ಹಿಂದೂ ಜನಜಾಗೃತಿ ಸಮಿತಿಯಿಂದ ಬೆಂಗಳೂರಿನಲ್ಲಿ ಸೋನಿ ಚಾನಲ್ ವ್ಯವಸ್ಥಾಪಕರಿಗೆ ಮನವಿ !
ಬೆಂಗಳೂರು : ‘ಸೋನಿ ಟಿವಿ’ಯಲ್ಲಿ ‘ಕ್ರೈಮ್ ಪ್ಯಾಟ್ರೋಲ್’ ಎಂಬ ಧಾರಾವಾಹಿ ಪ್ರಸಾರವಾಗುತ್ತಿದೆ. ‘ಸಮಾಜವನ್ನು ಜಾಗೃತಗೊಳಿಸುವ’ ಉದ್ದೇಶದಿಂದ ಈ ಧಾರಾವಾಹಿ ಆರಂಭಿಸಲಾಗಿದೆ ಎಂದು ನಿರ್ಮಾಪಕರು ಹೇಳಿಕೊಂಡಿದ್ದಾರೆ. ಡಿಸೆಂಬರ್ ಅಂತ್ಯದಲ್ಲಿ ಧಾರಾವಾಹಿಯ ಸಂಚಿಕೆಯು ಹೆಚ್ಚು ಪ್ರಚಾರಗೊಂಡ ಶ್ರದ್ಧಾ ವಾಲಕರ್ ಕೊಲೆ ಪ್ರಕರಣವನ್ನು ಆಧರಿಸಿದೆ; ಆದರೆ ವಾಸ್ತವವಾಗಿ ಈ ವಿಭಾಗದಲ್ಲಿ ಅನೇಕ ಸಂಗತಿಗಳನ್ನು ತಪ್ಪು ಮತ್ತು ಆಕ್ಷೇಪಾರ್ಹ ರೀತಿಯಲ್ಲಿ ತೋರಿಸುವ ಮೂಲಕ ’ಲವ್ ಜಿಹಾದಿ ಅಫ್ತಾಬ್’ ಅಪರಾಧವನ್ನು ಬೆಂಬಲಿಸಿ ಹಿಂದೂಗಳ ಮಾನಹಾನಿ ಮಾಡುವ ಪ್ರಯತ್ನ ನಡೆದಿದೆ. ಇದಕ್ಕಾಗಿ ಸೋನಿ ಟಿವಿ ಕೂಡಲೇ ಹಿಂದೂ ಸಮಾಜಕ್ಕೆ ಬಹಿರಂಗವಾಗಿ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿ ಬೆಂಗಳೂರಿನ ಸೋನಿ ಚಾನೆಲ್ ವ್ಯವಸ್ಥಾಪಕ ಮುಖ್ಯಸ್ಥರಿಗೆ ಹಿಂದೂ ಜಾಗೃತಿ ಸಮಿತಿಯಿಂದ ಮನವಿ ನೀಡಲಾಯಿತು. ಈ ಸಂದರ್ಭದಲ್ಲಿ ಸಮಿತಿಯ ಸೌ. ಭವ್ಯ ಗೌಡ, ವಿಜಯ ವಿವೇಕ ಬಳಗದ ಸಂಸ್ಥಾಪಕಿ ಶ್ರೀಮತಿ ಶಕೀಲಾ ಶೆಟ್ಟಿ, ನ್ಯಾಯವಾದಿಗಳಾದ ಸೌ. ಶಕುಂತಲಾ ಶೆಟ್ಟಿ, ಸೌ. ಶುಭಾ ಬಿ. ನಾಯ್ಕ್ ಸೇರಿದಂತೆ ಹಲವು ಹಿಂದೂ ಕಾರ್ಯಕರ್ತರು ಉಪಸ್ಥಿತರಿದ್ದರು.
@HinduJagrutiOrg members , Advocates registered complaint against @SonyTV Today in bangalore.
