ಚಳಿಗಾಲದ ಅಧಿವೇಶನದಲ್ಲಿ ಹಲಾಲ್ ಪ್ರಮಾಣ ಪತ್ರ ನಿಷೇಧಿಸಿ ಮತ್ತು ಲವ್ ಜಿಹಾದ್ ವಿರೋಧಿ ಪೋಲಿಸ್ ದಳವನ್ನು ಸ್ಥಾಪಿಸಿ !

ಹಿಂದೂ ಜನಜಾಗೃತಿ ಸಮಿತಿ ಸಹಿತ ವಿವಿಧ ಹಿಂದೂ ಸಂಘಟನೆಗಳಿಂದ ರಾಜ್ಯಾದ್ಯಂತ ಸ್ಥಳೀಯ ಶಾಸಕರಿಗೆ ಮನವಿ

ಬೆಂಗಳೂರು : ರಾಜ್ಯದಲ್ಲಿ ಅನಧಿಕೃತವಾಗಿ ಧರ್ಮದ ಆಧಾರದ ಮೇಲೆ ಹಲಾಲ್ ಲೋಗೊ ಇರುವ ಪ್ರಮಾಣಪತ್ರವನ್ನು ಸಾರ್ವಜನಿಕರು ಉಪಯೋಗ ಮಾಡುವ ಉತ್ಪನ್ನಗಳ ಮೇಲೆ ಮುದ್ರಣ ಮಾಡಿ, ಸಾವಿರಾರು ಕೋಟಿ ರೂಪಾಯಿಗಳನ್ನು ಮತಾಂದ ಸಂಘಟನೆಗಳು ಸಂಗ್ರಹ ಮಾಡಿ, ದೇಶ ವಿರೋಧಿ ಚಟುವಟಿಕೆಗಳಿಗೆ ಉಪಯೋಗ ಮಾಡಲಾಗುತ್ತಿವೆ. ಕೇಂದ್ರ ಸರಕಾರದ FSSAI ಅಧಿಕೃತ ಪ್ರಮಾಣಪತ್ರ ನೀಡುವ ಸಂಸ್ಥೆ ಇರುವಾಗಲೂ ಸಹ ಧರ್ಮದ ಆಧಾರದಲ್ಲಿ ಹಲಾಲ್ ಪ್ರಮಾಣ ಪತ್ರ ನೀಡುವುದು ಸಂವಿಧಾನ ಬಾಹಿರವಾಗಿದೆ. ಇದನ್ನು ಕೂಡಲೇ ನಿಷೇಧ ಮಾಡಬೇಕು, ಹಲಾಲ್ ಪ್ರಮಾಣ ಪತ್ರ ನೀಡುವ ಹಣ ದೇಶದ್ರೋಹಿ ಚಟುವಟಿಕೆಗೆ ಉಪಯೋಗದ ಬಗ್ಗೆ ತನಿಖೆ ಮಾಡಬೇಕು ಇದಕ್ಕೆ ಸಂಬಂಧಿಸಿ ಈ ಚಳಿಗಾಲದ ಅಧಿವೇಶನದಲ್ಲಿ ‘ಹಲಾಲ ಪ್ರಮಾಣಪತ್ರ’ ನಿಷೇಧ ಮಾಡುವ ಕಾಯಿದೆ ತರಬೇಕು’ ಎಂದು ಆಗ್ರಹ ಮಾಡಲಾಯಿತು. ಹಾಗೂ ‘ಲವ್ ಜಿಹಾದ್’ ಪ್ರಕರಣಗಳ ತನಿಖೆ ನಡೆಸಲು ಉತ್ತರ ಪ್ರದೇಶ ಸರ್ಕಾರದ ಮಾದರಿಯಲ್ಲಿ ಪೊಲೀಸ್ ವಿಶೇಷ ಶಾಖೆಯನ್ನು ಸ್ಥಾಪಿಸಬೇಕು. ಇಂತಹ ಪ್ರಕರಣಗಳಲ್ಲಿ ‘ಲವ್ ಜಿಹಾದ್’ ಹೆಸರಿನಲ್ಲಿ ಅಪರಾಧಗಳನ್ನು ದಾಖಲಿಸಬೇಕೆಂದು ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿ ಸಹಿತ ವಿವಿಧ ಹಿಂದೂ ಸಂಘಟನೆಗಳ ವತಿಯಿಂದ ರಾಜ್ಯದ 15 ಕ್ಕೂ ಹೆಚ್ಚು ಶಾಸಕರಿಗೆ ಮನವಿ ನೀಡಲಾಯಿತು. ಗೃಹ ಸಚಿವ ಅರಗ ಜ್ಞಾನೇಂದ್ರ, ಸಿಟಿ ರವಿ, ಕೆ. ಸುಧಾಕರ, ಶ್ರೀ. ಭರತ ಶೆಟ್ಟಿ ಸಹಿತ ಅನೇಕರನ್ನು ಭೇಟಿಯಾಗಿ ಈ ಬಗ್ಗೆ ಮನವಿ ನೀಡಲಾಯಿತು.

ಅದಲ್ಲದೇ ಬೆಂಗಳೂರು, ಹುಬ್ಬಳ್ಳಿ, ಗದಗ, ಮಂಗಳೂರು ಸೇರಿ ಪ್ರತಿಭಟನೆ ಮಾಡಲಾಯಿತು. ಮಾನ್ಯ ಸಿಟಿ ರವಿಯವರು ಈ ಬಗ್ಗೆ ಈ ವಿಷಯದ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳ ಜೊತೆಗೆ ಮಾತನಾಡುವೆ ಎಂದರು. ಅಷ್ಟೇ ಅಲ್ಲದೆ ಹಲಾಲ್ ಪ್ರಮಾಣಪತ್ರವನ್ನು ನಿಷೇಧ ಮಾಡುವ ಬಗ್ಗೆ ಖಾಸಗಿ ಮಸೂಧೆ ಮಂಡನೆ ಮಾಡುವುದಾಗಿ ತಿಳಿಸಿದರು