ದೇಶದ ಮೊದಲ ಖಾಸಗಿ ಸಂಸ್ಥೆಯಿಂದ ಉಪಗ್ರಹಗಳ ಯಶಸ್ವಿ ಉಡಾವಣೆ

‘ಸ್ಕೈರೂಟ್ ಏರೋಸ್ಪೇಸ್’ ಎಂಬ ಖಾಸಗಿ ಸಂಸ್ಥೆಯ ‘ವಿಕ್ರಮ-೧’ ಇತಿಹಾಸ ರಚಿಸಿದೆ !

​ಶ್ರೀಹರಿಕೋಟ (ಆಂಧ್ರಪ್ರದೇಶ) – ಇಲ್ಲಿನ ಸತೀಶ ಧವನ ಬಾಹ್ಯಾಕಾಶ ಕೇಂದ್ರದಿಂದ ತೆಲಂಗಾಣದ ಭಾಗ್ಯನಗರದ (ಹೈದರಾಬಾದ) ‘ಸ್ಕೈರೂಟ್ ಏರೋಸ್ಪೇಸ್’ ಎಂಬ ಖಾಸಗಿ ಸಂಸ್ಥೆಯು ಜುಲೈ ೧೮ ರಂದು ‘ವಿಕ್ರಮ-೧’ ಎಂಬ ‘ಆರ್ಬಿಟಲ್-ಕ್ಲಾಸ್ ರಾಕೆಟ್’ನ್ನು (ಉಪಗ್ರಹ ಅಥವಾ ಬಾಹ್ಯಾಕಾಶ ನೌಕೆಯನ್ನು ಭೂಮಿಯ ವಾತಾವರಣದಿಂದ ಹೊರಗೆ ಕೊಂಡೊಯ್ದು ‘ಲೋ ಅರ್ಥ್ ಆರ್ಬಿಟ್’ ಅಥವಾ ಅದಕ್ಕಿಂತ ಹೆಚ್ಚಿನ ಕಕ್ಷೆಯಲ್ಲಿ ಸ್ಥಾಪಿಸಲು ಸಂಪೂರ್ಣವಾಗಿ ಶಕ್ತವಾಗಿರುವ ಶಕ್ತಿಶಾಲಿ ರಾಕೆಟ್) ಯಶಸ್ವಿಯಾಗಿ ಉಡಾವಣೆ ಮಾಡಿದೆ. ಇದು ಭಾರತದ ಮೊದಲ ಖಾಸಗಿಯಾಗಿ ಅಭಿವೃದ್ಧಿಪಡಿಸಲಾದ ರಾಕೆಟ್ ಆಗಿದೆ. ಈ ಅಭಿಯಾನಕ್ಕೆ ‘ಆಗಮನ’ ಎಂದು ಹೆಸರಿಸಲಾಗಿದೆ. ರಾಕೆಟ್ ಉಡಾವಣೆ ಬೆಳಗ್ಗೆ ೧೧.೩೦ ಕ್ಕೆ ನಡೆಯಬೇಕಿತ್ತು; ಆದರೆ ಅದನ್ನು ಮುಂದೂಡಿ ಮಧ್ಯಾಹ್ನ ೧೨ ಗಂಟೆ ೫ ನಿಮಿಷಕ್ಕೆ ಮಾಡಲಾಯಿತು. ನವೆಂಬರ್ ೧೮, ೨೦೨೨ ರಂದು ‘ಸ್ಕೈರೂಟ್’ ಭಾರತೀಯ ಭೂಮಿಯಿಂದ ಬಾಹ್ಯಾಕಾಶವನ್ನು ತಲುಪಿದ ಮೊದಲ ಖಾಸಗಿ ರಾಕೆಟ್ ‘ವಿಕ್ರಮ-ಎಸ್’ ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿತ್ತು; ಅದಾದ ಸುಮಾರು ೩ ವರ್ಷಗಳ ನಂತರ ಈ ಹೊಸ ಸಾಧನೆ ಮಾಡಲಾಗಿದೆ. ​ಸ್ಕೈರೂಟ್ ನ ಅನುಸಾರ, ಈ ಕಾರ್ಯಾಚರಣೆಯ ಉದ್ದೇಶವು ‘ವಿಕ್ರಮ್-೧’ ರ ಕಾರ್ಯಕ್ಷಮತೆ ಮತ್ತು ಅದರ ಪ್ರಮುಖ ತಂತ್ರಜ್ಞಾನವನ್ನು ಉಡಾವಣೆಯ ಸಮಯದಲ್ಲಿ ಪರಿಶೀಲಿಸುವುದಾಗಿದೆ. ಈ ಪರೀಕ್ಷೆಯಿಂದ ಲಭ್ಯವಾಗುವ ಮಾಹಿತಿಯು (ಡೇಟಾ) ಭವಿಷ್ಯದ ಕಾರ್ಯಾಚರಣೆಗಳಲ್ಲಿ ಹೆಚ್ಚಿನ ಸುಧಾರಣೆಗಳನ್ನು ಮಾಡಲು ಉಪಯುಕ್ತವಾಗಿದ್ದು, ನಿಯಮಿತ ಉಡಾವಣೆಗಳನ್ನು ಪ್ರಾರಂಭಿಸಲು ಸಹಾಯ ಮಾಡುತ್ತದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ ಅಭಿನಂದನೆ !

