ಬಂಗಾಲದಲ್ಲಿ ಬಿಜೆಪಿ ಸಂಸದರ ನಿವಾಸದ ಮೇಲೆ ಬಾಂಬ್‌ನಿಂದ ದಾಳಿ !

ಜೀವಹಾನಿಯಾಗಿಲ್ಲ !

ರಾಜ್ಯಪಾಲರಿಂದ ಘಟನಾ ಸ್ಥಳಕ್ಕೆ ಹೋಗಿ ಪರಿಶೀಲನೆ

ತೃಣಮೂಲ ಕಾಂಗ್ರೆಸ್ ಆಡಳಿತದಲ್ಲಿ ಬಂಗಾಲದಲ್ಲಿ ಅರಾಜಕತೆ ಹರಡಿದೆ ಎಂಬುದು, ಈಗ ಸ್ಪಷ್ಟವಾಗುತ್ತಿದೆ !

ಯಾವ ರಾಜ್ಯದಲ್ಲಿ ಸಂಸದರಂತಹ ವ್ಯಕ್ತಿಯೇ ಸುರಕ್ಷಿತವಿಲ್ಲವೋ ಅಲ್ಲಿ ಸಾಮಾನ್ಯ ಮನುಷ್ಯನ ಭದ್ರತಾ ಪರಿಸ್ಥಿತಿ ಹೇಗಿರಬಹುದು, ಇದರ ಬಗ್ಗೆ ಕಲ್ಪನೆಯನ್ನು ಮಾಡಲು ಅಸಾಧ್ಯ !

ಕೋಲಕಾತಾ (ಬಂಗಾಲ) – ಸೆಪ್ಟೆಂಬರ್ ೭ ರ ರಾತ್ರಿ ಉತ್ತರ ೨೪ ಪರಗಣಾ ಮತದಾರ ಕ್ಷೇತ್ರದಲ್ಲಿ ಬಿಜೆಪಿಯ ರಾಜ್ಯ ಉಪಾಧ್ಯಕ್ಷ ಮತ್ತು ಸಂಸದ ಅರ್ಜುನ ಸಿಂಗ್ ಅವರ ನಿವಾಸದ ಮೇಲೆ ಬಾಂಬ್ ಎಸೆದ ಘಟನೆಯು ನಡೆದಿದೆ. ಈ ಸಮಯದಲ್ಲಿ ಭದ್ರತೆಗಾಗಿ ಪೊಲೀಸರನ್ನು ನಿಯೋಜಿಸಿದಾಗಲೂ ಈ ಘಟನೆ ನಡೆದಿದೆ. ಮನೆಯ ಮೇಲೆ ಬಾಂಬ್ ಎಸೆದ ಘಟನೆಯಾದಾಗ ಅರ್ಜುನ ಸಿಂಗರು ಹೊರಗೆ ಹೋಗಿದ್ದರು; ಆದರೆ ಅವರ ಕುಟುಂಬದವರು ನಿವಾಸದಲ್ಲಿದ್ದರು. ಪೊಲೀಸರು ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದರು. ಬಾಂಬ್ ಎಸೆದದವರನ್ನು ಪತ್ತೆ ಮಾಡಲಾಗುತ್ತಿದೆ.

ರಾಜ್ಯಪಾಲ ಜಗದೀನ ಧನಖಡ ಇವರು, ಬಂಗಾಲದಲ್ಲಿ ಹಿಂಸಾಚಾರ ಕೊನೆಗೊಳ್ಳುವ ಯಾವುದೇ ಲಕ್ಷಣಗಳಿಲ್ಲ. ಸಂಸದ ಅರ್ಜುನ ಸಿಂಗರ ನಿವಾಸದ ಮೇಲೆ ಬಾಂಬ್ ಎಸೆಯಲಾಗಿದೆ. ಇದು ಕಾನೂನು ಮತ್ತು ಸುವ್ಯವಸ್ಥೆಯ ದೃಷ್ಟಿಯಿಂದ ಕಳವಳಕಾರಿ ಸಂಗತಿಯಾಗಿದೆ. ಈ ವಿಷಯದಲ್ಲಿ ಬಂಗಾಲ ಪೊಲೀಸರು ತಕ್ಷಣ ಕ್ರಮ ಕೈಗೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ. ಸಿಂಗ ಅವರ ಸುರಕ್ಷತೆಗಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಈಗಾಗಲೇ ಬೇಡಿಕೆ ಸಲ್ಲಿಸಲಾಗಿದೆ. ಈ ಘಟನೆಯ ನಂತರ, ಬಂಗಾಲದಲ್ಲಿ ಚುನಾವಣೋತ್ತರ ಹಿಂಸಾಚಾರದ ನೆನಪುಗಳು ಮತ್ತೆ ಹಸಿರಾಗಿವೆ ಎಂದು ಹೇಳಿದ್ದಾರೆ. (ರಾಜ್ಯದಲ್ಲಿ ಇಂತಹ ಘಟನೆಗಳು ನಿರಂತರವಾಗಿ ನಡೆಯುತ್ತಿದ್ದರೆ ಮತ್ತು ಅದನ್ನು ತಡೆಯಲು ಸರಕಾರ ವಿಫಲವಾಗುತ್ತಿದ್ದರೆ, ರಾಷ್ಟ್ರಪತಿ ಆಳ್ವಿಕೆ ಏಕೆ ಹೇರಲಾಗುತ್ತಿಲ್ಲ ? – ಸಂಪಾದಕರು)