Fake Currency Racket : ಜಾಲದಿಂದ ನಕಲಿ ಭಾರತೀಯ ಕರೆನ್ಸಿ ನೋಟುಗಳ ಮುದ್ರಣ ಪತ್ತೆ!

೭ ಜನರ ಬಂಧನ!

ಬೆಳ್ತಂಗಡಿ (ಕರ್ನಾಟಕ) – ಇಲ್ಲಿನ ಕಣಿಯೂರು ಗ್ರಾಮದ ಅಡೆಂಜಾದ ನಿರ್ಜನ ಕಟ್ಟಡವೊಂದರಲ್ಲಿ ಜಾಲವೊಂದು ಎಲೆಕ್ಟ್ರಾನಿಕ್ ಉಪಕರಣಗಳನ್ನು ಬಳಸಿಕೊಂಡು ನಕಲಿ ಭಾರತೀಯ ಕರೆನ್ಸಿ ನೋಟುಗಳನ್ನು ಮುದ್ರಿಸುತ್ತಿರುವುದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಪೊಲೀಸ್ ಉಪನಿರೀಕ್ಷಕ ಸುತೇಶ್ ಕೆ.ಪಿ. ಯವರ ನೇತೃತ್ವದ ತಂಡವು ಜುಲೈ ೧೬ ರಂದು ಈ ಕಟ್ಟಡದ ಮೇಲೆ ದಾಳಿ ನಡೆಸಿದೆ. ಈ ಕಾರ್ಯಾಚರಣೆಯಲ್ಲಿ ೭ ಜನ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಲ್ಲಿ ಇಬ್ರಾಹಿಂ, ಶರೀಫ, ಸಂದೀಪ ಶೊಳಂಬಿ, ಮಹಮ್ಮದ ನಬಾಸ, ಸಲ್ಮಾನ ಫಾರಿಸ, ಸಿರಾಜುದ್ದೀನ ಮತ್ತು ಇರ್ಷಾದ ಎಂಬ ಆರೋಪಿಗಳು ಸೇರಿದ್ದಾರೆ. ಈ ಸಂದರ್ಭದಲ್ಲಿ ನಕಲಿ ನೋಟುಗಳ ಮುದ್ರಣಕ್ಕೆ ಬಳಸುತ್ತಿದ್ದ ಉಪಕರಣಗಳನ್ನೂ ವಶಪಡಿಸಿಕೊಳ್ಳಲಾಗಿದೆ.

ಈ ಕಾರ್ಯಾಚರಣೆಯನ್ನು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದು ಮಣಿ ಆರ್.ಎನ್. (ಐ.ಪಿ.ಎಸ್.) ರವರ ಮಾರ್ಗದರ್ಶನದಲ್ಲಿ ನಡೆಸಲಾಗಿದೆ. ಈ ಕುರಿತು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಸಂಪಾದಕೀಯ ನಿಲುವು

ಯಾವಾಗಲೂ ಅಲ್ಪಸಂಖ್ಯಾತರೆನಿಸಿಕೊಳ್ಳುವ ಮುಸಲ್ಮಾನರು ಅಪರಾಧಿ ಕೃತ್ಯಗಳಲ್ಲಿ ಮಾತ್ರ ಬಹುಸಂಖ್ಯಾತರಾಗಿರುತ್ತಾರೆ ಎಂಬುದನ್ನು ಗಮನಿಸಿ! ದೇಶವನ್ನು ಅಸ್ಥಿರಗೊಳಿಸಲು ಯತ್ನಿಸುವ ಇಂತಹ ದೇಶದ್ರೋಹಿ ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗಲೇಬೇಕು!