ಪಾಕಿಸ್ತಾನದಲ್ಲಿ ಓರ್ವ ಅಪ್ರಾಪ್ತ ಹಿಂದೂ ಹುಡುಗನ ಅಪಹರಣ !

ಪಾಕಿಸ್ತಾನದಲ್ಲಿ ಅಸುರಕ್ಷಿತ ಹಿಂದೂಗಳು !

ಇಸ್ಲಾಮಾಬಾದ – ಪಾಕಿಸ್ತಾನದ ಸಿಂಧ್ ಪ್ರಾಂತದಲ್ಲಿ ಜೂನ್ ೨೮ ರ ಬೆಳಿಗ್ಗೆ ಎರಡು ದ್ವಿ ಚಕ್ರವಾಹನ ಸವಾರರು ಆದೇಶ ಕುಮಾರ ಎಂಬ ಅಪ್ರಾಪ್ತ ಹಿಂದೂ ಹುಡುಗನ ಅಪಹರಣ ಮಾಡಿದರು. ಅವನು ಮನೆಯ ಹೊರಗೆ ತನ್ನ ಸ್ನೇಹಿತರ ಜೊತೆಗೆ ಆಟ ಆಡುತ್ತಿದ್ದಾಗ ಈ ಘಟನೆ ನಡೆದಿದೆ. ಆದೇಶನ ಸಂಬಂಧಿಕರು ಸ್ಥಳೀಯ ವೃತ್ತ ಪತ್ರಿಕೆಗಳಿಗೆ ನೀಡಿರುವ ಮಾಹಿತಿಯ ಪ್ರಕಾರ ಅಪಹರಣಕಾರರು ಇಬ್ಬರು ಹುಡುಗರನ್ನು ಅಪಹರಣ ಮಾಡುವವರಿದ್ದರು; ಆದರೆ ಅವರು ಹಿಡುಕೊಂಡಿರುವ ಇನ್ನೊಬ್ಬ ಹುಡುಗ ಅವರ ಕೈಯಿಂದ ತಪ್ಪಿಸಿಕೊಂಡಿದ್ದಾನೆ. ಸ್ಥಳೀಯ ಹಿಂದೂಗಳು ಅಪಹರಣಕಾರರನ್ನು ಸುಮಾರು ೫೦ ಕಿಲೋಮೀಟರ ಹಿಂಬಾಲಿಸಿದ್ದಾರೆ. ಆದರೆ ಅವರು ತಪ್ಪಿಸಿಕೊಂಡಿದ್ದಾರೆ. ಪೊಲೀಸರು ಘಟನೆಯ ತನಿಖೆ ನಡೆಸಿ ಹುಡುಗನನ್ನು ಹುಡುಕುವ ಭರವಸೆ ನೀಡಿದ್ದಾರೆ.

ಆದೇಶ ಕುಮಾರ ಇವರ ತಂದೆಯ ದಿನಸಿ ಅಂಗಡಿ ಇದೆ. ಅವರು, ಅಪಹರಣಕಾರರು ಅವರ ಜೊತೆ ಇಲ್ಲಿವರಿಗೆ ಸಂಪರ್ಕ ಮಾಡಿಲ್ಲ. ಘಟನೆಯ ನಂತರ ಸ್ಥಳೀಯ ಹಿಂದೂಗಳು ಪೊಲೀಸ್ ಠಾಣೆಯೆದುರು ಪ್ರತಿಭಟನೆ ಮಾಡಿದರು. ಈ ಸಮಯದಲ್ಲಿ ಅವರು ‘ಹುಡುಗನು ಸುಸ್ಥಿತಿಯಲ್ಲಿ ಸಿಗಬೇಕು ಹಾಗೂ ಈ ರೀತಿಯ ಘಟನೆ ಮುಂದೆ ನಡೆಯಬಾರದು, ಅದಕ್ಕಾಗಿ ಕಟ್ಟುನಿಟ್ಟಾದ ಭದ್ರತಾ ವ್ಯವಸ್ಥೆ ಮಾಡಬೇಕು,’ ಒಂದು ಒತ್ತಾಯಿಸಲಾಗಿದೆ.