ಮಥುರೆಯ ಶ್ರೀಕೃಷ್ಣಜನ್ಮಭೂಮಿಯಲ್ಲಿಯೂ ಸಮೀಕ್ಷೆ ಮತ್ತು ಚಿತ್ರೀಕರಣಕ್ಕೆ ನ್ಯಾಯಾಲಯದಲ್ಲಿ ಬೇಡಿಕೆ

ಕಾಶಿಯ ಜ್ಞಾನವಾಪಿ ಮಸೀದಿಯಂತೆಯೇ ಮಥುರೆಯ ಶ್ರೀಕೃಷ್ಣಜನ್ಮಭೂಮಿಯಲ್ಲಿನ ಶಾಹಿ ಈದ್ಗಾ ಮಸೀದಿಯ ಸಮೀಕ್ಷೆ ಮತ್ತು ಚಿತ್ರೀಕರಣವನ್ನೂ ಮಾಡಬೇಕು ಎಂದು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿದೆ. ಈ ಸಮಯದಲ್ಲಿ ಜ್ಞಾನವಾಪಿ ಮಸೀದಿಯ ಸಮೀಕ್ಷೆಯ ಕುರಿತು ಎಲ್ಲಾ ದಾಖಲೆಗಳನ್ನು ಸಾದರಪಡಿಸಲಾಗಿದೆ. ಈ ಅರ್ಜಿಯನ್ನು ನ್ಯಾಯವಾದಿ ಮಹೇಂದ್ರ ಪ್ರತಾಪರವರು ಸಲ್ಲಿಸಿದ್ದಾರೆ.

ಶ್ರೀಕೃಷ್ಣ ಜನ್ಮಭೂಮಿ ಪ್ರಕರಣದಲ್ಲಿ ಮೆ. ೧೯ ರಂದು ತೀರ್ಪು !

ಶ್ರೀಕೃಷ್ಣ ಜನ್ಮಭೂಮಿ ಮತ್ತು ಶಾಹಿ ಈದ್ಗಾ ಮಸೀದಿಗೆ ಸಂಬಂಧಿಸಿದ ಮೊಕದ್ದಮೆಯ ಮೇಲೆ ಬರುವ ಮೆ ೧೯ ರಂದು ನ್ಯಾಯಾಲಯ ತೀರ್ಪು ನೀಡಲಿದೆ. ಕಟರಾ ಕೇಶವ ದೇವ ಮಂದಿರದ ದೇವತೆ ಶ್ರೀಕೃಷ್ಣ ವಿರಾಜಮಾನ ಮತ್ತು ಅನ್ಯ ೬ ಜನರು ರಂಜನಾ ಅಗ್ನಿಹೋತ್ರಿ ಇವರ ಮೂಲಕ ದಾಖಲಿಸಿರುವ ಮನವಿಯ ಮೇಲೆ ತೀರ್ಪು ನೀಡುವರು.

ಅಯೋಧ್ಯೆ ಮತ್ತು ಕಾಶಿಯ ನಂತರ ಈಗ ಮಥುರಾವೂ ಆವಶ್ಯಕ ! – ಭಾಜಪದ ಸಂಸದೆ ಹೇಮಾಮಾಲಿನಿ

ಮಥುರಾದಲ್ಲಿ ಒಂದು ದೇವಸ್ಥಾನ ಮೊದಲೇ ಇದೆ ಮತ್ತು ಅದಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಜೀರ್ಣೋದ್ಧಾರ ಮಾಡಿರುವ `ಕಾಶಿವಿಶ್ವನಾಥ ಧಾಮ’ದಂತೆ ಹೊಸ ಸ್ವರೂಪ ನೀಡಬಹುದು, ಎಂದು ನನಗೆ ಹೇಳುವುದಿದೆ, ಹೀಗೆಂದು ನಟಿ ಮತ್ತು ಭಾಜಪದ ಸಂಸದೆ ಹೇಮಾಮಾಲಿನಿ ಇವರು ಇಲ್ಲಿ ಪತ್ರಕರ್ತರ ಜೊತೆ ಮಾತನಾಡುವಾಗ ಹೇಳಿದರು

ಶ್ರೀಕೃಷ್ಣನ ಜನ್ಮಭೂಮಿಯಲ್ಲಿ ಆರತಿ ಮಾಡಲು ಅನುಮತಿ ನಿರಾಕರಣೆ!

ಅಖಿಲ ಭಾರತ ಹಿಂದೂ ಮಹಾಸಭೆಯು ಇಲ್ಲಿಯ ಶ್ರೀಕೃಷ್ಣ ಜನ್ಮಭೂಮಿಯಲ್ಲಿ ಇರುವ ಈದ್ಗಾ ಪರಿಸರದಲ್ಲಿ ಡಿಸೆಂಬರ್ ೧೦ ರಂದು ಭಗವಾನ್ ಶ್ರೀಕೃಷ್ಣನಿಗೆ ಆರತಿ ಮಾಡಲು ಜಿಲ್ಲಾಧಿಕಾರಿಗಳಲ್ಲಿ ಅನುಮತಿ ಕೇಳಿತ್ತು. ಆದರೆ ಸರಕಾರವು ಅದನ್ನು ನಿರಾಕರಿಸಿದೆ.

