ಶ್ರೀಕೃಷ್ಣಜನ್ಮಭೂಮಿಯಲ್ಲಿರುವ ಶಾಹಿ ಈದ್ಗಾ ಮಸೀದಿಯ ಧ್ವನಿವರ್ಧಕವನ್ನು ಬಂದ್ ಮಾಡಿ ! – ಸಿವಿಲ್ ನ್ಯಾಯಾಲಯದಲ್ಲಿ ಅರ್ಜಿ

ಮಥುರಾ (ಉತ್ತರ ಪ್ರದೇಶ) – ಇಲ್ಲಿನ ಶ್ರೀಕೃಷ್ಣಜನ್ಮಭೂಮಿಯಲ್ಲಿರುವ ಶಾಹಿ ಈದ್ಗಾ ಮಸೀದಿಗೆ ಸಂಬಂಧಿಸಿದಂತೆ ಸಿವಿಲ್ ನ್ಯಾಯಾಲಯದಲ್ಲಿ ಹೊಸ ಅರ್ಜಿಯನ್ನು ಸಲ್ಲಿಸಲಾಗಿದೆ. ಇದರಲ್ಲಿ ಈ ಮಸೀದಿಯು ಕೇಶವದೇವರ ದೇಗುಲದ ಗರ್ಭಗುಡಿಯಾಗಿದ್ದು, ಮುಂಜಾನೆ ೪.೩೦ಕ್ಕೆ ಧ್ವನಿವರ್ಧಕದಿಂದ ಹಾಕುವ ಆಝಾನ್ ಅನ್ನು ನಿಷೇಧಿಸಬೇಕು ಹಾಗೂ ಜಾಗದ ಸಮೀಕ್ಷೆ ಮಾಡಬೇಕು ಎಂದು ಆಗ್ರಹಿಸಲಾಗಿದೆ.

ಜೊತೆಗೆ ಈ ಭೂಮಿ ಹಿಂದೂಗಳದ್ದಾಗಿರುವ ಬಗ್ಗೆ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಜುಲೈ ೧ ರಂದು ಪ್ರಕರಣದ ವಿಚಾರಣೆ ನಡೆಯಲಿದೆ.