ಛತ್ತೀಸಗಡನಲ್ಲಿ ಮತಾಂತರ ಪ್ರಕರಣದಲ್ಲಿ ಪೊಲೀಸ್ ಠಾಣೆಗೆ ನುಗ್ಗಿ ಪಾದ್ರಿ ಸಹಿತ ಅವರ ಜೊತೆಯಲ್ಲಿದ್ದರನ್ನು ಹಿಗ್ಗಾಮುಗ್ಗಾ ಥಳಿಸಿದ ಗುಂಪು!

ಇನ್ನೊಂದು ಪ್ರಕರಣದಲ್ಲಿ ಕ್ರೈಸ್ತ ಧರ್ಮಪ್ರಚಾರಕನ ಮನೆಗೆ ನುಗ್ಗಿ ಹಿಗ್ಗಾಮುಗ್ಗಾ ಥಳಿಸಿದ ಗುಂಪು !

* ಕ್ರೈಸ್ತ ಪ್ರೇಮಿ ಕಾಂಗ್ರೆಸ್ ರಾಜ್ಯದಲ್ಲಿ ಕ್ರೈಸ್ತ ಧರ್ಮ ಪ್ರಚಾರಕರ ಓಡಾಟ ಹೆಚ್ಚಿದ್ದರಿಂದ ಮತ್ತು ಅವರಿಂದ ಸಮಾಜಕ್ಕೆ ತೊಂದರೆಯಾದರೆ ಆಶ್ಚರ್ಯವೇನೂ ಇಲ್ಲ ? ಛತ್ತಿಸಗಢದಲ್ಲಿ ಮತಾಂತರದ ಮೇಲೆ ಹಿಡಿತ ಸಾಧಿಸಲು ಅಸಾಧ್ಯವಾದುದರಿಂದ ಗುಂಪುಗಳು ಕಾನೂನನ್ನು ಕೈಗೆತ್ತಿಕೊಳ್ಳುತ್ತಿವೆ. ಅದಕ್ಕೆ ಕಾಂಗ್ರೆಸ್ಸಿನ ಕ್ರೈಸ್ತರ ಓಲೈಕೆಯ ಧೋರಣೆಯೇ ಕಾರಣವಾಗಿದೆ.- ಸಂಪಾದಕರು 

* ಕೇಂದ್ರ ಸರಕಾರವು ಆದಷ್ಟು ಬೇಗನೆ ಮತಾಂತರ ವಿರೋಧಿ ಕಾನೂನು ಜಾರಿಗೆ ತರುವ ಅಗತ್ಯವಿದೆ ಇಲ್ಲವಾದರೆ ಇಂತಹ ಘಟನೆಗಳು ಎಲ್ಲೆಂದರಲ್ಲಿ ನಡೆದು ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಯು ನಿರ್ಮಾಣವಾಗಿ ದೇಶದಲ್ಲಿ ಶಾಂತಿ ಕದಡಬಹುದು !- ಸಂಪಾದಕರು 