ಪ್ರಧಾನಮಂತ್ರಿ ಮೋದಿಯವರು ಈ ಉಡಾವಣೆಯ ಮೇಲೆ ಕಣ್ಣಿಟ್ಟಿದ್ದರು. ಉಡಾವಣೆ ಯಶಸ್ವಿಯಾದ ನಂತರ, ಅವರು ಉಪಸ್ಥಿತರಿದ್ದವರೊಂದಿಗೆ ಮೊಬೈಲ್ ಮೂಲಕ ಸಂಪರ್ಕ ಸಾಧಿಸಿ, ಇದು ದೇಶದ ಯುವಕರಿಗೆ ಸ್ಪೂರ್ತಿ ನೀಡುವ ಘಟನೆಯಾಗಿದೆ. ನಾನು ನಿಮ್ಮ ಯುವ ತಂಡವನ್ನು ಅಭಿನಂದಿಸುತ್ತೇನೆ. ದೇಶದ ಯುವಕರ ಮೇಲೆ ನಂಬಿಕೆ ಇಡಬೇಕು. ‘ಆಗಮನ’ನ್ನು ಇನ್ನಷ್ಟು ಮುಂದಕ್ಕೆ ಕೊಂಡೊಯ್ಯಬೇಕಿದೆ. ‘ಆತ್ಮನಿರ್ಭರ ಭಾರತ’ವನ್ನು ಹಾಸ್ಯಪ್ರಜ್ಞೆಯಿಂದ ನೋಡಲಾಗುತ್ತಿತ್ತು. ನಿಮ್ಮ ತಂಡವು ಈ ‘ಆತ್ಮನಿರ್ಭರ ಭಾರತ’ವನ್ನು ನಿಜ ಮಾಡಿ ತೋರಿಸಿದೆ, ಎಂದು ಹೇಳಿದರು.

‘ವಂದೇ ಮಾತರಂ ಕಾರ್ಡ್’ ಬಾಹ್ಯಾಕಾಶಕ್ಕೆ ರವಾನೆ !

‘ವಂದೇ ಮಾತರಂ’ಗೆ ೧೫೦ ವರ್ಷಗಳು ತುಂಬಿದ ಸಂದರ್ಭದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ಮೋದಿಯವರು ‘ವಂದೇ ಮಾತರಂ’ ಎಂದು ಬರೆದಿರುವ ಕಾರ್ಡ್ ಅನ್ನು ಸಹ ಈ ರಾಕೆಟ್ ಮೂಲಕ ಬಾಹ್ಯಾಕಾಶಕ್ಕೆ ಕಳುಹಿಸಿದ್ದಾರೆ.

‘ವಿಕ್ರಮ-೧’ ಎಂದರೇನು ?

‘ವಿಕ್ರಮ-೧’ ಎಂಬುದು ೨೪ ಮೀಟರ್ ಎತ್ತರದ, ೩ ಹಂತಗಳ ‘ಆರ್ಬಿಟಲ್ ಲಾಂಚ್ ವೆಹಿಕಲ್’ (ಬಾಹ್ಯಾಕಾಶ ಕಕ್ಷೀಯ ಉಡಾವಣಾ ವಾಹನ) ಆಗಿದೆ. ಈ ರಾಕೆಟ್ ೩೫೦ ಕೆ.ಜಿ ತೂಕದವರೆಗಿನ ‘ಪೇಲೋಡಗಳನ್ನು’ (ರಾಕೆಟ್ ಮೂಲಕ ಕಳುಹಿಸಲಾಗುವ ಉಪಗ್ರಹಗಳು) ೬೦ ಡಿಗ್ರಿ ವಾಲಿರುವ ೪೫೦ ಕಿ.ಮೀ. ನ ‘ಲೋ ಅರ್ಥ್ ಆರ್ಬಿಟ್’ನಲ್ಲಿ (ಭೂಮಿಗೆ ಅತ್ಯಂತ ಹತ್ತಿರವಿರುವ ಬಾಹ್ಯಾಕಾಶ ಕಕ್ಷೆ) ಕೊಂಡೊಯ್ಯಲು ಶಕ್ತವಾಗಿದೆ. ಈ ಮೊದಲ ಕಾರ್ಯಾಚರಣೆಯಲ್ಲಿ ‘ಆರ್ಬಿಟಲ್ ಅಡ್ಜಸ್ಟ್‌ ಮೆಂಟ್ ಮಾಡ್ಯೂಲ್’ ಸಹ (ಬಾಹ್ಯಾಕಾಶದಲ್ಲಿ ಉಪಗ್ರಹದ ರಸ್ತೆ ಅಥವಾ ಅದರ ದಿಕ್ಕನ್ನು ಬದಲಾಯಿಸುವ ಮತ್ತು ಅದನ್ನು ನಿಯಂತ್ರಣದಲ್ಲಿಡುವ ಎಂಜಿನ್) ಒಳಗೊಂಡಿದೆ, ಇದು ಉಡಾವಣೆಯ ನಂತರ ಉಪಗ್ರಹಗಳನ್ನು ಅವುಗಳಿಗೆ ನಿಯೋಜಿಸಲಾದ ಕಕ್ಷೆಯಲ್ಲಿ ಸ್ಥಾಪಿಸಬಲ್ಲದು.