ಮಥುರಾ (ಉತ್ತರಪ್ರದೇಶ) ಇಲ್ಲಿ ದೋಸೆ ಮಾರಾಟ ಕೇಂದ್ರಕ್ಕೆ ಹಿಂದೂ ಹೆಸರಿಟ್ಟಿರುವ ಮುಸಲ್ಮಾನ ಮಾರಾಟಗಾರನಿಗೆ ವಿರೋಧ

ಪೊಲೀಸರಲ್ಲಿ ದೂರು ದಾಖಲು

ಹಿಂದೂ ಹೆಸರು ಇಟ್ಟರೆ ಹಿಂದೂಗಳು ದೋಸೆ ಖರೀದಿಸಲು ಬರುತ್ತಾರೆ, ಎಂಬ ಉದ್ದೇಶ ಇದರ ಹಿಂದೆ ಇದೆ ಎಂಬುದು ಸ್ಪಷ್ಟವಾಗುತ್ತದೆ, ಆದ್ದರಿಂದ ಇದಕ್ಕೆ ಈಗ ಯಾರಾದರು, ‘ಆರ್ಥಿಕ ಜಿಹಾದ’ ಎಂದು ಹೇಳಿದರೆ ಅಯೋಗ್ಯ ಅನ್ನಬಾರದು !

ಮಥುರಾ (ಉತ್ತರಪ್ರದೇಶ) – ಇಲ್ಲಿನ ಇರ್ಫಾನ ಹೆಸರಿನ ಯುವಕನು ‘ಶ್ರೀನಾಥ’ ದೋಸೆ ಮಾರಾಟ ಕೇಂದ್ರ ನಡೆಸುತ್ತಿದ್ದನು. ಈ ಪ್ರಕರಣದಲ್ಲಿ ಹಿಂದೂಗಳಿಂದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಈ ಪ್ರಕರಣದಲ್ಲಿ ಕೆಲವರು ಮಾರಾಟ ಕೇಂದ್ರದ ಹತ್ತಿರ ಹೋಗಿ ಕೇಂದ್ರಕ್ಕೆ ‘ಶ್ರೀನಾಥ’ ಎಂಬ ಹೆಸರು ಏಕೆ ಇಟ್ಟಿರುವುದು ?’ ಹೀಗೆಂದು ವಿಚಾರಣೆ ನಡೆಸಿದ್ದಾರೆ. ಅದೇ ರೀತಿ ಅವರು ಅಲ್ಲಿನ ಮಾರಾಟ ಕೇಂದ್ರದ ಹೆಸರಿರುವ ಬಟ್ಟೆಯ ಫಲಕವನ್ನು ಹರಿದು ಹಾಕಿದರು, ಅದೇ ರೀತಿ ಕೇಂದ್ರಕ್ಕೆ ಹಾನಿ ಮಾಡುತ್ತಾ ಕೇಂದ್ರವನ್ನು ತೆಗೆಯಲು ಹೇಳಿದರು. ಈ ವಿಷಯದ ಒಂದು ವಿಡಿಯೋ ಪ್ರಸಾರವಾಗಿದೆ.
ಮಾರಾಟ ಕೇಂದ್ರದಲ್ಲಿನ ಕೆಲಸಗಾರರ ಹೇಳಿಕೆ ಅನುಸಾರ, ಈ ಮಾರಾಟ ಕೇಂದ್ರವು ರಾಹುಲ ಎಂಬ ವ್ಯಕ್ತಿಯ ಮಾಲಿಕತ್ವದಲ್ಲಿದೆ. ಈ ಕೇಂದ್ರವನ್ನು ನಡೆಸಲು ಅವರಿಗೆ ಪ್ರತಿದಿನ ೪೦೦ ರೂಪಾಯಿ ಕೊಡುತ್ತೇವೆ ಎಂದು ಹೇಳಿದರು. ಮಾರಾಟ ಕೇಂದ್ರ ನಡೆಸುವ ಇರ್ಫಾನನು, ನಾವು ಕಳೆದ ೫ ವರ್ಷದಿಂದ ಈ ಮಾರಾಟ ಕೇಂದ್ರ ನಡೆಸುತ್ತಿದ್ದೇವೆ. ಈ ಹೆಸರಿನಿಂದ ಈವರೆಗೆ ಯಾರಿಗೂ ಅಡಚಣೆ ಬರಲಿಲ್ಲ. ‘ಹೆಸರು’ ಒಂದು ಸಮಸ್ಯೆ ಆಗಬಹುದು ಎಂದು ನಾವು ಯಾವತ್ತೂ ವಿಚಾರ ಸಹ ಮಾಡಿರಲಿಲ್ಲ ಎಂದು ಹೇಳಿದನು. (ಮತಾಂಧರ ಚಾಲಾಕಿತನ ! – ಸಂಪಾದಕರು)