‘ಸನಾತನ ಪ್ರಭಾತ’ದ ಸಂಚಿಕೆಗಳನ್ನು ರದ್ದಿಯಲ್ಲಿ ಕೊಡುವಾಗ ಸರಿಯಾದ ಕಾಳಜಿಯನ್ನು ವಹಿಸಬೇಕು !

‘ಸನಾತನ ಪ್ರಭಾತ’ದ ವಾಚಕರಿಗೆ ವಿನಂತಿ !

‘ಸನಾತನ ಪ್ರಭಾತ’ವು ರಾಷ್ಟ್ರ-ಧರ್ಮದ ಬಗ್ಗೆ ಅಮೂಲ್ಯ ಮಾಹಿತಿಯನ್ನು ನೀಡುವ ನಿಯತಕಾಲಿಕೆಯಾಗಿದೆ. ಇದರಲ್ಲಿ ದೇವತೆಗಳ, ಸಂತರ ಮತ್ತು ರಾಷ್ಟ್ರಪುರುಷರ ಛಾಯಾಚಿತ್ರಗಳನ್ನು ಪ್ರಕಟಿಸಲಾಗುತ್ತದೆ. ವಾಚಕರಲ್ಲಿ ಈ ಸಂಚಿಕೆಗಳನ್ನು ಸಂಗ್ರಹವಾದ ನಂತರ ಕೆಲವು ವಾಚಕರು ಆ ಸಂಚಿಕೆಗಳನ್ನು ರದ್ದಿಯಲ್ಲಿ ಮಾರಾಟ ಮಾಡುತ್ತಾರೆ. ರದ್ದಿಯಲ್ಲಿ ಮಾರಾಟವಾಗಿರುವ ಸಂಚಿಕೆಗಳ ಕಾಗದಗಳನ್ನು ಯಾವುದೇ ಕಾರಣಕ್ಕಾಗಿ ಬಳಸಲಾಗುತ್ತವೆ. ಇದರಿಂದ ಅದರಲ್ಲಿನ ದೇವತೆಗಳ, ಸಂತರ ಮತ್ತು ರಾಷ್ಟ್ರಪುರುಷರ ವಿಡಂಬನೆಯಾಗುವುದು. ಆದ್ದರಿಂದ ವಾಚಕರು ‘ಸನಾತನ ಪ್ರಭಾತ’ದ ಸಂಚಿಕೆಗಳನ್ನು ರದ್ದಿಯಲ್ಲಿ ಮಾರಾಟವನ್ನು ಮಾಡದೇ ಅವುಗಳನ್ನು ‘ರಿಸೈಕಲಿಂಗ್’ ಮಾಡುವವರಿಗೆ ಮಾರಾಟ ಮಾಡಬೇಕು, ಅಂದರೆ ಈ ಸಂಚಿಕೆಗಳ ಕಾಗದಗಳನ್ನು ನೀರಿನಲ್ಲಿ ನೆನೆಸಿ, ಮುದ್ದೆ ಮಾಡಿ ಅವುಗಳನ್ನು ಪುನಃ ಬಳಸಬಹುದು. ಹೀಗೆ ‘ರಿಸೈಕಲಿಂಗ್’ ಮಾಡುವವರು ಯಾರು ಸಿಗದಿದ್ದರೆ ಸಂಚಿಕೆಗಳನ್ನು ರದ್ದಿಯಲ್ಲಿ ಮಾರಾಟ ಮಾಡದೇ ‘ಸನಾತನ ಪ್ರಭಾತ’ದ ಮಾರಾಟಗಾರರ ಕಡೆಗೆ ಜಮೆ ಮಾಡಬೇಕು, ಒಟ್ಟು ಇಂತಹ ಸಂಚಿಕೆಗಳ ಮಾಧ್ಯಮದಿಂದ ಧರ್ಮಪ್ರಸಾರವನ್ನು ಮಾಡಲು ಸಾಧ್ಯವಾಗುತ್ತದೆ.