ಮಥುರೆಯ ಶ್ರೀಕೃಷ್ಣ ಜನ್ಮಭೂಮಿ ವಿವಾದ
ಪ್ರಯಾಗರಾಜ (ಉತ್ತರಪ್ರದೇಶ) – ಮಥುರೆಯ ಶ್ರೀಕೃಷ್ಣ ಜನ್ಮಭೂಮಿ ಮತ್ತು ವಿವಾದಿತ ಶಾಹಿ ಈದ್ಗಾಹ್ ಮಸೀದಿಯ ಪ್ರಕರಣದಲ್ಲಿ ಅಲಹಾಬಾದ್ ಉಚ್ಚ ನ್ಯಾಯಾಲಯದಲ್ಲಿ ವಿಚಾರಣೆ ನಡೆಸುವಾಗ ಮಥುರಾ ಜಿಲ್ಲಾ ನ್ಯಾಯಾಲಯಕ್ಕೆ ಮುಂದಿನ ಆದೇಶ ನೀಡಿದೆ – ಬರುವ ಮೂರು ತಿಂಗಳಲ್ಲಿ ಈ ಪ್ರಕರಣದ ಬಾಕಿ ಇರುವ ಎಲ್ಲಾ ಮನವಿಗಳನ್ನು ಇತ್ಯರ್ಥಗೊಳಿಸಬೇಕು. ಉಚ್ಚ ನ್ಯಾಯಾಲಯದ ಈ ಆದೇಶದಿಂದ ಈದ್ಗಾಹ್ ಮಸೀದಿಯ ವೈಜ್ಞಾನಿಕ ಸರ್ವೇಕ್ಷಣೆ ಬೇಗನೆ ಪ್ರಾರಂಭಿಸಲು ಸಾಧ್ಯವಾಗುತ್ತದೆ, ಎಂದು ಹೇಳಲಾಗುತ್ತಿದೆ. ಮೇಲಿನ ಆದೇಶ ಭಗವಾನ ಶ್ರೀ ಕೃಷ್ಣನ ವಂಶಜರಾದ ಮನೀಶ್ ಯಾದವ ಇವರು ದಾಖಲಿಸಿರುವ ಮನವಿಯ ಆಲಿಕೆ ವೇಳೆ ನೀಡಲಾಗಿದೆ.
Take decision on mosques’ survey within 3 months: Allahabad HC to Mathura court https://t.co/KsAbxtVMLz
— Hindustan Times (@HindustanTimes) July 18, 2022
ಈ ಸಂದರ್ಭದಲ್ಲಿ ಅರ್ಜಿದಾರರಾದ ಮನಿಷ್ ಯಾದವ, ಶಾಹಿ ಈದ್ಗಾಹ್ ಮಸೀದಿ ಮತ್ತು ಪರಿಸರದ ವೈಜ್ಞಾನಿಕ ಸಂಶೋಧನೆ ಮತ್ತು ನಿರೀಕ್ಷಣೆ ಆಗಬೇಕೆಂದು ಓತ್ತಾಯಿಸುವ ಮನವಿ ಮಥುರಾ ಜಿಲ್ಲಾ ನ್ಯಾಯಾಲಯದಲ್ಲಿ ಏಪ್ರಿಲ್ ೧೪, ೨೦೨೧ ರಂದು ದಾಖಲಿಸಲಾಗಿತ್ತು. ಆದರೆ ನ್ಯಾಯಾಲಯವು ಇದರ ಮೇಲೆ ಯಾವುದೇ ಆದೇಶ ನೀಡುವ ಬದಲು ಅದನ್ನು ಬಾಕಿ ಇರಿಸಿದೆ. ಈ ಮೊದಲು ಮೇ ೨೦೨೨ ರಲ್ಲಿಯೂ ಉಚ್ಚ ನ್ಯಾಯಾಲಯ ಈ ಸಂದರ್ಭದಲ್ಲಿ ೪ ತಿಂಗಳಲ್ಲಿ ಪ್ರಕರಣಗಳನ್ನು ಇತ್ಯರ್ಥಗೊಳಿಸಬೇಕೆಂದು ಸೂಚನೆ ನೀಡಿತ್ತು. ಇದರ ಮೇಲೆ ೨ ತಿಂಗಳು ಯಾವುದೇ ರೀತಿಯ ಕೃತಿ ಆಗಲಿಲ್ಲ. ಆದ್ದರಿಂದ ಈಗ ಹೊಸದಾಗಿ ಮೂರು ತಿಂಗಳ ಸಮಯಾವಕಾಶ ನೀಡಲಾಗಿದೆ. ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡ್ ಈ ಪ್ರಕರಣಕ್ಕೆ ವಿರೋಧ ವ್ಯಕ್ತಪಡಿಸಿದೆ.
