ಹಿಂದೂದ್ವೇಷಿ ಮಹಮ್ಮದ ಜುಬೇರನ ಸಮರ್ಥನೆಯಲ್ಲಿ ‘ಎಡಿಟರ್ಸ ಗಿಲ್ಡ್ ಆಫ್ ಇಂಡಿಯಾ’ದಿಂದ ಮನವಿ!

ಹೊಸ ದೆಹಲಿ – ಹಿಂದೂಗಳ ದೇವತೆಗಳಿಗೆ ಅವಮಾನ ಮಾಡಿರುವ ಪ್ರಕರಣದಲ್ಲಿ ಬಂಧಿತನಾಗಿರುವ `ಅಲ್ಟ್ ನ್ಯೂಜ’ನ ಸಹ ಸಂಸ್ಥಾಪಕ ಮಹಮ್ಮದ ಜುಬೇರ ಎಂಬವನ ಸಮರ್ಥನೆಗೆ ಸಂಪಾದಕರ ಸಂಘಟನೆಯಾದ `ಎಡಿಟರ್ಸ ಗಿಲ್ಡ್ ಆಫ್ ಇಂಡಿಯಾ’ ಮುಂದಾಗಿದೆ. ಅವರು ಪ್ರಸಾರ ಮಾಡಿರುವ ಒಂದು ಮನವಿಯಲ್ಲಿ ,` 2018ರಲ್ಲಿ ಬರೆಯಲಾದ ಟ್ವೀಟ್ ಮೇಲೆ ಈಗ 2022 ರಲ್ಲಿ ಕ್ರಮ ಜರುಗಿಸಲಾಗುತ್ತಿದೆ. ದೆಹಲಿ ಪೊಲಿಸರು ಜುಬೇರ ಇವರನ್ನು ತಕ್ಷಣ ಬಿಡುಗಡೆಗೊಳಿಸಬೇಕು.’ ಎಂದು ಕೋರಿದ್ದಾರೆ.

ಸಂಪಾದಕೀಯ ನಿಲುವು

ಹಿಂದೂ ದೇವತೆಗಳ ಅಪಮಾನ ಮಾಡುವವರ ಸಮರ್ಥನೆ ಮಾಡುವವರ ಮೇಲೆ ಹಿಂದೂ ಸಂಪಾದಕರು ಬಹಿಷ್ಕಾರ ಹಾಕಬೇಕು, ಎಂದು ಹಿಂದೂಗಳಿಗೆ ಅನಿಸುತ್ತದೆ !
`ಎಡಿಟರ್ಸ ಗಿಲ್ಡ್ ಆಫ್ ಇಂಡಿಯಾ’ ಎಂದಾದರೂ ಅನ್ಯಾಯವಾಗಿರುವ ಹಿಂದುತ್ವನಿಷ್ಠ ಸಂಪಾದಕರ ಬೆಂಬಲಕ್ಕೆ ನಿಂತಿದೆಯೇ?