ಜ್ಞಾನವಾಪಿಯಂತೆ ಮಥುರಾ ಶ್ರೀಕೃಷ್ಣಜನ್ಮ ಭೂಮಿಯ ಸಮೀಕ್ಷೆ ನಡೆಸಲು ಅಲಹಾಬಾದ್ ಉಚ್ಚ ನ್ಯಾಯಾಲಯದ ಆದೇಶ

ಪ್ರಯಾಗರಾಜ (ಉತ್ತರಪ್ರದೇಶ) – ವಾರಾಣಸಿಯ ಜ್ಞಾನವಾಪಿ ಮತ್ತು ಶೃಂಗಾರ ಗೌರಿ ದೇವಸ್ಥಾನದ ನಂತರ ಈಗ ಮಥುರಾದ ಶ್ರೀ ಕೃಷ್ಣಜನ್ಮಭೂಮಿ ಮತ್ತು ಅದರಲ್ಲಿನ ಶಾಹಿ ಈದಗಾಹ್ ಮಸೀದಿಯ ಚಿತ್ರೀಕರಣ ಮಾಡಲು ಅಲಹಾಬಾದ್ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಪಿಯುಷ ಅಗ್ರವಾಲ ಇವರ ನ್ಯಾಯಪೀಠವು ಆದೇಶ ನೀಡಿದೆ. ಮುಂಬರುವ ೪ ತಿಂಗಳಿನಲ್ಲಿ ಈ ಚಿತ್ರೀಕರಣ ಪೂರ್ಣಗೊಳಿಸಿ ಸಮೀಕ್ಷೆಯ ವರದಿ ನ್ಯಾಯಾಲಯದಲ್ಲಿ ಪ್ರಸ್ತುತಪಡಿಸಲು ಆದೇಶ ನೀಡಲಾಗಿದೆ. ಇದಕ್ಕಾಗಿ ನ್ಯಾಯಾಲಯ ಆಯುಕ್ತರ ಹುದ್ದೆಯಲ್ಲಿನ ಇಬ್ಬರು ನ್ಯಾಯವಾದಿಗಳ ನೇಮಕ ಮಾಡುವುದು.ಹಾಗೂ ಸಹಾಯಕ ಆಯುಕ್ತ ಹುದ್ದೆಯ ೨ ನ್ಯಾಯವಾದಿಗಳನ್ನು ನೇಮಕ ಮಾಡಲಾಗುವುದು. ಈ ಸಮೀಕ್ಷೆ ಆಯೋಗದ ವಾದ ಮತ್ತು ಪ್ರತಿವಾದ ಇವರ ಜೊತೆಗೆ ಸಮರ್ಥ ಅಧಿಕಾರಿಗಳು ಸಹಭಾಗಿ ಇರಲಿದೆ.

ಏನು ಈ ಪ್ರಕರಣ ?

ಮಥುರಾದ ಜಿಲ್ಲಾ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಿ ಶ್ರೀಕೃಷ್ಣಜನ್ಮಭೂಮಿ ಮತ್ತು ಶಾಹಿ ಈದಗಾಹ್ ಮಸೀದಿಯ ಜಾಗದ ವೈಜ್ಞಾನಿಕ ಸಮೀಕ್ಷೆ ಮಾಡಲು ಒತ್ತಾಯಿಸಿ ಭಗವಾನ ಶ್ರೀಕೃಷ್ಣ ವಿರಾಜಮಾನವು ದಾಖಲಿಸಿದ್ದರು. ಒಂದು ವರ್ಷದ ನಂತರ ಕೂಡ ಈ ಅರ್ಜಿಯ ಮೇಲೆ ಇಲ್ಲಿಯವರೆಗೆ ವಿಚಾರಣೆ ಪೂರ್ಣಗೊಂಡಿಲ್ಲ. ಅರ್ಜಿದಾರ ಮನೀಷ ಯಾದವ ಇವರು ಇತ್ತೀಚೆಗೆ ಅಲಹಾಬಾದ್ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಿ ‘ವಿಚಾರಣೆ ಆದಷ್ಟು ಬೇಗನೆ ಪೂರ್ಣಗೊಳಿಸಬೇಕೆಂದು’, ಆಗ್ರಹಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸುವಾಗ ಉಚ್ಚ ನ್ಯಾಯಾಲಯವು ಕನಿಷ್ಠ ನ್ಯಾಯಾಲಯದಿಂದ ವರದಿ ತರಿಸಿಕೊಂಡಿದ್ದತ್ತು. ಅದರ ಮೇಲೆ ನ್ಯಾಯಾಲಯ ಮೇಲಿನ ನಿರ್ಣಯ ನೀಡಿದೆ.