ಪೂರ್ಣಾವತಾರ ಮತ್ತು ಭಕ್ತವತ್ಸಲನಾದ ಶ್ರೀಕೃಷ್ಣನ ವೈಶಿಷ್ಟ್ಯಗಳು ಮತ್ತು ಚರಿತ್ರೆ !

೧೮ ಆಗಸ್ಟ್ ೨೦೨೨ ರಂದು ‘ಶ್ರೀಕೃಷ್ಣ ಜಯಂತಿ’ (ಗೋಕುಲಾಷ್ಠಮಿ) ಇದೆ. ಆ ನಿಮಿತ್ತ …

ಆಧ್ಯಾತ್ಮಿಕ ಲೇಖನದ ಮಹತ್ವ

ಶ್ರೀಕೃಷ್ಣನು ಭಗವದ್ಗೀತೆಯನ್ನು ಹೇಳಿದನು. ಹಾಗಾಗಿ ಎಲ್ಲ ದೇವರಲ್ಲಿ ಅವರ ಹೆಸರು ಮೊದಲಿಗೆ ಬರುತ್ತದೆ. – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಯಾವ ಶ್ರೀಕೃಷ್ಣನಲ್ಲಿ ಸಂಪೂರ್ಣ ಸಮರ್ಪಣೆ ಆಗಲಿಕ್ಕಿದೆಯೋ ಅಂತಹವನನ್ನು ಸಂಪೂರ್ಣ ಅರಿತುಕೊಳ್ಳುವುದು ಆವಶ್ಯಕ !

(ಪರಾತ್ಪರ ಗುರು) ಪರಶರಾಮ ಪಾಂಡೆ ಮಹಾರಾಜರು

‘ಸಮರ್ಪಣೆ ಭಾವದಲ್ಲಿ ತುಂಬಾ ಶಕ್ತಿ ಇದೆ’, ಎಂಬುದು ಆಗಾಗ ಕಂಡುಬರುತ್ತದೆ. ಭಗವದ್ಗೀತೆಯಲ್ಲಿ ಭಗವಂತನು, ‘ನೀನು ನನಗೆ ಎಲ್ಲವನ್ನು ಸಮರ್ಪಣೆ ಮಾಡು ಮತ್ತು ನಿಶ್ಚಿಂತ ಮನಸ್ಸಿನಿಂದ ವರ್ತಮಾನಕಾಲದಲ್ಲಿ ನನ್ನ ಅನುಸಂಧಾನದಲ್ಲಿ ಈಶ್ವರೀ ಕಾರ್ಯವೆಂದು ಕಾರ್ಯವನ್ನು ಮಾಡುತ್ತಿರು’, ಎಂದು ಹೇಳುತ್ತಾನೆ. ಸಮರ್ಪಣೆಯ ಪ್ರಕ್ರಿಯೆಯು ಇಷ್ಟೊಂದು ಸಹಜ ಮತ್ತು ಸುಲಭವಿಲ್ಲ. ಶ್ರೀಕೃಷ್ಣನ ಮೇಲೆ ಭಾರವನ್ನು ಹಾಕುವುದು, ಸಮರ್ಪಣೆಯನ್ನು ಮಾಡುವುದು, ಅವನನ್ನು ಪೂರ್ಣವಾಗಿ ತಿಳಿದುಕೊಳ್ಳುವುದು, ಅವನು ನಮ್ಮ ಮನಸ್ಸಿನಲ್ಲಿ ಮೂರ್ತರೂಪದಲ್ಲಿ ಮೂಡುವುದು, ಅವನ ಮೇಲೆ ಪೂರ್ತಿ ಆತ್ಮವಿಶ್ವಾಸದಿಂದಿರುವುದು ಆವಶ್ಯಕವಿದೆ.

