ಬಂಧನದ ವೇಳೆ ಆರೋಪಿಗಳಿಗೆ ಕೈಕೋಳ ಹಾಕುವಂತಿಲ್ಲ ! – ಕರ್ನಾಟಕ ಉಚ್ಚ ನ್ಯಾಯಾಲಯ

ಬೆಂಗಳೂರು – ಯಾವುದೇ ಆರೋಪಿಯನ್ನು ಬಂಧಿಸುವಾಗ ಅವನಿಗೆ ಕೈಕೋಳ ಹಾಕುವಂತಿಲ್ಲ ಎಂದು ಕರ್ನಾಟಕ ಉಚ್ಚ ನ್ಯಾಯಾಲಯ ತೀರ್ಪು ನೀಡಿದೆ. ಈ ಸಮಯದಲ್ಲಿ ನ್ಯಾಯಾಲಯವು ಆರೋಪಿಯ ಕೈಕೋಳ ಹಾಕಿ ಸಾರ್ವಜನಿಕ ಸ್ಥಳದಲ್ಲಿ ತಿರುಗಿಸಿದ ಪ್ರಕರಣದಲ್ಲಿ ಆರೋಪಿಗೆ ೨ ಲಕ್ಷ ರೂಪಾಯಿಗಳ ಪರಿಹಾರ ನೀಡುವಂತೆ ಆದೇಶಿಸಿದೆ.