ತಾಲಿಬಾನ್‌ನಲ್ಲಿ ಸೇರ್ಪಡೆಯಾಗಲು ಭಾರತದ ಮೂಲಕ ಅಫಘಾನಿಸ್ತಾನಕ್ಕೆ ಹೋಗುವ ಪ್ರಯತ್ನದಲ್ಲಿರುವ ಬಾಂಗ್ಲಾದೇಶೀ ಮತಾಂಧರು !

ಗಡಿ ಸುರಕ್ಷಾ ದಳ ಸತರ್ಕ !

ತಾಲಿಬಾನ್‌ನಿಂದ ಭಾರತಕ್ಕೆ ಎದುರಾಗಿರುವ ಇನ್ನೊಂದು ದೊಡ್ಡ ಸಂಕಟ ! ಈ ಬಾಂಗ್ಲಾದೇಶೀ ಮತಾಂಧರು ಭಾರತದೊಳಗೆ ನುಸುಳಿ ಮೊದಲು ಭಾರತ ವಿರೋಧಿ ಕೃತ್ಯಗಳನ್ನು ಮಾಡಿ ನಂತರ ಅಫಘಾನಿಸ್ತಾನಕ್ಕೆ ಹೋದರೂ ಅದರ ಬಗ್ಗೆ ಆಶ್ಚರ್ಯ ಪಡಬೇಕಾಗಿಲ್ಲ ! ಇದನ್ನು ನಿಲ್ಲಿಸಲು ಭಾರತ ಸರಕಾರವು ಕಠೋರ ಹೆಜ್ಜೆಯಿಡವುದು ಅಗತ್ಯ !

ನವ ದೆಹಲಿ – ಅಫಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರ ಪಡೆದುಕೊಂಡ ಬಳಿಕ ಕೆಲವು ಬಾಂಗ್ಲಾ ದೇಶೀಮತಾಂಧರು ಭಾರತದ ಮಾರ್ಗವಾಗಿ ಅಫಘಾನಿಸ್ತಾನಕ್ಕೆ ಹೋಗಲು ಪ್ರಯತ್ನಿಸುತ್ತಿದ್ದಾರೆ. ಇವರೆಲ್ಲರೂ ತಾಲಿಬಾನ್‌ನಲ್ಲಿ ಸೇರ್ಪಡೆಯಾಗಲು ಹೋಗುತ್ತಿದ್ದಾರೆಂದು ಹೇಳಲಾಗುತ್ತಿದೆ.

1. ಬಾಂಗ್ಲಾದೇಶದ ರಾಜಧಾನಿಯಾದ ಢಾಕಾದ ಪೊಲೀಸು ಆಯುಕ್ತರಾದ ಶಫಿಕುಲ್ ಇಸ್ಲಾಮ್‌ರವರು, ಈ ಯುವಕರಿಗೆ ಯಾವುದೇ ದಾರಿಯಲ್ಲಾದರೂ ಅಫಘಾನಿಸ್ತಾನ ತಲುಪಬೇಕಾಗಿದೆ; ಆದರೆ ಅವರು ಒಟ್ಟು ಎಷ್ಟು ಜನರಿದ್ದಾರೆ ಎಂಬ ಮಾಹಿತಿಯಿಲ್ಲ. ೨೦ ವರ್ಷಗಳ ಹಿಂದೆ ತಾಲಿಬಾನ್‌ನಲ್ಲಿ ಭಾಗವಹಿಸಲು ಬಾಂಗ್ಲಾದೇಶದಿಂದ ಅಪಾರ ಸಂಖ್ಯೆಯಲ್ಲಿ ಯುವಕರು ಅಫಘಾನಿಸ್ತಾನಕ್ಕೆ ಹೋಗಿದ್ದರು ಎಂದು ಹೇಳಿದ್ದಾರೆ.

2. ಗಡಿ ಸುರಕ್ಷಾ ದಳದ ದಕ್ಷಿಣ ಬಂಗಾಳ ಫ್ರಾಂಟಿಯರ್‌ನ ಪೊಲೀಸ್ ಉಪಮಹಾನಿರೀಕ್ಷಕರಾದ ಎಸ್.ಎಸ್. ಗುಲೇರಿಯಾರವರು ಈ ವಿಷಯವಾಗಿ, ನಮ್ಮ ಸೈನಿಕರು ಎಚ್ಚರಿಕೆಯಿಂದ ಇದ್ದಾರೆ. ಇಲ್ಲಿಯವರೆಗೂ ನಾವು ತಾಲಿಬಾನ್‌ನಲ್ಲಿ ಭಾಗವಹಿಸಲು ಭಾರತದೊಳಗೆ ನುಸುಳಲು ಪ್ರಯತ್ನಿಸಿದ ಯಾವುದೇ ಯುವಕನನ್ನೂ ಬಂಧಿಸಿಲ್ಲ. ಬಾಂಗ್ಲಾದೇಶದಲ್ಲಿನ ಅಧಿಕಾರಿಗಳು ಭಾರತದಲ್ಲಿನ ಅಧಿಕಾರಿಗಳಿಗೆ ಅಫಘಾನಿಸ್ತಾನವನ್ನು ತಾಲಿಬಾನಿಗಳು ವಶಪಡಿಸಿಕೊಂಡಿರುವುದರಿಂದ ಬಾಂಗಲಾದೇಶದಲ್ಲಿನ ಕೆಲವು ಜಿಹಾದಿಗಳು ತುಂಬಾ ಉತ್ಸಾಹದಲ್ಲಿದ್ದಾರೆಂದು ಮೊದಲೇ ತಿಳಿಸಿಟ್ಟಿದ್ದಾರೆ.

3. ತಾಲಿಬಾನ್ ಸಹ ಬಾಂಗ್ಲಾದೇಶೀ ಯುವಕರಿಗೆ ತಮ್ಮ ಸಂಘಟನೆಗೆ ಸೇರ್ಪಡೆಯಾಗಲು ಆಹ್ವಾನ ನೀಡಿದೆ. ಇದರ ಮೇಲೆ ‘ಅಫಘಾನಿಸ್ತಾನದ ಘಟನಾವಳಿಗಳನ್ನು ಬಹಳ ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ ಎಂದು ಬಾಂಗ್ಲಾದೇಶೀ ವಿದೇಶಾಂಗ ಮಂತ್ರಾಲಯವು ಹೇಳಿದೆ.