೧. ಋಷಿಗಳು ತಪಶ್ಚರ್ಯ ಮಾಡಿದ್ದರಿಂದ ಅವರಿಗೆ ರಾಮನ ದರ್ಶನವಾಗುವುದು; ಆದರೆ ಅವರಿಗೆ ರಸಸ್ವಾದನ ಆಗದಿರುವುದರಿಂದ ಅದನ್ನು ಪಡೆಯುವುದಕ್ಕಾಗಿ ಅವರು ರಾಮನಲ್ಲಿ ಬೇಡಿಕೊಳ್ಳುವುದು ಮತ್ತು ರಾಮನು ಕೃಷ್ಣಜನ್ಮದಲ್ಲಿ ಗೋಪಿಯಾದ ನಂತರ ಆನಂದ ಸಿಗುವುದೆಂದು ಅವರಿಗೆ ಹೇಳುವುದು

ಸಮರ್ಪಣೆ ಮಾಡಿದ ನಂತರವೂ ಸ್ವಲ್ಪ ಅಹಂಕಾರವು ಉಳಿದಿರುತ್ತದೆ. ಆದುದರಿಂದ ಜೀವನದಲ್ಲಿನ ಪರಮೋಚ್ಚವಾಗಿರುವ ಆತ್ಮಿಕ ಸುಖವು ಸಿಗುವುದಿಲ್ಲ. ರಾಮಜನ್ಮದಲ್ಲಿ ಋಷಿಗಳು ತಪಶ್ಚರ್ಯವನ್ನು ಮಾಡಿ ತಮ್ಮ ದೇಹವನ್ನು ನಿಸ್ತೇಜ ಮಾಡಿಕೊಂಡರು. ಅವರಿಗೆ ರಾಮನ ದರ್ಶನವಾಯಿತು. ಅವರಿಗೆ ‘ಇವನು ಭಗವಂತನಾಗಿರುವನು’, ಎಂದು ತಿಳಿದರೂ ಅವರ ಸಾತ್ತ್ವಿಕ ಭಾವವು ಜಾಗೃತವಾಗಲಿಲ್ಲ. ಅವರಿಗೆ ರಸಸ್ವಾದವು ಸಿಗಲಿಲ್ಲ. ಅಗ ಅವರು ರಾಮನಿಗೆ, “ನಮಗೆ ಆನಂದದ, ಮಧುರ ಭಾವದ ಆಸ್ವಾದನೆ ಬೇಕಾಗಿದೆ,” ಎಂದು ಬೇಡಿದರು. ಆಗ ರಾಮನು, ”ಕೃಷ್ಣಜನ್ಮದಲ್ಲಿ ನೀವು ಗೋಪಿಯಾದ ನಂತರ ನಿಮಗೆ ಆನಂದ ಸಿಗುವುದು,” ಎಂದು ಹೇಳಿದನು.

೨. ಋಷಿಗಳು ಗೋಪಿರೂಪದಲ್ಲಿ ಜನ್ಮತಾಳಿದ ನಂತರ ಶ್ರೀಕೃಷ್ಣನು ವಸ್ತ್ರಹರಣ ಮಾಡಿ ಅವರಲ್ಲಿನ ಸೂಕ್ಷ್ಮ ಅಹಂಕಾರವನ್ನು ನಶಿಸಿ ಅವರಲ್ಲಿ ತನ್ನ ನಿಜವಾದ ಆತ್ಮಸ್ವರೂಪವನ್ನು ಪ್ರಕಟಿಸುವುದು ಮತ್ತು ರಾಸಕ್ರೀಡೆಯಿಂದ ಮಧುರಭಾವದ ಆಸ್ವಾದನೆಯನ್ನು ನೀಡುವುದು

ಅದರಂತೆ ಆ ಋಷಿಗಳು ಗೋಪಿಸ್ವರೂಪದಲ್ಲಿ ಜನಿಸಿದರು; ಆದರೆ ಅವರಿಗೆ ‘ನಾವು ಜ್ಞಾನಿ ಋಷಿಗಳಿದ್ದೇವೆ’, ಎಂಬ ಜ್ಞಾನವಿರುವುದರಿಂದ ಶ್ರೀಕೃಷ್ಣನಿಗೆ ಅವರ ವಸ್ತ್ರಹರಣ ಮಾಡಿ ಅವರಲ್ಲಿನ ಸೂಕ್ಷ್ಮ ಅಹಂಕಾರವನ್ನು ಇಲ್ಲದಂತೆ ಮಾಡಿ ಅವರಲ್ಲಿ ತನ್ನ ನಿಜವಾದ ಆತ್ಮಸ್ವರೂಪವನ್ನು ವ್ಯಕ್ತಗೊಳಿಸಿದನು. ಆದುದರಿಂದ ಅವರಿಗೆ ಅವರಲ್ಲಿನ ಅಭದ್ರ ಸ್ವರೂಪದ ಜ್ಞಾನವಾಗಿ ನಾಚಿಕೆಯಾಯಿತು. ದುಷ್ಟ ಪ್ರವೃತ್ತಿಯು ಮೃದುವಾಯಿತು. ಅವರು ಶ್ರೀಕೃಷ್ಣನೊಂದಿಗೆ ತಲ್ಲೀನರಾದರು. ಅವರ ಚಿತ್ತವು ಈಗ ಶುದ್ಧವಾಯಿತು. ಹೃದಯದಲ್ಲಿನ ಆತ್ಮಭಾವವು ಜಾಗೃತವಾಯಿತು. ಶ್ರೀಕೃಷ್ಣನು ಅವರಿಗೆ ರಾಸಕ್ರೀಡೆಯಲ್ಲಿ ಸ್ಥಾನ ನೀಡಿ ಮಧುರಭಾವದ ಆಸ್ವಾದನೆಯನ್ನು ನೀಡಿದನು.

