ಶಿಕ್ಷಕನನ್ನು ಅಮಾನತುಗೊಳಿಸುವ ಕ್ರಮ
* ಇಂತಹ ಶಿಕ್ಷಕನನ್ನು ಅಮಾನತುಗೊಳಿಸುವುದಲ್ಲ, ವಜಾಗೊಳಿಸಿ ಅವನನ್ನು ಬಂಧಿಸಿ ಜೈಲಿಗೆ ಕಳಿಸಬೇಕು, ಆಗಲೇ ಇತರರು ಇಂತಹ ಕೃತಿಗಳನ್ನು ಮಾಡಲು ಯಾರಿಗೂ ಧೈರ್ಯ ಬರುವುದಿಲ್ಲ ! – ಸಂಪಾದಕರು * ಭಾರತದಲ್ಲಿ ಈಶ ನಿಂದೆಯನ್ನು ತಡೆಯಲು ಕಾನೂನು ಮಾಡಲು ಸರಕಾರದ ಮೇಲೆ ಹಿಂದೂಗಳು ಒತ್ತಡ ಹೇರಬೇಕಿದೆ ! – ಸಂಪಾದಕರು |
ರಾಯಪುರ (ಛತ್ತೀಸಗಡ) – ರಾಜ್ಯದಲ್ಲಿನ ಕೊಂಡಗಾವ ಜಿಲ್ಲೆಯ ಬುಂದಾಪಾರಾದಲ್ಲಿನ ‘ಮಿಡಲ್ ಸ್ಕೂಲ್’ ಎಂಬ ಸರಕಾರಿ ಶಾಲೆಯಲ್ಲಿ ಶಿಕ್ಷಕನು ಭಗವಾನ ಶ್ರೀಕೃಷ್ಣನ ವಿಷಯದಲ್ಲಿ ಅಶ್ಲೀಲ ಹೇಳಿಕೆಗಳನ್ನು ನೀಡಿದ ಮತ್ತು ಉಪವಾಸ ಮಾಡಿರುವ 7ನೇ ಮತ್ತು 8ನೇ ತರಗತಿಯ ವಿದ್ಯಾರ್ಥಿಗಳನ್ನು ಹೊಡೆದಿರುವ ಘಟನೆ ನಡೆದಿದೆ. ಆರೋಪಿ ಶಿಕ್ಷಕ ಚರಣ ಮರಕಮನನ್ನು ಅಮಾನತುಗೊಳಿಸಲಾಗಿದೆ. ಈ ಶಿಕ್ಷಕನು ವಿದ್ಯಾರ್ಥಿಗಳಿಗೆ ‘ಯಾರೆಲ್ಲಾ ಶ್ರೀಕೃಷ್ಣ ಜಯಂತಿಯ ನಿಮಿತ್ತ ಭಗವಾನ ಶ್ರೀಕೃಷ್ಣನ ಪೂಜೆ ಮಾಡಿದ್ದೀರಿ ಮತ್ತು ಉಪವಾಸ ಮಾಡಿದ್ದೀರಿ ? ಎಂದು ಕೇಳಿದನು. ಹೀಗೆ ಮಾಡಿರುವುದಾಗಿ ಹೇಳಿದ ವಿದ್ಯಾರ್ಥಿಗಳನ್ನು ಶಿಕ್ಷಕನು ಹೊಡೆದಿದ್ದಾನೆ. ವಿದ್ಯಾರ್ಥಿಗಳು ಈ ಬಗ್ಗೆ ಪಾಲಕರಿಗೆ ತಿಳಿಸಿದಾಗ ಅವರು ಪೊಲೀಸರಲ್ಲಿ ದೂರನ್ನು ನೋಂದಾಯಿಸಿದರು.
Chhattisgarh: Teacher thrashes students for fasting on Janmashtami, suspended after complaint by villagershttps://t.co/X1LHFHm3e5
— OpIndia.com (@OpIndia_com) September 3, 2021