FIR Against Kunal Kamra : ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಹಾಸ್ಯ ಕಲಾವಿದ ಕುಣಾಲ ಕಮ್ರಾ ವಿರುದ್ಧ ದೂರು ದಾಖಲು!

ಪ್ರಭು ಶ್ರೀರಾಮ ಮತ್ತು ಸೀತಾಮಾತೆಯ ಘೋರ ಅಪಮಾನ

ಪುಣೆ – ಪ್ರಸಿದ್ಧ ‘ಸ್ಟ್ಯಾಂಡ್ ಅಪ್ ಕಾಮಿಡಿಯನ್’ (ಏಕಲ ವಿನೋದ ಕಲಾವಿದ) ಕುಣಾಲ್ ಕಮ್ರಾ ಎಂಬಾತನು ಮತ್ತೊಮ್ಮೆ ಹಿಂದೂಗಳ ಧಾರ್ಮಿಕ ಭಾವನೆಗಳನ್ನು ಕೆರಳಿಸುವಂತಹ ಹೇಳಿಕೆಯನ್ನು ನೀಡಿದ್ದಾನೆ. ದೆಹಲಿಯ ಜಂತರ್ ಮಂತರ್‌ನಲ್ಲಿ ಜುಲೈ 15 ರಂದು ಆಯೋಜಿಸಲಾಗಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ಯ ಆಂದೋಲನಕ್ಕೆ ಈತನು ಭೇಟಿ ನೀಡಿದ್ದನು. ಅಲ್ಲಿ ಭಾಷಣ ಮಾಡುವಾಗ, ಕಮ್ರಾ ಹಿಂದೂಗಳ ಆರಾಧ್ಯ ದೇವತೆಗಳಾದ ಪ್ರಭು ಶ್ರೀರಾಮ ಮತ್ತು ಸೀತಾ ಮಾತೆಯ ಪವಿತ್ರ ನಾಮಗಳನ್ನು ಅತ್ಯಂತ ಅವಹೇಳನಕಾರಿ ಹಾಗೂ ಪ್ರಚೋದನಾತ್ಮಕ ರಾಜಕೀಯ ಸಂದರ್ಭಕ್ಕೆ ಬಳಸಿ ವಿಕೃತಿ ಮೆರೆದಿದ್ದಾನೆ. ಇದರ ವಿಡಿಯೋ ತುಣುಕನ್ನು ‘ಇಂಡಿಯಾ ಸ್ಕ್ರಾಲ್ಸ್’ ಎಂಬ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಲಾಗಿದೆ. ಧರ್ಮನಿಂದನೆಯ ಈ ಘಟನೆಯ ವಿರುದ್ಧ ಪುಣೆಯ ವಕೀಲರಾದ ಶ್ರೀ. ಪ್ರದೀಪ ನಾಯಿಕ ರವರು ಪಿಂಪರಿ-ಚಿಂಚವಡ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ದಾಖಲಾದ ದೂರಿನಲ್ಲಿರುವ ಪ್ರಮುಖ ಮುಖ್ಯಾಂಶಗಳು:

೧. ಈ ಹೇಳಿಕೆಯಿಂದ ಸಮಸ್ತ ಹಿಂದೂ ಸಮಾಜದ ಧಾರ್ಮಿಕ ಭಾವನೆಗಳಿಗೆ ತೀವ್ರ ಧಕ್ಕೆ ಉಂಟಾಗಿದ್ದು, ಸಮಾಜದಲ್ಲಿ ದ್ವೇಷ ಮತ್ತು ಅಶಾಂತಿ ಮೂಡುವ ಸಾಧ್ಯತೆ ನಿರ್ಮಾಣವಾಗಿದೆ.

೨. ಕುಣಾಲ ಕಮ್ರಾನನ್ನು ಮುಖ್ಯ ಆರೋಪಿಯನ್ನಾಗಿ ಮಾಡಲಾಗಿದ್ದು, ಘಟನಾ ಸ್ಥಳದಲ್ಲಿ ಉಪಸ್ಥಿತರಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ಯ ಸಂಸ್ಥಾಪಕ ಅಭಿಜಿತ ದೀಪಕೆ ಎಂಬಾತನ ಪಾತ್ರದ ಕುರಿತು ಪ್ರತ್ಯೇಕ ತನಿಖೆ ನಡೆಸಬೇಕು.

೩. ಈ ವಿಡಿಯೋ ತುಣುಕಿನ ‘ಡಿಜಿಟಲ್ ಫೋರೆನ್ಸಿಕ್ ಪರಿಶೀಲನೆ’ ನಡೆಸಿ, ಅದರ ಮೂಲ ಪ್ರತಿಯನ್ನು ವಶಪಡಿಸಿಕೊಳ್ಳಬೇಕು.

ಕುಣಾಲ ಕಮ್ರಾ ಭಾಷಣದಲ್ಲಿ ಒಟ್ಟಿನಲ್ಲಿ ಹೇಳಿದ್ದೇನು ?

ಕಮರಾ ತನ್ನ ಭಾಷಣದಲ್ಲಿ, “ಯೇ ಸರ್ಕಾರ್ ಸೀತಾ ಕೇ ಪತಿ ಕಾ ನಾಮ ಲೇ-ಲೇಕರ, ನೀತಾ ಕೇ ಪತಿ ಕಾ ಕಾಮ ಕರ್ ರಹೀ ಹೈ” ಎಂದು ಹೇಳಿದ್ದನು. (ಅಂದರೆ, ಈ ಸರ್ಕಾರವು ಸೀತೆಯ ಪತಿಯ (ಶ್ರೀರಾಮನ) ಹೆಸರನ್ನು ಜಪಿಸುತ್ತಾ, ನೀತಾಳ ಪತಿಯ (ಉದ್ಯಮಿ ಮುಖೇಶ್ ಅಂಬಾನಿ ಅವರ) ಕೆಲಸವನ್ನು ಮಾಡುತ್ತಿದೆ ಎಂದು ಹೇಳಿದ್ದಾನೆ.

 

ಸಂಪಾದಕೀಯ ನಿಲುವು

ಹಿಂದೂ ದೇವತೆಗಳನ್ನು ನಿರಂತರವಾಗಿ ಅಪಮಾನಿಸುವ ಕಮ್ರಾನಂತಹ ಹಾಸ್ಯ ಕಲಾವಿದರು ಎಂದಿಗಾದರೂ ಏಸು ಕ್ರಿಸ್ತ ಅಥವಾ ಅಲ್ಲಾಹನ ವಿರುದ್ಧ ಒಂದೇ ಒಂದು ಅಕ್ಷರವನ್ನೂ ಆಡುವುದಿಲ್ಲ, ಎಂಬುದನ್ನು ನೆನಪಿನಲ್ಲಿಡಿ!