ಹಿಂದೂ ದೇವಸ್ಥಾನದ ಹಣ ಹಿಂದೂಗಳ ಹಿತಕ್ಕಾಗಿಯೇ ಬಳಸಬೇಕು ! – ವಿಶ್ವ ಹಿಂದೂ ಪರಿಷತ್

ವಿಶ್ವ ಹಿಂದೂ ಪರಿಷತ್ತಿನ ಕಾರ್ಯಾಧ್ಯಕ್ಷ ಅಲೋಕ ಕುಮಾರ (ಮಧ್ಯದಲ್ಲಿ)

ಕಾಂಚಿಪುರಂ (ತಮಿಳುನಾಡು) – ದೇವಸ್ಥಾನಗಳಿಗೆ ಸಿಗುವ ಆದಾಯ ಸರಕಾರಿ ಮತ್ತು ಆಡಳಿತ ಖರ್ಚಿಗಾಗಿ ಉಪಯೋಗಿಸದೆ ಕೇವಲ ದೇವಸ್ಥಾನದ ನಿರ್ವಹಣೆಗಾಗಿ ಮತ್ತು ಹಿಂದೂಗಳ ಹಿತಕ್ಕಾಗಿಯೇ ಉಪಯೋಗಿಸಬೇಕೆಂದು ವಿಶ್ವ ಹಿಂದೂ ಪರಿಷತ್ತಿನ ಕಾರ್ಯಾಧ್ಯಕ್ಷ ಅಲೋಕ ಕುಮಾರ ಇವರು ಒತ್ತಾಯಿಸಿದ್ದಾರೆ. ಅವರು ಇಲ್ಲಿ ಆಯೋಜಿಸಲಾದ ವಿಶ್ವ ಹಿಂದೂ ಪರಿಷತ್ತಿನ ಕೇಂದ್ರ ಕಾರ್ಯಕಾರಿಣಿ ಸಭೆಯ ಕುರಿತು ಪತ್ರಕರ್ತರ ಜೊತೆ ಮಾತನಾಡುತ್ತಿದ್ದರು. ‘ಸಂಬಂಧಪಟ್ಟ ರಾಜ್ಯ ಸರಕಾರಗಳ ಹಿಡಿತದಿಂದ ದೇವಸ್ಥಾನಗಳನ್ನು ಮುಕ್ತಗೊಳಿಸುವುದಕ್ಕಾಗಿ ಮತ್ತು ಅದರ ನಿರ್ವಹಣೆ ಹಿಂದೂ ಸಮಾಜಕ್ಕೆ ಒಪ್ಪಿಸುವುದಕ್ಕಾಗಿ ವಿಶ್ವ ಹಿಂದೂ ಪರಿಷತ್ ಹೆಚ್ಚು ತೀವ್ರ ಆಂದೋಲನ ಮಾಡಲಾಗುವುದು’, ಎಂದು ನಿರ್ಧರಿಸಲಾಗಿದೆ ಎಂದು ಅಲೋಕ ಕುಮಾರ ಅವರು ಈ ಸಮಯದಲ್ಲಿ ಹೇಳಿದರು.

ಅವರು ಮಾತನ್ನು ಮುಂದುವರೆಸುತ್ತಾ, “ಕೆಲವು ದೇವಸ್ಥಾನಗಳ ವ್ಯವಸ್ಥಾಪನೆ ರಾಜ್ಯ ಸರಕಾರ ನೋಡಿಕೊಳ್ಳುತ್ತಿದೆ, ಇದೆ ಖೇದಕರ ವಿಷಯವಾಗಿದೆ. ತಮಿಳುನಾಡಿನಲ್ಲಿ ದೇವಸ್ಥಾನಗಳ ದೇವತೆಯ ಮೂರ್ತಿಗಳು ಧ್ವಂಸಗೊಳಿಸುತ್ತಿರುವ ಘಟನೆ ತಪ್ಪಾಗಿವೆ. ಅಮಲಿನಲ್ಲಿರುವ ವ್ಯಕ್ತಿ ಧ್ವಂಸ ಮಾಡಿದ್ದಾರೆ ಎಂದು ಪೊಲೀಸರ ದಾವೆ ಸುಳ್ಳಾಗಿದೆ. ಆದರೆ ಹಿಂದೆ ಉದ್ದೇಶಿತ ಸಂಚಿದೆ. ತಮಿಳನಾಡು ಸರಕಾರ ನಿಜವಾಗಿಯೂ ಅಪರಾಧಿಗಳ ಮೇಲೆ ಕ್ರಮ ಕೈಗೊಳ್ಳಬೇಕು.” ಎಂದು ಹೇಳಿದರು.

