ಶ್ರೀಕೃಷ್ಣ ಜನ್ಮಭೂಮಿಗಾಗಿ ಅರ್ಜಿ ಸಲ್ಲಿಸಿದ ವಕೀಲರಿಗೆ ಆಗರಾದ ಜಾಮಾಮಸೀದಿಯ ಅಧ್ಯಕ್ಷರಿಂದ ಕೊಲೆ ಬೆದರಿಕೆ

ವಾರಣಾಸಿ (ಉತ್ತರಪ್ರದೇಶ) – ಮಥುರಾದ ಶ್ರೀಕೃಷ್ಣ ಜನ್ಮಭೂಮಿಯ ಇದಗಾಹ ಮಸೀದಿ ಪ್ರಕರಣದಲ್ಲಿ ಹಿಂದೂ ಪಕ್ಷದ ಪರವಾಗಿ ಅರ್ಜಿ ಸಲ್ಲಿಸಿರುವ ವಕೀಲ ಮಹೇಂದ್ರ ಪ್ರತಾಪಸಿಂಗವರಿಗೆ ವಿಡಿಯೋ ಮೂಲಕ ಜೀವ ಬೆದರಿಕೆ ಹಾಕಿದ್ದು ಎದುರಿಗೆ ಬಂದಿದೆ. ಇದರಲ್ಲಿ ಆಗರಾದ ಜಾಮಾ ಮಸೀದಿ ಇಂತೆಜಾಮಿಯಾ ಸಮಿತಿಯ ಅಧ್ಯಕ್ಷ ಮೊಹಮ್ಮದ ಜಾಹಿದ ಖುರೇಷಿ ಬೆದರಿಕೆಯನ್ನು ಒಡ್ಡಿರುವ ವ್ಯಕ್ತಿ ಎಂದು ತಿಳಿದುಬಂದಿದೆ. ಆಗರಾದ ಜಾಮಾ ಮಸೀದಿಯಲ್ಲಿ ಶುಕ್ರವಾರದ ಪ್ರಾರ್ಥನೆಯ ನಂತರ ಭಾಷಣ ಮಾಡುವಾಗ ಅವರು ಬೆದರಿಕೆ ಹಾಕಿದ್ದಾರೆ. ನಂತರ ಪೊಲೀಸರು ಖುರೇಷಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಮತ್ತೊಂದೆಡೆ ವಕೀಲ ಮಹೇಂದ್ರ ಪ್ರತಾಪ ಸಿಂಗ ಅವರು ಪೊಲೀಸರಿಂದ ರಕ್ಷಣೆ ಕೋರಿದ್ದಾರೆ.

೧. ಆಗರಾದ ಸುತ್ತಮುತ್ತಲಿನ ಬೇಗಂ ಸಾಹಿಬಾ ಮಸೀದಿಯ ಮೆಟ್ಟಲುಗಳ ಕೆಳಗೆ ಹೂತಿಟ್ಟಿರುವ ಶ್ರೀಕೃಷ್ಣನ ವಿಗ್ರಹಗಳನ್ನು ಹಿಂದಿರುಗಿಸುವಂತೆ ಪುರಾತತ್ವ ಇಲಾಖೆಗೆ ಲೀಗಲ ನೋಟಿಸ ಕಳುಹಿಸಿದ್ದೇನೆ ಎಂದು ಮಹೇಂದ್ರ ಪ್ರತಾಪ ಸಿಂಗ ಹೇಳಿದ್ದಾರೆ. ಇದಕ್ಕಾಗಿಯೇ ಜಾಹಿದ ಖುರೇಷಿ ನನಗೆ ಕೊಲೆ ಬೆದರಿಕೆ ಹಾಕಿದ್ದಾನೆ. ಈ ಬೆದರಿಕೆಯಿಂದಾಗಿ ನನಗೆ ಪೊಲೀಸ ರಕ್ಷಣೆ ಬೇಕಾಗಿದೆ.

೨. ಪೊಲೀಸರು ಪ್ರಕರಣ ದಾಖಲಿಸಿಕೊಂಡ ನಂತರ ತನ್ನನ್ನು ತಾನು ಸಮರ್ಥಿಸಿಕೊಂಡ ಜಾಹಿದ ಖುರೇಷಿ ಮಂದಿರ ಅಥವಾ ಮಸೀದಿ ವಿಚಾರದಲ್ಲಿ ಬಿಜೆಪಿ ನೇರವಾಗಿ ಭಾಗಿಯಾಗಿಲ್ಲ, ಆದರೆ ಮಸೀದಿ ಧ್ವಂಸಕ್ಕೆ ಒತ್ತಾಯಿಸುತ್ತಿರುವ ಮಹೇಂದ್ರ ಪ್ರತಾಪ ಸಿಂಗ ಅವರಂತಹವರನ್ನು ಮುಂದೆ ಮಾಡುತ್ತಿದೆ. ನಾವು ದೇಶ ಅಥವಾ ಯಾವುದೇ ಸರಕಾರದ ವಿರುದ್ಧ ಅಲ್ಲ, ಮಹೇಂದ್ರ ಪ್ರತಾಪ ಸಿಂಗ ಅವರಂತಹವರ ವಿರುದ್ಧ ಇದ್ದೇವೆ.

ಸಂಪಾದಕೀಯ ನಿಲುವು

ನೂಪುರ ಶರ್ಮಾ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಮುಸ್ಲಿಮರು ಈ ಬೆದರಿಕೆಯ ವಿರುದ್ಧ ಮಾತನಾಡಲಿದ್ದಾರೆಯೇ?

ಇಂತಹವರನ್ನು ಜೈಲಿಗೆ ಹಾಕಲು ಉತ್ತರಪ್ರದೇಶದ ಬಿಜೆಪಿ ಸರಕಾರ ತಕ್ಷಣ ಕ್ರಮಕೈಗೊಳ್ಳಬೇಕು ಎಂದು ಹಿಂದೂಗಳು ಆಶಿಸುತ್ತಾರೆ!