ಭಗವಾನ ಶ್ರೀಕೃಷ್ಣನ ದೇವಸ್ಥಾನ ಮಥುರಾದಲ್ಲಿ ಕಟ್ಟದೇ ಇನ್ನೇನು ಲಾಹೋರಿನಲ್ಲಿ ಕಟ್ಟುವರೇ ? – ಉತ್ತರಪ್ರದೇಶದ ಹೈನುಗಾರಿಕೆ ಅಭಿವೃದ್ಧಿ ಸಚಿವೆ ಚೌಧರಿ ಲಕ್ಷ್ಮೀನಾರಾಯಣ

ಕೆಲವು ದಿನಗಳ ಹಿಂದೆ ರಾಜ್ಯದ ಉಪಮುಖ್ಯಮಂತ್ರಿ ಕೇಶವ ಪ್ರಸಾದ ಮೌರ್ಯ ಮತ್ತು ಇತರ ಸಚಿವರು ಮಥುರಾದಲ್ಲಿ ಶ್ರೀಕೃಷ್ಣ ಜನ್ಮಭೂಮಿಯಲ್ಲಿನ ಈದ್ಗಾ ಮಸೀದಿಯ ಮೇಲೆ ಶ್ರೀಕೃಷ್ಣ ಮಂದಿರ ನಿರ್ಮಿಸುವ ಬಗ್ಗೆ ಹೇಳಿಕೆ ನೀಡಿದ್ದರು. ಅದಕ್ಕಾಗಿ ಪತ್ರಕರ್ತರು ಕೇಳಿರುವ ಪ್ರಶ್ನೆಗೆ ಚೌಧರಿ ಲಕ್ಷ್ಮೀನಾರಾಯಣ್ ಇವರು ಈ ಮೇಲಿನ ಉತ್ತರ ನೀಡಿದರು.

ಮಥುರಾದಲ್ಲಿ ಆಡಳಿತದಿಂದ ಕಪ್ರ್ಯೂ (ಸಂಚಾರ ನಿಷೇಧ) ಜಾರಿ

ಶ್ರೀಕೃಷ್ಣ ಜನ್ಮಭೂಮಿಯಲ್ಲಿನ ಈದ್ಗಾ ಮಸೀದಿಯಲ್ಲಿ ಡಿಸೆಂಬರ್ 6 ರಂದು ಶ್ರೀಕೃಷ್ಣನ ಮೂರ್ತಿ ಸ್ಥಾಪಿಸಿ ಅಭಿಷೇಕ ಮಾಡುವುದೆಂಬ ಹಿಂದೂ ಮಹಾಸಭೆಯ ಘೋಷಣೆಯ ಪರಿಣಾಮ

ಶ್ರಿಕೃಷ್ಣಜನ್ಮಭೂಮಿಯ ಈದ್ಗಾ ಮಸೀದಿಯಲ್ಲಿ ನಡೆಯುವ ನಮಾಜುಪಠಣವನ್ನು ನಿಲ್ಲಿಸಿ !

ಕಳೆದ ಕೆಲವು ದಿನಗಳಿಂದ ಇಲ್ಲಿ ದಿನದಲ್ಲಿ 5 ಸಾರಿ ನಮಾಜುಪಠಣ ಮಾಡಲಾಗುತ್ತಿದೆ. ಹೀಗೆ ಮಾಡಿ ಇಲ್ಲಿಯ ಸೌಹಾರ್ದ ವಾತಾವರಣವನ್ನು ಉದ್ದೇಶಪೂರ್ವಕವಾಗಿ ಹಾಳು ಮಾಡಲಾಗುತ್ತಿದೆ. ಆದಕಾರಣ ಇಲ್ಲಿ ನಡೆಯುವ ನಮಾಜುಪಠಣ ನಿಲ್ಲಿಸಬೇಕೆಂದು `ಶ್ರೀಕೃಷ್ಣಜನ್ಮಭೂಮಿ ಮುಕ್ತಿ ಆಂದೋಲನ ಸಮಿತಿ’ಯ ಅಧ್ಯಕ್ಷ ನ್ಯಾಯವಾದಿ ಮಹೇಂದ್ರ ಪ್ರತಾಪ ಸಿಂಹ ಇವರು ಜಿಲ್ಲಾಧಿಕಾರಿಗೆ ಮನವಿ ನೀಡಿದರು

ಮಥುರೆಯ ಶ್ರೀಕೃಷ್ಣ ಜನ್ಮಸ್ಥಾಳದ ಸುತ್ತಲಿನ 10 ಚದರ ಕಿಲೋಮೀಟರ ಪರಿಧಿಯ ಜಾಗಕ್ಕೆ ‘ತೀರ್ಥಕ್ಷೇತ್ರ’ ಎಂದು ಘೋಷಣೆ !

ಮಾಂಸ ಮತ್ತು ಮದ್ಯ ಮಾರಾಟಕ್ಕೆ ನಿಷೇಧ