ಸನಾತನದ ಸಾಧಕ ಎಂದು ಹೇಳಿಕೊಂಡು ಆರ್ಥಿಕ ವಂಚನೆ ಮಾಡುವ ಸುಳ್ಯದ ಶಿವಾನಂದ ಪ್ರಭು ಇವರಿಂದ ಎಚ್ಚರದಿಂದಿರಿ !

ಸನಾತನದ ಸಾಧಕ ಎಂದು ಹೇಳಿ ಓರ್ವ ವ್ಯಕ್ತಿಯು ಅನೇಕರಿಗೆ ಆರ್ಥಿಕವಾಗಿ ವಂಚಿಸಿರುವುದು ಗಮನಕ್ಕೆ ಬಂದಿದೆ. ಆತ ಸುಳ್ಯದವನಾಗಿದ್ದು ತನ್ನ ಹೆಸರು ಶಿವಾನಂದ ಪ್ರಭು ಎಂದು ಹೇಳಿ ವಂಚನೆ ಮಾಡಿದ್ದಾನೆಂದು ಮೋಸ ಹೋದ ವ್ಯಕ್ತಿಯಿಂದ ತಿಳಿದುಬಂದಿದೆ.

ಸಾಪ್ತಾಹಿಕ ಮತ್ತು ಪಾಕ್ಷಿಕ ‘ಸನಾತನ ಪ್ರಭಾತ’ಗಳಲ್ಲಿ ಮುದ್ರಿತ ಲೇಖನಗಳನ್ನುಈಗ ಜಾಲತಾಣದ ಒಂದೇ ‘ಲಿಂಕ್’ನಲ್ಲಿ ವೀಕ್ಷಿಸುವ ಸೌಲಭ್ಯ ಲಭ್ಯ !

ಸಾಪ್ತಾಹಿಕ ಸನಾತನ ಪ್ರಭಾತದ ಆಯಾ ವಾರದ ಸಂಚಿಕೆಯು ಒಂದೇ ಲಿಂಕ್‌ನಲ್ಲಿ ಓದುವ ವ್ಯವಸ್ಥೆ ಇದೆ. ಅದಕ್ಕಾಗಿ ಜಾಲತಾಣದ ಮುಖ್ಯ ಪುಟದಲ್ಲಿನ ‘ಮೆನುಬಾರ್’ ನಲ್ಲಿನ ‘ಈ ವಾರದ ಸಾಪ್ತಾಹಿಕದ ಮೇಲೆ ಕ್ಲಿಕ್ ಮಾಡಿದರೆ, ಆ ಲಿಂಕ್‌ನಲ್ಲಿ ಆ ವಾರದ ಸಾಪ್ತಾಹಿಕದ ಎಲ್ಲ ಲೇಖನಗಳು ‘ಪೋಸ್ಟ್’ಗಳ ರೂಪದಲ್ಲಿ ಒಂದರ ಕೆಳಗೆ ಒಂದರಂತೆ ಕಾಣಿಸಿಕೊಳ್ಳುತ್ತವೆ.

ಆಪತ್ಕಾಲದ ಪೂರ್ವಸಿದ್ಧತೆಯೆಂದು ಕಾರ್ತಿಕ ಏಕಾದಶಿಯಿಂದ (೧೫.೧೧.೨೦೨೧) ಆರಂಭವಾದ ಸನಾತನದ ‘ಮನೆ ಮನೆಯಲ್ಲಿ ಕೈದೋಟ’ ಅಭಿಯಾನದಲ್ಲಿ ಪಾಲ್ಗೊಳ್ಳಿ

ಇಂದು ಮಾರುಕಟ್ಟೆಯಲ್ಲಿ ಸಿಗುವ ತರಕಾರಿ, ಹಣ್ಣು ಇತ್ಯಾದಿಗಳ ಮೇಲೆ ಹಾನಿಕರ ರಾಸಾಯನಿಕಗಳನ್ನು ಸಿಂಪಡಿಸಲಾಗುತ್ತದೆ. ಇಂತಹ ತರಕಾರಿಗಳು ಮತ್ತು ಹಣ್ಣುಗಳನ್ನು ತಿನ್ನುವುದರಿಂದ ವಿಷಯುಕ್ತ ಪದಾರ್ಥಗಳು ನಮ್ಮ ಹೊಟ್ಟೆ ಸೇರುತ್ತವೆ. ಇದರಿಂದ ರೋಗಗಳು ಉಂಟಾಗುತ್ತದೆ. ಸಾಧನೆಗಾಗಿ ದೇಹವು ಆರೋಗ್ಯಕರವಾಗಿರಬೇಕು.

