ಹಿಂದೂ ದೇವತೆಗಳ ಚಿತ್ರಗಳಿರುವ ದಿನಪತ್ರಿಕೆಗಳನ್ನು ಮಾಂಸಗಳನ್ನು ಇಡಲು ಬಳಕೆ

ಇಲ್ಲಿನ ಹೋಟೆಲನಲ್ಲಿ ಹಿಂದೂ ದೇವತೆಗಳ ಚಿತ್ರಗಳು ಮುದ್ರಿಸಿರುವ ದಿನಪತ್ರಿಕೆಗಳನ್ನು ಮಾಂಸ ಇಡಲು ಬಳಸುತ್ತಿರುವುದು ಬೆಳಕಿಗೆ ಬಂದಿದೆ. ಪೊಲೀಸರು ಹೋಟೆಲ ವ್ಯವಸ್ಥಾಪಕ ತಾಲಿಬ ಹುಸೇನನನ್ನು ಹೀಗೆ ಮಾಡುವದನ್ನು ತಡೆಯಲು ಮುಂದಾದಾಗ ಅವನು ಪೊಲೀಸರ ಮೇಲೆ ಹರಿತವಾದ ಆಯುಧಗಳಿಂದ ಹಲ್ಲೆ ನಡೆಸಿದನು.

ಫೈಜಲ್ ಮತ್ತು ಅವನ ೮ ಸಹಚರರಿಂದ ಬಿಲಾಸ್‌ಪುರ (ಛತ್ತೀಸ್‌ಗಢ) ನಲ್ಲಿ ಹಿಂದೂ ಸಹೋದರರ ಮೇಲೆ ದಾಳಿ !

ಬಿಲಾಸ್‌ಪುರ ಜಿಲ್ಲೆಯ ಇಬ್ಬರು ಸಹೋದರರಾದ ಜಯಕುಮಾರ ಮಿಶ್ರಾ ಮತ್ತು ಓಂಕುಮಾರ ಮಿಶ್ರಾ ಅವರ ಮೇಲೆ ಜುಲೈ ೩ ರ ಸಂಜೆ ಫೈಜಲ್ ಮತ್ತು ಇತರ ಎಂಟು ಮಂದಿ ಹಲ್ಲೆ ನಡೆಸಿದ್ದಾರೆ. ದಾಳಿಯಲ್ಲಿ ಇಬ್ಬರು ಸಹೋದರರು ಗಾಯಗೊಂಡಿದ್ದಾರೆ.

ಗುನಾ (ಮಧ್ಯಪ್ರದೇಶ)ದಲ್ಲಿ ಭೂಮಿಯ ವಾದದಿಂದಾಗಿ ಆದಿವಾಸಿ ಮಹಿಳೆಯನ್ನು ಜೀವಂತವಾಗಿ ಸುಡುವ ಪ್ರಯತ್ನ

ಇಲ್ಲಿನ ಧನೋರಿಯಾ ಎಂಬ ಊರಿನ ಓರ್ವ ಆದಿವಾಸಿ ಮಹಿಳೆಯನ್ನು ಭೂಮಿಯ ವಾದದಿಂದಾಗಿ ಕೆಲವರು ಜೀವಂತವಾಗಿ ಸುಡಲು ಪ್ರಯತ್ನಿಸಿದರು. ಇದರಲ್ಲಿ ಆ ಮಹಿಳೆಯು ಶೇ. ೮೦ ಸುಟ್ಟುಹೋಗಿದ್ದಾಳೆ. ಆಕೆಯನ್ನು ಉಪಚಾರಕ್ಕಾಗಿ ಭೋಪಾಲದಲ್ಲಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ದೇವಸ್ಥಾನದಲ್ಲಿ ಮಲಗಿರುವ ಯುವಕನ ಅಜ್ಞಾತರಿಂದ ಶಿರಚ್ಛೇದ ಮಾಡಿ ಹತ್ಯೆ

