ಸಂಭಲ (ಉತ್ತರಪ್ರದೇಶ) ಇಲ್ಲಿಯ ಪೊಲೀಸ್ ಪೇದೆ ಸರ್ವಸ್ವವನ್ನು ತ್ಯಾಗ ಮಾಡಿ ಈಶ್ವರ ಭಕ್ತಿ ಮಾಡುವುದನ್ನು ರ್ನಿಧರಿಸಿದ್ದಾರೆ !

ಸಂಭಲ (ಉತ್ತರಪ್ರದೇಶ) – ಜಿಲ್ಲೆಯ ಗುನ್ನೌರ ಗ್ರಾಮದಿಂದ ೩ ತಿಂಗಳ ಹಿಂದೆ ನಾಪತ್ತೆಯಾಗಿದ್ದ ಪೊಲೀಸ್ ಪೇದೆ ಶಕ್ತಿಸಿಂಹ ಇವರನ್ನು ಪೊಲೀಸರು ಹುಡುಕುತ್ತಿದ್ದರು. ಕೊನೆಗೆ ಅವರು ಹರಿದ್ವಾರದ ಒಂದು ದೇವಸ್ಥಾನದಲ್ಲಿ ಸಾಧನೆ ಮಾಡುತ್ತಿರುವುದು ಪೊಲೀಸರಿಗೆ ತಿಳಿಯಿತು. ಪೊಲೀಸ್ ಅಧಿಕಾರಿ ಹರಿದ್ವಾರಕ್ಕೆ ಹೋಗಿ ಅವರನ್ನು ಭೇಟಿ ಮಾಡಿದರು ಮತ್ತು ಮತ್ತೆ ಗ್ರಾಮಕ್ಕೆ ಬರುವಂತೆ ತಿಳಿಸಿ ಹೇಳಿದರು. ಈ ಸಮಯದಲ್ಲಿ ಶಕ್ತಿಸಿಂಹ ಅವರು, ಈಗ ನಾನು ನನ್ನ ಸಂಪೂರ್ಣ ಜೀವನ ಕೇವಲ ಈಶ್ವರ ಭಕ್ತಿ ಮಾಡುವುದಕ್ಕಾಗಿ ಮೀಸಲಿಡುವವನಿದ್ದೇನೆ. ಶ್ರೀ ಹನುಮಂತ ಇವರು ನನ್ನ ಆರಾಧ್ಯರಾಗಿದ್ದಾರೆ. ಮತ್ತು ನಾನು ಅವರ ಉಪಾಸನೆ ಮಾಡುತ್ತಿದ್ದೇನೆ ಎಂದು ಹೇಳಿದರು.

ಪೊಲೀಸ್ ಅಧಿಕಾರಿಗಳು ಅವನಿಗೆ ತಿಳಿಸಿ ಹೇಳಿದ ನಂತರ ಅವರು ಗೂನ್ನೌರ ಗ್ರಾಮಕ್ಕೆ ಹಿಂತಿರುಗಿದರು; ಆದರೆ ಅವರು ಗ್ರಾಮಕ್ಕೆ ಬಂದ ನಂತರ ಕೆಲಸಕ್ಕೆ ರಾಜಿನಾಮೆ ನೀಡಿದರು. ಅವರ ಸಂಬಂಧಿಕರು ಅವರಿಗೆ ತಿಳಿಸಿ ಹೇಳುವ ಪ್ರಯತ್ನ ಮಾಡಿದರು; ಆದರೆ ಅವರು ಈಗ ಸಾಧನೆಯೇ ಮಾಡುವುದನ್ನು ನಿರ್ಧರಿಸಿದ್ದಾರೆ ಎಂದು ಹೇಳಿದರು, ಹಾಗೂ ‘ಈಗ ನನ್ನ ಯಾವುದೇ ಮನೆ ಇಲ್ಲ’, ಎಂದು ಸ್ಪಷ್ಟಪಡಿಸಿದರು.

ಸಂಪಾದಕೀಯ ನಿಲುವು

ಪೋಲೀಸ ದಳದಂತಹ ಭ್ರಷ್ಟಾಚಾರದಿಂದ ಕೂಡಿರುವ ಕ್ಷೇತ್ರದಲ್ಲಿ ಇಂತಹ ಪೊಲೀಸರು ಇರುವುದು, ಇದು ಒಂದು ಆಶ್ಚರ್ಯಕರ ಘಟನೆಯಾಗಿದೆ !