ಹಿಂದೂ ಪಕ್ಷದ ಭೂಮಿಕೆ
ಹಿಂದೂ ಪಕ್ಷದ ಪ್ರಕಾರ, ಶಾಹಿ ಈದ್ಗಾಹ್ ಮಸೀದಿಯಲ್ಲಿ ದೇವಸ್ಥಾನದ ಪ್ರತೀಕ ಇರುವ ಸ್ವಸ್ತಿಕ ಇದ್ದು ಮಸೀದಿಯ ಕೆಳಗೆ ದೇವಸ್ಥಾನದ ಗರ್ಭಗುಡಿಯಿದೆ. ಇದರ ಜೊತೆ ಇಲ್ಲಿ ಹಿಂದೂ ವಾಸ್ತುಶಿಲ್ಪದ ಸಾಕ್ಷಿಗಳು ಇವೆ. ಇದೆಲ್ಲವೂ ವೈಜ್ಞಾನಿಕ ಪರೀಕ್ಷಣೆಯ ನಂತರವೇ ಬೆಳಕಿಗೆ ಬರಲು ಸಾಧ್ಯ.
ಹಿಂದೂಗಳ ನ್ಯಾಯಯುತ ಬೇಡಿಕೆ
ಈ ಪ್ರಕರಣದಲ್ಲಿ ಸ್ಥಳೀಯ ನ್ಯಾಯಾಲಯದಲ್ಲಿ ಈವರೆಗೆ ೧೨ ಕ್ಕೂ ಹೆಚ್ಚಿನ ಮನವಿಗಳನ್ನು ದಾಖಲಿಸಲಾಗಿದೆ. ‘೧೩.೩೭ ಎಕರೆ ಪರಿಸರದಲ್ಲಿರುವ ಶಾಹಿ ಈದ್ಗಾಹ್ ಮಸೀದಿ ತೆರವುಗೊಳಿಸಬೇಕು. ಈ ಮಸೀದಿ ಕಟರಾ ಕೇಶವ ದೇವ ದೇವಸ್ಥಾನದ ಹತ್ತಿರ ಇದೆ’ ಎಂಬುವುದು ಎಲ್ಲಾ ಮನವಿಗಳಲ್ಲಿ ಕಾಣಿಸುವ ಬೇಡಿಕೆಯಾಗಿದೆ. ಅನ್ಯ ಬೇಡಿಕೆಗಳಲ್ಲಿ ವಾರಾಣಸಿಯ ಜ್ಞಾನವಾಪಿಯ ಹಾಗೆ ಈದ್ಗಾಹ್ ಮಸೀದಿಯ ಪರೀಕ್ಷಣೆ ನಡೆಸುವುದು ಮತ್ತು ಅಲ್ಲಿ ಹಿಂದೂಗಳಿಗೆ ಪೂಜೆ ನಡೆಸುವ ಅಧಿಕಾರ ನೀಡಬೇಕು ಎಂದು ಕೂಡ ಕೋರಲಾಗಿದೆ.
ಸಂಪಾದಕೀಯ ನಿಲುವು
ಈಗ ಉತ್ತರ ಪ್ರದೇಶ, ಹಾಗೂ ಕೇಂದ್ರದಲ್ಲಿ ಭಾಜಪ ಸರಕಾರ ಶ್ರೀಕೃಷ್ಣ ಜನ್ಮಭೂಮಿ ಮುಕ್ತಗೊಳಿಸಿ ಹಿಂದೂಗಳಿಗೆ ನ್ಯಾಯ ಒದಗಿಸಬೇಕೆಂಬುದೇ ಹಿಂದೂಗಳ ಅಪೇಕ್ಷೆಯಾಗಿದೆ ! |