ಇಲ್ಲಿಯ ಭುವಾಪುರ ದೇವಗಾವ ಎಂಬಲ್ಲಿ ಹನುಮಾನ ದೇವಸ್ಥಾನದಲ್ಲಿ ಪಂಕಜ ಶುಕ್ಲಾ ಎಂಬ ೩೫ ವಯಸ್ಸಿನ ಯುವಕನ ಶಿರಚ್ಛೇದ ಮಾಡಿ ಹತ್ಯೆ ಮಾಡಲಾಗಿದೆ. ಮನೆಯಲ್ಲಿ ಸೆಕೆ ಹೆಚ್ಚಾಗಿರುವುದರಿಂದ ಪಂಕಜ ದೇವಸ್ಥಾನದಲ್ಲಿ ಮಲಗಿರುವಾಗ ಕೆಲವು ಅಜ್ಞಾತರು ಅವರ ಹತ್ಯೆ ಮಾಡಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಬಂಧನದ ವೇಳೆ ಆರೋಪಿಗಳಿಗೆ ಕೈಕೋಳ ಹಾಕುವಂತಿಲ್ಲ ! – ಕರ್ನಾಟಕ ಉಚ್ಚ ನ್ಯಾಯಾಲಯ

ಯಾವುದೇ ಆರೋಪಿಯನ್ನು ಬಂಧಿಸುವಾಗ ಅವನಿಗೆ ಕೈಕೋಳ ಹಾಕುವಂತಿಲ್ಲ ಎಂದು ಕರ್ನಾಟಕ ಉಚ್ಚ ನ್ಯಾಯಾಲಯ ತೀರ್ಪು ನೀಡಿದೆ. ಈ ಸಮಯದಲ್ಲಿ ನ್ಯಾಯಾಲಯವು ಆರೋಪಿಯ ಕೈಕೋಳ ಹಾಕಿ ಸಾರ್ವಜನಿಕ ಸ್ಥಳದಲ್ಲಿ ತಿರುಗಿಸಿದ ಪ್ರಕರಣದಲ್ಲಿ ಆರೋಪಿಗೆ ೨ ಲಕ್ಷ ರೂಪಾಯಿಗಳ ಪರಿಹಾರ ನೀಡುವಂತೆ ಆದೇಶಿಸಿದೆ.

ಹಿಂದೂದ್ವೇಷಿ ಮಹಮ್ಮದ ಜುಬೇರನ ಸಮರ್ಥನೆಯಲ್ಲಿ ‘ಎಡಿಟರ್ಸ ಗಿಲ್ಡ್ ಆಫ್ ಇಂಡಿಯಾ’ದಿಂದ ಮನವಿ!

ಹಿಂದೂಗಳ ದೇವತೆಗಳಿಗೆ ಅವಮಾನ ಮಾಡಿರುವ ಪ್ರಕರಣದಲ್ಲಿ ಬಂಧಿತನಾಗಿರುವ `ಅಲ್ಟ್ ನ್ಯೂಜ’ನ ಸಹ ಸಂಸ್ಥಾಪಕ ಮಹಮ್ಮದ ಜುಬೇರ ಎಂಬವನ ಸಮರ್ಥನೆಗೆ ಸಂಪಾದಕರ ಸಂಘಟನೆಯಾದ `ಎಡಿಟರ್ಸ ಗಿಲ್ಡ್ ಆಫ್ ಇಂಡಿಯಾ’ ಮುಂದಾಗಿದೆ.

ಪಾಕಿಸ್ತಾನದಲ್ಲಿ ಓರ್ವ ಅಪ್ರಾಪ್ತ ಹಿಂದೂ ಹುಡುಗನ ಅಪಹರಣ !