ರಾಯಪುರ (ಛತ್ತಿಸಗಢ) – ಇಲ್ಲಿಯ ಬಸ್ತಿ ಪೊಲೀಸು ಠಾಣೆಯಲ್ಲಿ ಪೊಲೀಸರು ಹರೀಶ ಸಾಹು ಎಂಬ ಪಾದ್ರಿಯನ್ನು ಮತಾಂತರದ ಆರೋಪದ ಪ್ರಕರಣದಲ್ಲಿ ಪೊಲೀಸ್ ಠಾಣೆಗೆ ಕರೆಸಿದ್ದರು. ಅವನ ಜೊತೆಗೆ ಛತ್ತಿಸಗಡ ಕ್ರಿಶ್ಚನ್ ಫೋರಂನ ಕಾರ್ಯದರ್ಶಿ ಅಂಕುಶ ಬರಿಯಕರ ಮತ್ತು ಪ್ರಕಾಶ ಮಸಿಹ ಇವರು ಬಂದಿದ್ದರು. (ಮತಾಂತರಗೊಂಡಿರುವ ಈ ಮತಾಂತರಿತರು ತಮ್ಮ ಹಿಂದೂ ಹೆಸರುಗಳನ್ನು ಹಾಗೆ ಇಟ್ಟುಕೊಳ್ಳುತ್ತಾರೆ. ಇದರಿಂದ ಅನ್ಯ ಹಿಂದೂಗಳನ್ನು ದಾರಿತಪ್ಪಿಸಿ ಅವರನ್ನು ಮತಾಂತರಿಸಲು ಅವರಿಗೆ ಸುಲಭವಾಗುತ್ತದೆ, ಇದನ್ನು ಗಮನದಲ್ಲಿಡಿ ! ಸಂಪಾದಕರು) ಈ ಮೂವರನ್ನು ಗುಂಪೊಂದು ಪೊಲೀಸು ಠಾಣೆಗೆ ನುಗ್ಗಿ ಹಿಗ್ಗಾ ಮುಗ್ಗಾ ಹೊಡೆಯಿತು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿದೆ. ಈ ಘಟನೆಯ ವಿರುದ್ಧ ಕ್ರೈಸ್ತರಿಂದ ಪೊಲೀಸು ಠಾಣೆಯ ಹೊರಗೆ ಪ್ರಾರ್ಥನೆಯನ್ನು ಮಾಡಲಾಯಿತು, ಹಿಂದೂಗಳಿಂದ ಹನುಮಾನ ಚಾಲಿಸ ಪಠಣ ಮಾಡಲಾಯಿತು.

(ಸೌಜನ್ಯ :Cobrapost)

ಕಬೀರಧಾಮ ಜಿಲ್ಲೆಯಲ್ಲಿ ಹಿಂದೂಗಳನ್ನು ಮತಾಂತರಿಸುವ ಕ್ರೈಸ್ತ ಧರ್ಮ ಪ್ರಚಾರಕರನಿಗೇ ಥಳಿತ !

ಇನ್ನೊಂದು ಘಟನೆಯಲ್ಲಿ ಕಬೀರಧಾಮ ಜಿಲ್ಲೆಯಲ್ಲಿ ಒಂದು ದುರ್ಗಮ ಊರಿನಲ್ಲಿ ಕವಲ್ ಸಿಂಹ ಪರಸ್ತೆ ಎಂಬ ಹೆಸರಿನ ಕ್ರೈಸ್ತ ಧರ್ಮಪ್ರಚಾರಕನ ಮನೆಗೆ ನುಗ್ಗಿ ಊರಿನವರು ಅವನನ್ನು ಹಿಗ್ಗಾಮುಗ್ಗಾ ಹೊಡೆದರು. ಆ ಸಮಯದಲ್ಲಿ ಸಮೂಹವು ಆದಿವಾಸಿಗಳನ್ನು ಮತಾಂತರಿಸುವುದನ್ನು ನಿಲ್ಲಿಸಲು ಘೋಷಣೆಯನ್ನು ಕೂಗಿದರು. ಗುಂಪುಸೇರಿದವರು ಕ್ರೈಸ್ತ ಧರ್ಮಪ್ರಚಾರಕರಿಗೆ ಆದಿವಾಸಿಗಳನ್ನು ಮತಾಂತರಿಸಬಾರದು ಎಂದು ತಿಳುವಳಿಕೆಯನ್ನು ಸಹ ನೀಡಿದ್ದಾರೆ. ಛತ್ತಿಸಗಢದ `ಕ್ರಿಶ್ಚನ್ ಫೋರಂ’ ನ ಅಧ್ಯಕ್ಷರು ರಾಜ್ಯ ಸರಕಾರ ಮತ್ತು ಪೊಲೀಸ ಇವರ ಮೇಲೆ ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಆರೋಪ ಮಾಡಿದ್ದರು. (ಕ್ರೈಸ್ತರ ಆರ್ಭಟ ! ಗುಂಪು ಆಕ್ರೋಶಗೊಳ್ಳಲು ಮತಾಂಧ ಕ್ರೈಸ್ತರ ಕೃತ್ಯಗಳೇ ಕಾರಣವಾಗಿವೆ. ಆದ್ದರಿಂದ ಇಂತಹ ಮತಾಂಧ ಕ್ರೈಸ್ತರ ಮೇಲೆ ಮೊದಲು ಕ್ರಮಕೈಗೊಳ್ಳುವುದು ಅವಶ್ಯಕ ! – ಸಂಪಾದಕರು)