ದೇಶದಲ್ಲಿ ಅಲ್ಪಸಂಖ್ಯಾತರು, ಆದರೆ ಅಪರಾಧ ಕ್ಷೇತ್ರದಲ್ಲಿ ಬಹುಸಂಖ್ಯಾತರಾಗಿರುವ ಮುಸಲ್ಮಾನರು !
ನವದೆಹಲಿ – ಮದರಸಾಗಳಿಗೆ ದುಡ್ಡನ್ನು ಸಂಗ್ರಹಿಸುವ ಹೆಸರಿನಲ್ಲಿ ಮನೆಗಳ ಮಾಹಿತಿ ಪಡೆದು ಅಲ್ಲಿ ಕಳ್ಳತನ ಮಾಡುತ್ತಿದ್ದ ಮಹಮ್ಮದ್ ಅಖಲಾಖನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಶಾಹಿನಬಾಗ್‍ನ ಒಬ್ಬ ಮಹಿಳೆಯ ಮನೆಯಿಂದ ಎರಡು ಸಂಚಾರವಾಣಿ ಮತ್ತು 12 ಸಾವಿರ ರೂಪಾಯಿಗಳನ್ನು ಅಖಲಾಖನು ಕದ್ದಿದ್ದನು. ಈ ಘಟನೆಯ ವಿಚಾರಣೆಯಲ್ಲಿ ಕದ್ದಿರುವ ಸಂಚಾರವಾಣಿಯು ಉತ್ತರಪ್ರದೇಶದ ಬಿಜನೌರನಲ್ಲಿ ಕಾರ್ಯನಿರತವಾಗಿರುವುದನ್ನು ಗಮನಿಸಿದ ಪೊಲೀಸರು ನವಾಬ ಹುಸೇನ ಎಂಬಾತನನ್ನು ಬಂಧಿಸಿದರು. ಆತನಿಗೆ ಅಖಲಾಖನು ಸಂಚಾರವಾಣಿಯನ್ನು ಕೊಟ್ಟಿದ್ದನು. ಆತ ನೀಡಿರುವ ಮಾಹಿತಿಯ ಪ್ರಕಾರ ಪೊಲೀಸರು ಅಖಲಾಖನನ್ನು ಬಂಧಿಸಿದರು. ಅಖಾಲಾಖನು ‘ನಾನು ಬಡವನಾಗಿದ್ದರಿಂದ ಮುಸಲ್ಮಾನ ಬಹುಸಂಖ್ಯಾತವಿರುವ ಪ್ರದೇಶಗಳಿಗೆ ಹೋಗಿ ಮದರಸಾಗಳಿಗೆ ಹಣ ಬೇಡುತ್ತೇನೆ ಮತ್ತು ಅದೇ ಸಮಯಕ್ಕೆ ಹೊಂಚುಹಾಕಿ ಅಥವಾ ಮಾಹಿತಿ ಪಡೆದು ನಂತರ ಮನೆಗಳಲ್ಲಿ ಕಳ್ಳತನ ಮಾಡುತ್ತೇನೆ’ ಎಂದು ಹೇಳಿದನು.