– (ಪರಾತ್ಪರ ಗುರು) ಪಾಂಡೆ ಮಹಾರಾಜರು (೩೦.೩.೨೦೧೫)

ಭಕ್ತರಲ್ಲಿ ಹರಿಯ ಬಗ್ಗೆ ಭಕ್ತಿಯ ಮಹತ್ವವನ್ನು ದೃಢಗೊಳಿಸುವ ಶ್ರೀಕೃಷ್ಣನ ಉಪಾಸನೆಯ ಶಾಸ್ತ್ರ ಹೇಳುವ ಸನಾತನದ ಗ್ರಂಥಮಾಲಿಕೆ

ಶ್ರೀಕೃಷ್ಣ (ಕಿರುಗ್ರಂಥ)

  • ‘ಕೃಷ್ಣ’ ಶಬ್ದದ ವ್ಯುತ್ಪತ್ತಿ ಮತ್ತು ಅದರ ಅರ್ಥ
  • ಶ್ರೀಕೃಷ್ಣನ ವಿವಿಧ ಗುಣವೈಶಿಷ್ಟ್ಯಗಳು ಮತ್ತು ಅವನ ಕಾರ್ಯ
  • ‘ಸುದರ್ಶನಚಕ್ರ’ ಶಬ್ದದ ಅರ್ಥ ಮತ್ತು ವೈಶಿಷ್ಟ್ಯಗಳು,
  • ಶ್ರೀಕೃಷ್ಣನ ಉಪಾಸನೆಯಲ್ಲಿ ಬರುವ ಕೆಲವು ಕೃತಿಗಳು

ರಾಸಲೀಲೆ : (ವ್ಯಭಿಚಾರವಲ್ಲ: ಕೃಷ್ಣನುಗೋಪಿಯರಿಗೆ ನೀಡಿದ ಅದ್ವೈತದ ಅನುಭೂತಿ)

ರಾಸಲೀಲೆ ಎಂದರೆ ಭಗವಂತನು ಗೋಪಿಯರಿಗೆ ನೀಡಿದ ಅತ್ಯುಚ್ಚ ಆನಂದದ ಅನುಭೂತಿ ! ಹೀಗಿರುವಾಗ ಧರ್ಮದ್ರೋಹಿಗಳಿಂದ ‘ರಾಸಲೀಲೆಯೆಂದರೆ ಶ್ರೀಕೃಷ್ಣನು ಗೋಪಿಯರೊಂದಿಗೆ ನಡೆಸಿದ ಕಾಮಕ್ರೀಡೆ’ ಎಂದು ಅಯೋಗ್ಯ ಆರೋಪವನ್ನು ಮಾಡಲಾಗುತ್ತದೆ. ಈ ಆರೋಪಗಳಲ್ಲಿನ ಅರ್ಥಶೂನ್ಯತೆಯನ್ನು ಸ್ಪಷ್ಟಪಡಿಸಿ ಗೋಪಿಯರ ಭಕ್ತಿಯ ಶ್ರೇಷ್ಠತೆಯನ್ನು ತಿಳಿಸುವ ಗ್ರಂಥ.

