ದೇವಸ್ಥಾನದಲ್ಲಿ ಮಲಗಿರುವ ಯುವಕನ ಅಜ್ಞಾತರಿಂದ ಶಿರಚ್ಛೇದ ಮಾಡಿ ಹತ್ಯೆ

ಅಯೋಧ್ಯಾ (ಉತ್ತರ ಪ್ರದೇಶ) – ಇಲ್ಲಿಯ ಭುವಾಪುರ ದೇವಗಾವ ಎಂಬಲ್ಲಿ ಹನುಮಾನ ದೇವಸ್ಥಾನದಲ್ಲಿ ಪಂಕಜ ಶುಕ್ಲಾ ಎಂಬ ೩೫ ವಯಸ್ಸಿನ ಯುವಕನ ಶಿರಚ್ಛೇದ ಮಾಡಿ ಹತ್ಯೆ ಮಾಡಲಾಗಿದೆ. ಮನೆಯಲ್ಲಿ ಸೆಕೆ ಹೆಚ್ಚಾಗಿರುವುದರಿಂದ ಪಂಕಜ ದೇವಸ್ಥಾನದಲ್ಲಿ ಮಲಗಿರುವಾಗ ಕೆಲವು ಅಜ್ಞಾತರು ಅವರ ಹತ್ಯೆ ಮಾಡಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.