ದುಡ್ಡಿನ ಆಮಿಷವೊಡ್ಡಿ ಹಿಂದೂಗಳನ್ನು ಮತಾಂತರಿಸುತ್ತಿದ್ದ ಮತಾಂತರಿತ ಕ್ರೈಸ್ತನ ಬಂಧನ !

ದೇಶದಲ್ಲಿ ಮತಾಂತರ ವಿರೋಧಿ ಕಾಯ್ದೆ ಮತ್ತು ಕಠಿಣ ಶಿಕ್ಷೆ ಇಲ್ಲದ್ದರಿಂದ ಹಿಂದೂಗಳನ್ನು ಈ ರೀತಿಯಾಗಿ ಮತಾಂತರಿಸುವ ಪ್ರಯತ್ನಗಳನ್ನು ಕ್ರೈಸ್ತರು ಮಾಡುತ್ತಿರುತ್ತಾರೆ. ಇದು ಸರಕಾರದ ಗಮನಕ್ಕೆ ಯಾವಾಗ ಬರುವುದು ? – ಸಂಪಾದಕರು 

ಆಝಮಗಡ (ಉತ್ತರಪ್ರದೇಶ) – ಇಲ್ಲಿಯ ಕರತಾಲಪುರ ಪೊಲೀಸರು ರಾಮಚಂದ್ರನೆಂಬ ಹೆಸರಿನ ಮತಾಂತರಿತ ಕ್ರೈಸ್ತನನ್ನು ವಾರಾಣಸಿಯಿಂದ ಬಂಧಿಸಿದ್ದಾರೆ. ಈತ ಕರತಾಲಪುರದಲ್ಲಿ ಹಣದ ಆಮಿಷವೊಡ್ಡಿ ಹಿಂದೂಗಳನ್ನು ಮತಾಂತರವಾಗಲು ಹೇಳುತ್ತಿದ್ದನು, ಹಾಗೆಯೇ ಈ 500 ರೂಪಾಯಿಗಳಿಗೆ ಬದಲಾಗಿ ಹಿಂದೂಗಳ ದೇವತೆಯನ್ನು ಬಯ್ಶಲು ದಲಿತ ಮಹಿಳೆಯರಿಗೆ ಹೇಳುತ್ತಿದ್ದನು. ಪೊಲೀಸರು ಇವನ ಸಹಚರನನ್ನು ಹುಡುಕುತ್ತಿದ್ದಾರೆ. ಹಾಗೆಯೇ ಆತ ಎಷ್ಟು ಜನ ಹಿಂದೂಗಳನ್ನು ಮತಾಂತರಿಸಿದ್ದಾನೆ ಎಂಬುದರ ಹುಡುಕಾಟ ಕೂಡ ಮಾಡಲಾಗುತ್ತಿದೆ. (ಕೇವಲ ಶೋಧ ಮಾಡದೆ ಆ ಹಿಂದೂಗಳನ್ನು ಮತ್ತೆ ಹಿಂದೂ ಧರ್ಮಕ್ಕೆ ವಾಪಾಸು ಕರೆತರಲು ಪ್ರಯತ್ನಿಸಬೇಕಾಗಿದೆ ! – ಸಂಪಾದಕರು)