ಅಖಿಲ ಭಾರತೀಯ ಹಿಂದೂ ಮಹಾಸಭೆಯ ರಾಷ್ಟ್ರೀಯ ಖಜಾಂಚಿ ದಿನೇಶ ಶರ್ಮ ಇವರು ರಕ್ತದಿಂದ ಪತ್ರ ಬರೆದು ಯೋಗಿ ಆದಿತ್ಯನಾಥರಲ್ಲಿ ಒತ್ತಾಯ
ಮಥೂರ (ಉತ್ತರಪ್ರದೇಶ) – ಇಲ್ಲಿಯ ಶ್ರೀಕೃಷ್ಣಜನ್ಮಭೂಮಿಯಲ್ಲಿನ ಶಾಹಿ ಈದಗಾಹ ಮಸೀದಿಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ದಿನದಂದು ಭಗವಾನ ಶ್ರೀ ಕೃಷ್ಣನ ಪೂಜೆ ಮಾಡಲು ಅನುಮತಿ ನೀಡಬೇಕೆಂದು ಅಖಿಲ ಭಾರತೀಯ ಹಿಂದೂ ಮಹಾ ಸಭೆಯ ರಾಷ್ಟ್ರೀಯ ಖಜಾಂಚಿ ದಿನೇಶ ವರ್ಮ ಇವರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರಿಗೆ ತಮ್ಮ ರಕ್ತದಿಂದ ಬರೆದಿರುವ ಪತ್ರದ ಮೂಲಕ ಓತ್ತಾಯಿಸಿದ್ದಾರೆ. ಇವರಿಗೆ ಜನ್ಮಸ್ಥಳವಲ್ಲದ ಸ್ಥಳದಲ್ಲಿ ಶ್ರೀ ಕೃಷ್ಣನ ಪೂಜೆ ಮಾಡಲಾಗಿದೆ. ಶ್ರೀ ಕೃಷ್ಣಜನ್ಮ ಭೂಮಿಯಲ್ಲಿ ಪೂಜೆಗೆ ಅನುಮತಿ ನಿರಾಕರಿಸಿದರೇ ಬದುಕು ವ್ಯರ್ಥವಾಗಿದೆ. ನನಗೆ ಸಾಯಲು ಅನುಮತಿ ನೀಡಿ’, ಎಂದು ಶರ್ಮಾ ಅವರು ಪತ್ರದಲ್ಲಿ ಒತ್ತಾಯಿಸಿದ್ದಾರೆ.
An Akhil Bharat Hindu Mahasabha member wrote a letter in blood to CM Yogi Adityanath.#News #UttarPradesh https://t.co/MubTRDkwqk
— IndiaToday (@IndiaToday) August 17, 2022
೧. ಯೋಗಿ ಆದಿತ್ಯನಾಥ ಇವರು ಹನುಮಂತನ ಅವತಾರವೆಂದು ದಿನೇಶ ಶರ್ಮಾ ಇವರು ಹೇಳಿದರು.
೨. ‘ಮಸೀದಿಯಲ್ಲಿ ಶ್ರೀ ಕೃಷ್ಣನ ಪೂಜೆ ಮಾಡಲು ಯೋಗಿ ಆದಿತ್ಯನಾಥರವರು ಅನುಮತಿ ನೀಡುವರು’, ಎಂಬ ವಿಶ್ವಾಸವನ್ನೂ ಶರ್ಮಾ ಅವರು ವ್ಯಕ್ತಪಡಿಸಿದ್ದಾರೆ.
೩. ಈ ಮೊದಲು ಶ್ರೀ ಕೃಷ್ಣಜನ್ಮ ಭೂಮಿ ಸಂದರ್ಭದಲ್ಲಿ ನ್ಯಾಯಾಲಯದಲ್ಲಿ ಅನೇಕ ಅರ್ಜಿಗಳನ್ನು ದಾಖಲಿಸಲಾಗಿದೆ. ‘ಕೇಶವ ದೇವ ದೇವಸ್ಥಾನ ಜಾಗದಲ್ಲಿರುವ ಶಾಹಿ ಈದಗಾಹ ಮಸೀದಿ ಕಟ್ಟಲಾಗಿದ್ದು ಅದನ್ನು ತೆರವುಗೊಳಿಸಬೇಕು’, ಎಂದು ಹಿಂದೂ ಅರ್ಜಿದಾರರು ನ್ಯಾಯಾಲಯದಲ್ಲಿ ಒತ್ತಾಯಿಸಿದ್ದಾರೆ. ಮುಸಲ್ಮಾನ ಪಕ್ಷದವರು ಈ ಅರ್ಜಿಗೆ ವಿರೋಧಿಸಿದ್ದಾರೆ.
೪. ಶರ್ಮಾ ಇವರು ವರಿಷ್ಠ ಇಲಾಖೆಯ ದಿವಾನಿ ನ್ಯಾಯಾಲಯದ ನ್ಯಾಯಾಧೀಶರಾದ ಜ್ಯೋತಿ ಸಿಂಹ ಇವರಿಗೆ ಮೇ ೧೮ ರಂದು ವಿನಂತಿ ಮನವಿ ಸಲ್ಲಿಸಿ ಶಾಹಿ ಈದಗಾಹ ಮಸೀದಿಯಲ್ಲಿ ಬಾಲಕೃಷ್ಣನಿಗೆ ಅಭಿಷೇಕ ಮಾಡಲು ಅನುಮತಿ ಕೋರಿದ್ದರು.