‘ಹೋಮಿಯೋಪತಿ ಸ್ವಯಂ ಚಿಕಿತ್ಸೆ’ ಈ ಸಂದರ್ಭದಲ್ಲಿ ಮಾಹಿತಿ ತಿಳಿಸಿ !

ಸಾಧಕರು, ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳಿಗೆ ‘ಹೋಮಿಯೋಪತಿಯ ಸ್ವಯಂಚಿಕಿತ್ಸೆ’ ಈ ವಿಷಯವಾಗಿ ಮಾಹಿತಿ ಇದ್ದರೆ ಅವರು ಈ ಮಾಹಿತಿ ಬರೆದು ಅಥವಾ ಬೆರಳಚ್ಚು ಮಾಡಿ ಆದಷ್ಟು ಬೇಗನೆ ಸೌ. ಭಾಗ್ಯಶ್ರೀ ಸಾಮಂತ ಇವರ ಹೆಸರಿಗೆ ಕೆಳಗೆ ಕೊಟ್ಟಿರುವ ವಿಳಾಸಕ್ಕೆ ಕಳುಹಿಸಬೇಕು.

ಸನಾತನದ ಆಶ್ರಮ ಮತ್ತು ಸೇವಾಕೇಂದ್ರಗಳಲ್ಲಿ ವಾಸಿಸುವ ಸಾಧಕರು, ಹಾಗೆಯೇ ಪ್ರಸಾರದ ಸೇವೆಯನ್ನು ಮಾಡುವ ಸಾಧಕರು ಹಾಗೂ ಅವರ ಕುಟುಂಬದವರಿಗೆ ಆಪತ್ಕಾಲದಲ್ಲಿ ತುರ್ತಾಗಿ ವೈದ್ಯಕೀಯ ಸೌಲಭ್ಯ ದೊರಕಲು ೩ ತುರ್ತುರೋಗಿವಾಹಕ (ಅಂಬ್ಯುಲನ್ಸ್)ಗಳ ಆವಶ್ಯಕತೆ ಇದೆ !

ಗಂಭೀರ ಸ್ಥಿತಿಯಲ್ಲಿರುವ ರೋಗಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಅಥವಾ ಹೆಚ್ಚು ಕುಶಲ ವೈದ್ಯಕೀಯ ಉಪಚಾರವನ್ನು ಪಡೆಯಲು ಬೇರೆಡೆ ಸಾಗಿಸಲು, ಮುಂತಾದವುಗಳಿಗಾಗಿ ತುರ್ತುರೋಗಿವಾಹಕಗಳು ಕೂಡಲೇ ಮತ್ತು ಸಹಜವಾಗಿ ಲಭ್ಯವಾಗುವುದು ಅನಿವಾರ್ಯವಾಗಿದೆ.

ಸಂಶೋಧನೆಯ ಮಾಧ್ಯಮದಿಂದ ಇಡೀ ಮನುಕುಲಕ್ಕೆ ಅಮೂಲ್ಯವಾದ ಕೊಡುಗೆಯನ್ನು ನೀಡುವ ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಸಂಶೋಧನಾ ಕಾರ್ಯಕ್ಕಾಗಿ ಛಾಯಾಚಿತ್ರಕಗಳು (‘ಕ್ಯಾಮೆರಾ’) ಬೇಕಾಗಿವೆ !

ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳಿಗೆ ಧರ್ಮಕಾರ್ಯದಲ್ಲಿ ಪಾಲ್ಗೊಳ್ಳಲು ಸುವರ್ಣಾವಕಾಶ !

ಹಿಂದೂ ಸಂಘಟನೆಗಳ ವಿರೋಧದ ನಂತರ ಹಿಂದೂದ್ವೇಷಿ ಹಾಸ್ಯ ಕಲಾವಿದ ಮುನಾವರ ಫಾರೂಕಿಯವರ ಬೆಂಗಳೂರಿನ ಕಾರ್ಯಕ್ರಮ ರದ್ದು !

ಒಬ್ಬರ ಹಿಂದೆ ಒಬ್ಬರಂತೆ ಯಾವುದೇ ಕಲಾವಿದರು ಬಂದು ಹಿಂದೂ ಧರ್ಮದ ಮೇಲೆ ಕೆಸರೆರಚುತ್ತಾರೆ. ಆದುದರಿಂದ ದೇಶದಾದ್ಯಂತ ಇರುವ ಹಿಂದೂಗಳು ಇಂತಹವರು ಹಿಂದೂ ಧರ್ಮದ ಅಪಮಾನ ಮಾಡುವ ಧೈರ್ಯವನ್ನೂ ಮಾಡದಂತಹ ವರ್ಚಸ್ಸನ್ನು ನಿರ್ಮಿಸಬೇಕಿದೆ !

