ಗುನಾ (ಮಧ್ಯಪ್ರದೇಶ)ದಲ್ಲಿ ಭೂಮಿಯ ವಾದದಿಂದಾಗಿ ಆದಿವಾಸಿ ಮಹಿಳೆಯನ್ನು ಜೀವಂತವಾಗಿ ಸುಡುವ ಪ್ರಯತ್ನ

ಗುನಾ (ಮಧ್ಯಪ್ರದೇಶ) – ಇಲ್ಲಿನ ಧನೋರಿಯಾ ಎಂಬ ಊರಿನ ಓರ್ವ ಆದಿವಾಸಿ ಮಹಿಳೆಯನ್ನು ಭೂಮಿಯ ವಾದದಿಂದಾಗಿ ಕೆಲವರು ಜೀವಂತವಾಗಿ ಸುಡಲು ಪ್ರಯತ್ನಿಸಿದರು. ಇದರಲ್ಲಿ ಆ ಮಹಿಳೆಯು ಶೇ. ೮೦ ಸುಟ್ಟುಹೋಗಿದ್ದಾಳೆ. ಆಕೆಯನ್ನು ಉಪಚಾರಕ್ಕಾಗಿ ಭೋಪಾಲದಲ್ಲಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಈ ಪ್ರಕರಣದಲ್ಲಿ ಪೊಲೀಸರು ಇಬ್ಬರನ್ನು ಬಂಧಿಸಿದ್ದರು ಓಡಿ ಹೋಗಿರುವ ಇನ್ನೂ ಮೂವರ ಹುಡುಕಾಟದಲ್ಲಿದ್ದಾರೆ.