ಫೈಜಲ್ ಮತ್ತು ಅವನ ೮ ಸಹಚರರಿಂದ ಬಿಲಾಸ್‌ಪುರ (ಛತ್ತೀಸ್‌ಗಢ) ನಲ್ಲಿ ಹಿಂದೂ ಸಹೋದರರ ಮೇಲೆ ದಾಳಿ !

ಬಹುಸಂಖ್ಯಾತ ಹಿಂದೂಗಳ ದೇಶದಲ್ಲಿ ಹಿಂದೂಗಳು ಅಸುರಕ್ಷಿತ !

ಬಿಲಾಸ್‌ಪುರ (ಛತ್ತೀಸ್‌ಗಢ) – ಬಿಲಾಸ್‌ಪುರ ಜಿಲ್ಲೆಯ ಇಬ್ಬರು ಸಹೋದರರಾದ ಜಯಕುಮಾರ ಮಿಶ್ರಾ ಮತ್ತು ಓಂಕುಮಾರ ಮಿಶ್ರಾ ಅವರ ಮೇಲೆ ಜುಲೈ ೩ ರ ಸಂಜೆ ಫೈಜಲ್ ಮತ್ತು ಇತರ ಎಂಟು ಮಂದಿ ಹಲ್ಲೆ ನಡೆಸಿದ್ದಾರೆ. ದಾಳಿಯಲ್ಲಿ ಇಬ್ಬರು ಸಹೋದರರು ಗಾಯಗೊಂಡಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ಫೈಜಲ್ ಹಾಗೂ ಇತರರ ವಿರುದ್ಧ ದೂರು ದಾಖಲಿಸಲಾಗಿದೆ. ಈವರೆಗೆ ಯಾರನ್ನೂ ಬಂಧಿಸಿಲ್ಲ, ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ.

ಜಯಕುಮಾರ ಇವರು ನೋಂದಾಯಿಸಿದ ದೂರಿನಲ್ಲಿ, ತಾನು ಮತ್ತು ತನ್ನ ಸಹೋದರ ಸರಕಾರಿ ಇಂಜಿನಿಯರಿಂಗ್ ಮಹಾವಿದ್ಯಾಲಯದ ಬಳಿ ವಾಸವಾಗಿದ್ದು, ಗುರು ಘಾಸಿದಾಸ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದೆವೆ. ಇಬ್ಬರು ಸಹೋದರರು ಮಾರುಕಟ್ಟೆಗೆ ತೆರಳುತ್ತಿದ್ದಾಗ ದ್ವಿಚಕ್ರ ವಾಹನಗಳಲ್ಲಿ ಬಂದ ಫೈಜಲ್ ಮತ್ತು ಆತನ ಸಹಚರರು ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಇಬ್ಬರಿಗೂ ಒದ್ದು ಥಳಿಸಿದ್ದಾರೆ. ಈ ದಾಳಿಯ ಹಿಂದಿನ ಉದ್ದೇಶ ಇನ್ನೂ ತಿಳಿದುಬಂದಿಲ್ಲ. ಘಟನೆ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.