ತ್ರಿಪುರದಲ್ಲಿ ಬಿಜೆಪಿ ಮತ್ತು ಮಾಕಾಪ್ ವಿದ್ಯಾರ್ಥಿ ಸಂಘಟನೆಯ ಕಾರ್ಯಕರ್ತರಲ್ಲಿ ಹಿಂಸಾಚಾರ

ಕಮ್ಯುನಿಸ್ಟರ ಇತಿಹಾಸ ಮತ್ತು ವರ್ತಮಾನವು ಸಹ ಹಿಂಸಾಚಾರವೇ ಆಗಿದೆ, ಎಂಬುದು ಇದರಿಂದ ಮತ್ತೊಮ್ಮೆ ಸಾಬೀತಾಗುತ್ತಿದೆ ! – ಸಂಪಾದಕರು 

ಗೋಮತಿ (ತ್ರಿಪುರ) – ಗೋಮತಿ ಜಿಲ್ಲೆಯ ಉದಯಪುರ ನಗರದಲ್ಲಿ ಮಾಕ್ರ್ಸವಾದಿ ಕಮ್ಯುನಿಸ್ಟ್ ಪಕ್ಷಕ್ಕೆ ಸಂಬಂಧಿತ ವಿದ್ಯಾರ್ಥಿ ಸಂಘಟನೆ ‘ಡೆಮೊಕ್ರೆಟಿಕ್ ಯೂತ್ ಫೆಡರೇಶನ್ ಆಫ್ ಇಂಡಿಯಾ’ ಮತ್ತು ಬಿಜೆಪಿಯ ಕಾರ್ಯಕರ್ತರ ನಡುವೆ ಹಿಂಸಾಚಾರದ ಘಟನೆ ನಡೆದಿದೆ. ಈ ವಿದ್ಯಾರ್ಥಿ ಸಂಘಟನೆಯಿಂದ ಒಂದು ಮೆರವಣಿಗೆಯನ್ನು ಆಯೋಜಿಸಲಾಗಿತ್ತು. ಈ ಸಮಯದಲ್ಲಿ ಬಿಜೆಪಿಯ ಕಾರ್ಯಕರ್ತರ ಜೊತೆ ಕ್ಷುಲ್ಲಕ ಕಾರಣಗಳಿಂದ ವಾದ-ವಿವಾದ ನಡೆಯಿತು. ಮತ್ತು ಈ ವಾದವಿವಾದದಿಂದ ಹಿಂಸಾಚಾರ ನಡೆಯಿತು. ಇದರಲ್ಲಿ ಬಿಜೆಪಿಯ ಒಬ್ಬ ಕಾರ್ಯಕರ್ತ ಗಂಭೀರವಾಗಿ ಗಾಯಗೊಂಡದ್ದು ವಿದ್ಯಾರ್ಥಿ ಸಂಘಟನೆಯ 2 – 3 ಕಾರ್ಯಕರ್ತರು ಗಾಯಗೊಂಡಿದ್ದಾರೆ. ಹಿಂಸಾಚಾರದ ನಂತರ ಅಗರ್ತಲಾ ಮತ್ತು ವಿಶಾಲಗಡ ಇಲ್ಲಿಯ ಮಾಕಪ.ದ ಕಾರ್ಯಾಲಯವನ್ನು ಧ್ವಂಸ ಮಾಡಲಾಯಿತು. ಹಾಗೂ ಕಾರ್ಯಾಲಯಕ್ಕೆ ಬೆಂಕಿ ಹಚ್ಚಲಾಯಿತು. ಮಾಜಿ ಶಾಸಕ ರತನ ಭೌಮಿಕ ಇವರ ವಾಹನಕ್ಕೂ ಬೆಂಕಿ ಹಚ್ಚಲಾಯಿತು. ಕೃಷಿ ಸಚಿವ ಪ್ರಣಜಿತ ಸಿಂಹ ರಾಯ ಇವರು ಘಟನಾ ಸ್ಥಳಕ್ಕೆ ತೆರಳಿ ಹಿಂಸಾಚಾರ ಮಾಹಿತಿಯನ್ನು ಪಡೆದರು. `ಮಾಕಪನ ವಿದ್ಯಾರ್ಥಿ ಸಂಘಟನೆಯವರು ಪೊಲೀಸರ ಅನುಮತಿ ಪಡೆಯದೆ ಮೆರವಣಿಗೆ ನಡೆಸಿದ್ದರು’ ಎಂದು ರಾಯ ಆರೋಪಿಸಿದ್ದಾರೆ.