಲ್ಲಿ, ಗೂಗಲ್ ‘ಸನಾತನ ಸಂಸ್ಥೆ’, ‘ಸನಾತನ ಚೈತನ್ಯವಾಣಿ’, ‘ಸರ್ವೈವಲ್ ಗೈಡ್’, ‘ಗಣೇಶ್ ಪೂಜಾ ವಿಧಿ’ ಮತ್ತು ‘ಶ್ರದ್ಧಾ ವಿಧಿ’ ಈ 5 ಆಪ್‌ಗಳನ್ನು ನಿಷೇಧಿಸಿತ್ತು. ಅಲ್ಲದೆ, ಈ ಕ್ರಮಕ್ಕೆ ‘ಸನಾತನ ಸಂಸ್ಥೆಯು ನಾಗರಿಕರ ಮೇಲಿನ ಹಿಂಸಾಚಾರಕ್ಕೆ ಸಂಬಂಧಿಸಿದೆ’ ಎಂದು ಕಾರಣ ನೀಡಿತ್ತು.