ಕಾಶಿಯ ದೇವಸ್ಥಾನ ಮತ್ತು ಮಥುರಾದ ಶ್ರೀಕೃಷ್ಣ ಜನ್ಮಸ್ಥಾನ ಇದರ ಮೇಲೆ ಹಕ್ಕು ಪಡೆಯುವೆವು !

ಅಲೋಕ ಕುಮಾರ ತಮ್ಮ ಮಾತನ್ನು ಮುಂದುವರೆಸುತ್ತಾ, ವಿಶ್ವ ಹಿಂದೂ ಪರಿಷತ್ ಕಾನೂನಿನ ಚೌಕಟ್ಟಿನಲ್ಲಿ ಶಾಂತಿಯಿಂದ ಕಾಶಿ ವಿಶ್ವನಾಥ ದೇವಸ್ಥಾನ ಮತ್ತು ಮಥುರಾದ ಶ್ರೀಕೃಷ್ಣಜನ್ಮಭೂಮಿಯ ಮೂಲಸ್ಥಾನದ ಮೇಲೆ ಮತ್ತೆ ಹಕ್ಕು ಪಡೆಯುವುದು. ಸಾಂವಿಧಾನಿಕ ಮಾರ್ಗದಿಂದ ನಾವು ಈ ಪ್ರಯತ್ನ ಮುಂದುವರೆಸಿದೆವು. ಈ ಪ್ರಕರಣದಲ್ಲಿ ನ್ಯಾಯ ಇರುವುದರಿಂದ ೨ ಪಕ್ಷಗಳು ನ್ಯಾಯಾಲಯದ ತೀರ್ಪಿಗಾಗಿ ಕಾಯುವುದು ಯೋಗ್ಯವಾಗಿದೆ ಎಂದು ಹೇಳಿದರು.

ಭಾರತದ ಆಡಳಿತ ಶರಿಯತ ಕಾನೂನಿನ ಪ್ರಕಾರ ಅಲ್ಲ ಬದಲಾಗಿ ಸಾಂವಿಧಾನಿಕವಾಗಿ ನಡೆಯುತ್ತದೆ !

ಅಲೋಕ ಕುಮಾರ ಮಾತು ಮುಂದುವರೆಸುತ್ತಾ, ನುಪೂರ ಶರ್ಮ ಮತ್ತು ನವೀನ ಜಿಂದಾಲ ಇವರ ಹೇಳಿಕೆಯನ್ನು ಖಂಡಿಸುತ್ತಾ ನಡೆದ ಹಿಂಸಾಚಾರದಲ್ಲಿ ದೇಶಾದ್ಯಂತ ಅಲ್ಲಲ್ಲಿ ಸಾರ್ವಜನಿಕ ಸಂಪತ್ತು ಹಾಗೂ ಸರಕಾರಿ ಸಂಸ್ಥೆ ಹಾನಿಯಾಗಿದೆ ಹಾಗೂ ಪೊಲೀಸರ ಮೇಲೆ ದಾಳಿ ನಡೆದಿರುವುದು ಖಂಡನೀಯವಾಗಿದೆ. ಶತ್ರು ದೇಶ ಮತ್ತು ಕೆಲವು ದೇಶದ್ರೋಹಿ ಗುಂಪುಗಳ ಅಪಪ್ರಚಾರದಿಂದ ಕಟ್ಟರವಾದಿಗಳು ಶರ್ಮಾ ಮತ್ತು ಜಿಂದಾಲ ಇವರ ಶಿರಚ್ಛೇದ ಮಾಡುವೆವು, ಹಿಂದೂಗಳ ಸಂಪತ್ತಿಯ ಹಾನಿ ಮಾಡುವುದು ಮತ್ತು ರಸ್ತೆಯಲ್ಲಿ ಹಿಂಸಾಚಾರ ನಡೆಸುವುದು, ಎಂದು ಬೆದರಿಕೆ ನೀಡಿದ್ದವು. ವಿಶ್ವ ಹಿಂದೂ ಪರಿಷತ್ ಇಂತಹ ಕೃತ್ಯಗಳನ್ನು ನಿಷೇಧಿಸುತ್ತದೆ. ಭಾರತದ ಆಡಳಿತ ಶರೀಯತ್ ಕಾನೂನಿನ ಪ್ರಕಾರ ಅಲ್ಲದೆ ಸಂವಿಧಾನದ ಮೂಲಕ ನಡೆಯುತ್ತದೆ. ಯಾವುದೇ ಗುಂಪುಗಳಿಗೆ ಯಾರಿಗೆ ಬೇಕಾದರೂ ಅಪರಾಧಿ ಎಂದು ಘೋಷಿಸುವ ಅಧಿಕಾರ ಇಲ್ಲ ಎಂದು ಹೇಳಿದರು.