ಪಾಕಿಸ್ತಾನದ ಸಿಂಧ್ ಪ್ರಾಂತದಲ್ಲಿ ಜೂನ್ ೨೮ ರ ಬೆಳಿಗ್ಗೆ ಎರಡು ದ್ವಿ ಚಕ್ರವಾಹನ ಸವಾರರು ಆದೇಶ ಕುಮಾರ ಎಂಬ ಅಪ್ರಾಪ್ತ ಹಿಂದೂ ಹುಡುಗನ ಅಪಹರಣ ಮಾಡಿದರು. ಅವನು ಮನೆಯ ಹೊರಗೆ ತನ್ನ ಸ್ನೇಹಿತರ ಜೊತೆಗೆ ಆಟ ಆಡುತ್ತಿದ್ದಾಗ ಈ ಘಟನೆ ನಡೆದಿದೆ.

ಸಂಭಲ (ಉತ್ತರಪ್ರದೇಶ) ಇಲ್ಲಿಯ ಪೊಲೀಸ್ ಪೇದೆ ಸರ್ವಸ್ವವನ್ನು ತ್ಯಾಗ ಮಾಡಿ ಈಶ್ವರ ಭಕ್ತಿ ಮಾಡುವುದನ್ನು ರ್ನಿಧರಿಸಿದ್ದಾರೆ !

ಜಿಲ್ಲೆಯ ಗುನ್ನೌರ ಗ್ರಾಮದಿಂದ ೩ ತಿಂಗಳ ಹಿಂದೆ ನಾಪತ್ತೆಯಾಗಿದ್ದ ಪೊಲೀಸ್ ಪೇದೆ ಶಕ್ತಿಸಿಂಹ ಇವರನ್ನು ಪೊಲೀಸರು ಹುಡುಕುತ್ತಿದ್ದರು. ಕೊನೆಗೆ ಅವರು ಹರಿದ್ವಾರದ ಒಂದು ದೇವಸ್ಥಾನದಲ್ಲಿ ಸಾಧನೆ ಮಾಡುತ್ತಿರುವುದು ಪೊಲೀಸರಿಗೆ ತಿಳಿಯಿತು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅನಧಿಕೃತವಾಗಿ ವಾಸಿಸುತ್ತಿರುವ ವಿದೇಶಿ ನಾಗರಿಕರ ಸಮೀಕ್ಷೆ ಮಾಡಿ ! – ಗೃಹ ಸಚಿವ

‘ವೀಸಾದ ಅವಧಿ ಮುಗಿದರೂ ಅನಧಿಕೃತವಾಗಿ ಮತ್ತು ಅಧಿಕೃತ ದಾಖಲೆಗಳು ಇಲ್ಲದಿರುವಾಗಲೂ ಕರ್ನಾಟಕದಲ್ಲಿ ವಾಸಿಸುವ ವಿದೇಶಿ ನಾಗರಿಕರನ್ನು ಹುಡುಕುವುದು ಸಮೀಕ್ಷೆಯ ಉದ್ದೇಶವಾಗಿದೆಯೆಂದು ಜ್ಞಾನೇಂದ್ರ ಇವರು ಹೇಳಿದರು.

೧೨ ಮುಸ್ಲಿಂ ಯುವತಿಯರನ್ನು ಮದುವೆಯಾಗಿ ವೇಶ್ಯಾವಾಟಿಕೆಗೆ ತಳ್ಳಿದ್ದ ಶಂಶಾದ ಬಂಧನ

ಬಿಹಾರದ ಕಿಶನಗಂಜ ಜಿಲ್ಲೆಯ ನಿವಾಸಿ ೩೨ ವರ್ಷದ ಮೊಹಮ್ಮದ ಶಂಶಾದ ಅಲಿಯಾಸ್ ಮನೋಹರ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ೧೨ ಮುಸ್ಲಿಮ ಹುಡುಗಿಯರನ್ನು ವಂಚಿಸಿ ಮದುವೆಯಾಗಿ ನಂತರ ವೇಶ್ಯಾವಾಟಿಕೆಗೆ ತಳ್ಳಿದ್ದ.