Sony LIVE telecasted Shraddha Walkar episode of Crime Patrol where they depicted Mohmad Aftab as ‘Mihir’ and Shraddha as ‘Anna’.@CTRavi_BJP @Tejasvi_Surya @IamAnitaBhat @astitvam pic.twitter.com/a5VEkvTL3Q
— 🚩Mohan gowda🇮🇳 (@Mohan_HJS) January 2, 2023
ಈ ಸಂದರ್ಭದಲ್ಲಿ ಸೌ. ಭವ್ಯ ಗೌಡ ಮಾತನಾಡಿ, ದೆಹಲಿಯಲ್ಲಿ ಅಫ್ತಾಬ್ ಪುನಾವಾಲಾ ಎಂಬ ಮತಾಂಧನು ಹಿಂದೂ ಯುವತಿ ಶ್ರದ್ಧಾ ವಾಲಕರ್ ಳನ್ನು ಕೊಂದನು. ಈ ಪ್ರಕರಣ ‘ಲವ್ ಜಿಹಾದ್’ ಎಂದು ದೇಶಾದ್ಯಂತ ಚರ್ಚೆ ನಡೆದಿದೆ. ಶ್ರದ್ಧಾ ಅವರ ಸಂಬಂಧಿಕರೂ ಇದೇ ಆರೋಪ ಮಾಡಿದ್ದಾರೆ; ಆದಾಗ್ಯೂ, ಸರಣಿಯ ಈ ಭಾಗದಲ್ಲಿ, ಅಫ್ತಾಬ್‌ನ ಪಾತ್ರವನ್ನು ಹಿಂದೂ ಹೆಸರಿನ ’ಮಿಹಿರ್’ ಹಾಗೂ ಶ್ರದ್ಧಾಳ ಪಾತ್ರವನ್ನು ಕ್ರಿಶ್ಚಿಯನ್ ಹೆಸರಿನ ’ಅನ್ನಾ ಫರ್ನಾಂಡಿಸ್’ ಎಂದು ತೋರಿಸಿ ಹಿಂದೂ ಹುಡುಗನೊಬ್ಬ ಕ್ರಿಶ್ಚಿಯನ್ ಹುಡುಗಿಯನ್ನು ಉದ್ದೇಶಪೂರ್ವಕವಾಗಿ ಕೊಂದಿದ್ದಾನೆ ಎಂದು ಇಲ್ಲಿ ತೋರಿಸಲಾಗಿದೆ. ಇದರ ಬಗ್ಗೆ ಇಲ್ಲಿಯವರೆಗೆ, ಸೋನಿ ಟಿವಿ ಇದಕ್ಕಾಗಿ ಕ್ಷಮೆಯಾಚಿಸಿಲ್ಲ ಮತ್ತು ಈ ಎಪಿಸೋಡ್ ಸಂಖ್ಯೆ 212 ಅನ್ನು ಮಾತ್ರ ಅವರ ’ಸೋನಿ ಲೈವ್’ ಅಪ್ಲಿಕೇಶನ್‌ನಿಂದ ಅಳಿಸಲಾಗಿದೆ. ಮಿಹಿರ್ ಅವರನ್ನು ’ಯೋಗ ಶಿಕ್ಷಕ’ ಎಂದು ತೋರಿಸಿ ಶ್ರದ್ಧಾಳನ್ನು ೩೫ ತುಂಡುಗಳಾಗಿ ಕತ್ತರಿಸಿದ ’ಯೋಗ ಶಿಕ್ಷಕ’, ಈತ ತನ್ನ ಬಳಿಗೆ ಬರುವ ಯುವ ಪ್ರಶಿಕ್ಷಣಾರ್ಥಿಗಳನ್ನು ಕೀಳಾಗಿ ಕಾಣುವುದು, ರಹಸ್ಯವಾಗಿ ಅವರ ಚಿತ್ರಗಳನ್ನು ತೆಗೆಯುವುದು ಮತ್ತು ಅವರೊಂದಿಗೆ ಅನೈತಿಕ ಕೃತ್ಯಗಳಲ್ಲಿ ತೊಡಗುವುದನ್ನು ತೋರಿಸಲಾಗಿದೆ. ಈ ರೀತಿ ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿರುವ ಯೋಗ ಹಾಗೂ ಅದರ ಬೋಧಕರ ಬಗ್ಗೆಯೂ ಈ ಧಾರಾವಾಹಿಯ ಮೂಲಕ ಉದ್ದೇಶಪೂರ್ವಕವಾಗಿ ತಪ್ಪು ಸಂದೇಶವನ್ನು ಹರಡಲಾಗುತ್ತಿದೆ. ಇದು ಹಿಂದೂ ಧರ್ಮದ ದ್ವೇಷದ ಚಿತ್ರಣವನ್ನು ಸಹ ಬಿಂಬಿಸುತ್ತದೆ. ಇದಕ್ಕಾಗಿ ಸೋನಿ ಟಿವಿ ಶ್ರದ್ಧಾ ವಾಲಕರ್ ಅವರ ಕುಟುಂಬ ಮತ್ತು ಹಿಂದೂ ಸಮುದಾಯದಲ್ಲಿ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕೆಂದು ಆಗ್ರಹಿಸಲಾಯಿತು.