ಶ್ರೀ ಕೃಷ್ಣಜನ್ಮಾಷ್ಠಮಿಯೊಳಗೆ ಶ್ರೀಕೃಷ್ಣಜನ್ಮಭೂಮಿ ಮೇಲಿನ ಈದ್ಗಾಹ್ ಮಸೀದಿಯ ಪರಿಸರ ಮುಚ್ಚಬೇಕು!

ಅಖಿಲ ಭಾರತ ಹಿಂದೂ ಮಹಾಸಭೆಯ ಅಧ್ಯಕ್ಷೆ ಮತ್ತು ನೇತಾಜಿ ಬೋಸ್ ಇವರ ಮರಿಮೋಮ್ಮಗಳು ರಾಜಶ್ರೀ ಚೌಧರಿ ಬೋಸ ಇವರ ಬೇಡಿಕೆ

ಹೊಸದೆಹಲಿ – ಅಖಿಲ ಭಾರತ ಹಿಂದೂ ಮಹಾಸಭೆಯ ಅಧ್ಯಕ್ಷೆ ರಾಜಶ್ರೀ ಚೌಧರಿ ಬೋಸ ಇವರು ಮಥುರೆಯ ಶ್ರೀ ಕೃಷ್ಣ ಜನ್ಮಭೂಮಿ ಪರಿಸರದಲ್ಲಿ ಶಾಹಿ ಈದ್ಗಾಹ್ ಮಸೀದಿಯ ಪರಿಸರ ಬರುವ ಶ್ರೀಕೃಷ್ಣ ಜನ್ಮಾಷ್ಟಮಿಯ ಮೊದಲು ಮುಚ್ಚಬೇಕು ಎಂದು ಒತ್ತಾಯಿಸಿದ್ದಾರೆ. (ಎಲ್ಲಿಯವರೆಗೆ ಶ್ರೀ ಕೃಷ್ಣಜನ್ಮಭೂಮಿ ಹಿಂದೂಗಳಿಗೆ ಸಿಗುವುದಿಲ್ಲ, ಅಲ್ಲಿಯವರೆಗೆ ಈ ರೀತಿಯ ಬೇಡಿಕೆ ಸಲ್ಲಿಸಲಾಗುತ್ತಿರುವುದು. ಈ ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ಅದರ ತೀರ್ಪು ಬೇಗನೆ ಪಡೆಯಲು ಕೇಂದ್ರ ಸರಕಾರ ಪ್ರಯತ್ನ ಮಾಡಬೇಕೆಂದು ಹಿಂದೂಗಳಿಗೆ ಅನಿಸುತ್ತದೆ! – ಸಂಪಾದಕರು) ಈ ರೀತಿ ಆಗದೆ ಇದ್ದರೆ ಅಲ್ಲಿ ಹನುಮಾನ ಚಾಲಿಸಾದ ಪಠಣ ಮಾಡಲಾಗುವುದು, ಎಂದು ಎಚ್ಚರಿಕೆ ನೀಡಲಾಗಿದೆ.

ರಾಜಶ್ರೀ ಚೌಧರಿ ಬೋಸ್ ಇವರು ನೇತಾಜಿ ಸುಭಾಷ್ ಚಂದ್ರ ಬೋಸ್ ಇವರ ಮರಿಮೊಮ್ಮಗಳ. ಇಲ್ಲಿಯ ೧೩.೩೭ ಎಕರೆ ಭೂಮಿಯ ಒಡೆತನದ ಅಧಿಕಾರದ ಬಗ್ಗೆ ನ್ಯಾಯಾಲಯದಲ್ಲಿ ಮೊಕದ್ದಮೆ ನಡೆಯುತ್ತಿದೆ. ರಾಜಶ್ರೀ ಬೋಸ್ ಚೌಧರಿ ಇವರು, ಈ ವಿಷಯದಲ್ಲಿ ನಾವು ನ್ಯಾಯಾಲಯಕ್ಕೆ ಹೋಗಿದ್ದೇವೆ ಆದರೆ ಇಲ್ಲಿಯವರೆಗೆ ಯಾವುದೇ ಆದೇಶ ನೀಡಲಾಗಿಲ್ಲ ಎಂದು ಹೇಳಿದರು.