ಶ್ರೀಕೃಷ್ಣತತ್ತ್ವದ ಅಧಿಕ ಲಾಭ ಮಾಡಿಕೊಡುವ ಸನಾತನದ ಉತ್ಪಾದನೆಗಳು

  • ಶ್ರೀಕೃಷ್ಣನ ಸಾತ್ತ್ವಿಕ ಚಿತ್ರ, ಪದಕ (ಲಾಕೆಟ್) ಶ್ರೀಕೃಷ್ಣನ ನಾಮಪಟ್ಟಿ

ಸಂಪರ್ಕ ಕ್ರಮಾಂಕ : 9342599299

‘ಆನ್‍ಲೈನ್’ ಖರೀದಿಗಾಗಿ : www.SanatanShop.com

ಶ್ರೀಕೃಷ್ಣನ ವೈಶಿಷ್ಟ್ಯಗಳು

೧. ಈಶ್ವರಃ ಪರಮಃ ಕೃಷ್ಣಃ ಸಚ್ಚಿದಾನನ್ದವಿಗ್ರಹಃ  |

ಅನಾದಿರಾದಿರ್ಗೋವಿನ್ದಃ ಸರ್ವಕಾರಣ ಕಾರಣಮ್ ||  – ಬ್ರಹ್ಮಸಂಹಿತಾ, ಶ್ಲೋಕ ೧

ಅರ್ಥ : ಶ್ರೀಕೃಷ್ಣನು ಪರಮ ಈಶ್ವರನಿದ್ದಾನೆ. ಅವನು ಸಚ್ಚಿದಾನಂದ ಸ್ವರೂಪನಿದ್ದಾನೆ. ಆ ಗೋವಿಂದನ ಮೊದಲು ಏನೂ ಇರಲಿಲ್ಲ. ಅವನೇ ಎಲ್ಲದರ ಆದಿಯಾಗಿದ್ದು ಎಲ್ಲ ಕಾರಣಗಳ ಕಾರಣನಾಗಿದ್ದಾನೆ.

೨. ವಶಿ ಸರ್ವಸ್ಯ ಲೋಕಸ್ಯ ಸ್ಥಾವರಸ್ಯ ಚರಸ್ಯ ಚ |

– ಶ್ವೇತಾಶ್ವತರೋಪನಿಷದ್, ಅಧ್ಯಾಯ ೩, ಶ್ಲೋಕ ೧೮

ಅರ್ಥ : ಸ್ಥಾವರ, ಜಂಗಮ ಹೀಗೆ ಎಲ್ಲ ಜನರು ಅವನ ಸ್ವಾಧೀನದಲ್ಲಿದ್ದಾರೆ.

ಸರ್ವಸ್ಯ ವಶೀ ಸರ್ವಸ್ಯೇಶಾನಃ ಸರ್ವಸ್ಯಾಧಿಪತಿಃ |

– ಬೃಹದಾರಣ್ಯಕೋಪನಿಷದ್, ಅಧ್ಯಾಯ ೪, ಬ್ರಾಹ್ಮಣ ೪, ವಾಕ್ಯ ೨೨

ಅರ್ಥ : ಅವನು ಎಲ್ಲರನ್ನು ನಿಯಂತ್ರಣದಲ್ಲಿಡುವನು, ಎಲ್ಲರ ಈಶ್ವರ ಮತ್ತು ಅಧಿಪತಿಯಾಗಿದ್ದಾನೆ.

ಕಾಲರೂಪದಿಂದ ಶ್ಯಾಮವರ್ಣವುಳ್ಳವನಾಗಿರುವುದರಿಂದ ಯಾರು ಶ್ರೀ ಶ್ಯಾಮಸುಂದರ ಸ್ವರೂಪದಿಂದ ಶೃಂಗಾರ ರಸ-ಮಾಧುರ್ಯಗಳ ಮೂಲಕ ಸಂಪೂರ್ಣ ಜಗತ್ತನ್ನು ಆಕರ್ಷಿಸಿಸುತ್ತಾನೆಯೋ, ಅವನ ಹೆಸರು ‘ಕೃಷ್ಣ’ ಎಂದಿದೆ. ಆದುದರಿಂದ ಕೇವಲ ಶ್ರೀಕೃಷ್ಣನೇ ಪರಮ ದೇವನಾಗಿದ್ದಾನೆ. ಅವನ ಮಧುರತೆಯ ಆಸ್ವಾದನೆ ತೆಗೆದುಕೊಂಡು ಅವನ ಪೂಜೆ ಮತ್ತು ಭಜನೆ ಮಾಡಬೇಕು.’

– (ಪರಾತ್ಪರ ಗುರು) ಪಾಂಡೆ ಮಹಾರಾಜರು (೩೦.೧೧.೨೦೧೪)