ಮತಾಂತರದ ನಂತರವೂ ವ್ಯಕ್ತಿಯ ಜಾತಿಯು ಶಾಶ್ವತವಾಗಿರುತ್ತದೆ ! – ಮದ್ರಾಸ್ ಉಚ್ಚ ನ್ಯಾಯಾಲಯ

ಒಂದು ಧರ್ಮದಿಂದ ಇನ್ನೊಂದು ಧರ್ಮಕ್ಕೆ ಪ್ರವೇಶಿಸಿದ ನಂತರವೂ ವ್ಯಕ್ತಿಯ ಜಾತಿಯು ಶಾಶ್ವತವಾಗಿರುತ್ತದೆ ಎಂಬ ನಿರ್ಣಯವನ್ನು ಮದ್ರಾಸ್ ಉಚ್ಚ ನ್ಯಾಯಾಲಯವು ಮೀಸಲಾತಿಗೆ ಸಂಬಂಧಿಸಿದ ಪ್ರಕರಣದ ಸಂದರ್ಭದಲ್ಲಿ ನೀಡಿದೆ.

ಶ್ರಿಕೃಷ್ಣಜನ್ಮಭೂಮಿಯ ಈದ್ಗಾ ಮಸೀದಿಯಲ್ಲಿ ನಡೆಯುವ ನಮಾಜುಪಠಣವನ್ನು ನಿಲ್ಲಿಸಿ !

ಕಳೆದ ಕೆಲವು ದಿನಗಳಿಂದ ಇಲ್ಲಿ ದಿನದಲ್ಲಿ 5 ಸಾರಿ ನಮಾಜುಪಠಣ ಮಾಡಲಾಗುತ್ತಿದೆ. ಹೀಗೆ ಮಾಡಿ ಇಲ್ಲಿಯ ಸೌಹಾರ್ದ ವಾತಾವರಣವನ್ನು ಉದ್ದೇಶಪೂರ್ವಕವಾಗಿ ಹಾಳು ಮಾಡಲಾಗುತ್ತಿದೆ. ಆದಕಾರಣ ಇಲ್ಲಿ ನಡೆಯುವ ನಮಾಜುಪಠಣ ನಿಲ್ಲಿಸಬೇಕೆಂದು `ಶ್ರೀಕೃಷ್ಣಜನ್ಮಭೂಮಿ ಮುಕ್ತಿ ಆಂದೋಲನ ಸಮಿತಿ’ಯ ಅಧ್ಯಕ್ಷ ನ್ಯಾಯವಾದಿ ಮಹೇಂದ್ರ ಪ್ರತಾಪ ಸಿಂಹ ಇವರು ಜಿಲ್ಲಾಧಿಕಾರಿಗೆ ಮನವಿ ನೀಡಿದರು

ಐತಿಹಾಸಿಕ ಮಹತ್ವವನ್ನು ಗಮನದಲ್ಲಿಟ್ಟುಕೊಂಡು ಲೋಕಮಾನ್ಯ ತಿಲಕರುಹುಟ್ಟಿದ ಮನೆಯ ದುರುಸ್ತಿಯನ್ನು ಕೂಡಲೇ ಮಾಡಬೇಕು !

ಈ ಅಮೂಲ್ಯ ಸೊತ್ತಿನ ಐತಿಹಾಸಿಕ ಮಹತ್ವವನ್ನು ಗಮನದಲ್ಲಿಟ್ಟುಕೊಂಡು ಸರಕಾರ ಕೂಡಲೇ ಲೋಕಮಾನ್ಯ ತಿಲಕರ ಜನ್ಮಸ್ಥಳವನ್ನು ದುರಸ್ತಿಗೊಳಿಸಬೇಕು, ಎಂದು ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ರತ್ನಾಗಿರಿಯ ಜಿಲ್ಲಾಧಿಕಾರಿ ಡಾ. ಬಿ.ಎನ್. ಪಾಟಿಲ್‌ ಅವರನ್ನು ಭೇಟಿಯಾಗಿ ಈ ಕುರಿತು ವಿವರವಾದ ಮನವಿಯನ್ನು ನೀಡಿದರು.