ಮುಂದಿನ ಚಳಿಗಾಲದ ಅಧಿವೇಶನದಲ್ಲಿ ಹಲಾಲ್ ಪ್ರಮಾಣ ಪತ್ರ ನಿಷೇಧಿಸಿ ಮತ್ತು ಲವ್ ಜಿಹಾದ್ ವಿರೋಧಿ ಪೋಲಿಸ್ ದಳವನ್ನು ಸ್ಥಾಪಿಸಿ !

ಹಿಂದೂ ಜನಜಾಗೃತಿ ಸಮಿತಿ, ಶ್ರೀರಾಮಸೇನೆಯ ದುರ್ಗಾಸೇನೆಯಿಂದ ಸಿ.ಟಿ. ರವಿ ಹಾಗೂ ಕೆ. ಸುಧಾಕರ್ ಇವರಿಗೆ ಮನವಿ

ಹಿಂದೂ ಜನಜಾಗೃತಿ ಸಮಿತಿ, ಶ್ರೀರಾಮಸೇನೆಯ ದುರ್ಗಾಸೇನೆಯಿಂದ ಭಾಜಪದ ರಾಷ್ಟ್ರೀಯ ಕಾರ್ಯದರ್ಶಿ ಶ್ರೀ. ಸಿ.ಟಿ ರವಿ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರಾದ ಕೆ. ಸುಧಾಕರ್ ಇವರಿಗೆ ಮನವಿಯನ್ನು ನೀಡಲಾಯಿತು

ಬೆಂಗಳೂರು : ರಾಜ್ಯದಲ್ಲಿ ಅನಧಿಕೃತವಾಗಿ ಧರ್ಮದ ಆಧಾರದ ಮೇಲೆ ಹಲಾಲ್ ಲೋಗೊ ಇರುವ ಪ್ರಮಾಣಪತ್ರವನ್ನು ಸಾರ್ವಜನಿಕರು ಉಪಯೋಗ ಮಾಡುವ ಉತ್ಪನ್ನಗಳ ಮೇಲೆ ಮುದ್ರಣ ಮಾಡಿ, ಸಾವಿರಾರು ಕೋಟಿ ರೂಪಾಯಿಗಳನ್ನು ಮತಾಂದ ಸಂಘಟನೆಗಳು ಸಂಗ್ರಹ ಮಾಡಿ, ದೇಶ ವಿರೋಧಿ ಚಟುವಟಿಕೆಗಳಿಗೆ ಉಪಯೋಗ ಮಾಡಲಾಗುತ್ತಿವೆ. ಕೇಂದ್ರ ಸರಕಾರದ FSSAI ಅಧಿಕೃತ ಪ್ರಮಾಣಪತ್ರ ನೀಡುವ ಸಂಸ್ಥೆ ಇರುವಾಗಲೂ ಸಹ ಧರ್ಮದ ಆಧಾರದಲ್ಲಿ ಹಲಾಲ್ ಪ್ರಮಾಣ ಪತ್ರ ನೀಡುವುದು ಸಂವಿಧಾನ ಬಾಹಿರವಾಗಿದೆ. ಇದನ್ನು ಕೂಡಲೇ ನಿಷೇಧ ಮಾಡಬೇಕು, ಹಲಾಲ್ ಪ್ರಮಾಣ ಪತ್ರ ನೀಡುವ ಹಣ ದೇಶದ್ರೋಹಿ ಚಟುವಟಿಕೆಗೆ ಉಪಯೋಗದ ಬಗ್ಗೆ ತನಿಖೆ ಮಾಡಬೇಕು ಇದಕ್ಕೆ ಸಂಬಂಧಿಸಿ ಈ ಚಳಿಗಾಲದ ಅಧಿವೇಶನದಲ್ಲಿ ‘ಹಲಾಲ ಪ್ರಮಾಣಪತ್ರ’ ನಿಷೇಧ ಮಾಡುವ ಕಾಯಿದೆ ತರಬೇಕು’ ಎಂದು ಆಗ್ರಹ ಮಾಡಲಾಯಿತು. ಹಾಗೂ ‘ಲವ್ ಜಿಹಾದ್’ ಪ್ರಕರಣಗಳ ತನಿಖೆ ನಡೆಸಲು ಉತ್ತರ ಪ್ರದೇಶ ಸರ್ಕಾರದ ಮಾದರಿಯಲ್ಲಿ ಪೊಲೀಸ್ ವಿಶೇಷ ಶಾಖೆಯನ್ನು ಸ್ಥಾಪಿಸಬೇಕು. ಇಂತಹ ಪ್ರಕರಣಗಳಲ್ಲಿ ‘ಲವ್ ಜಿಹಾದ್’ ಹೆಸರಿನಲ್ಲಿ ಅಪರಾಧಗಳನ್ನು ದಾಖಲಿಸಬೇಕೆಂದು ಆಗ್ರಹಿಸಿ ರಣರಾಗಿಣಿ ಮಹಿಳಾ ಶಾಖೆ, ದುರ್ಗಾ ವಾಹಿನಿ, ಹಿಂದೂ ಜನಜಾಗೃತಿ ಸಮಿತಿ ಹಾಗೂ ಶ್ರೀರಾಮ ಸೇನೆಯಿಂದ ಭಾಜಪದ ರಾಷ್ಟ್ರೀಯ ಕಾರ್ಯದರ್ಶಿ ಶ್ರೀ. ಸಿ.ಟಿ ರವಿ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರಾದ ಕೆ. ಸುಧಾಕರ್ ಇವರಿಗೆ ಮನವಿ ನೀಡಲಾಯಿತು. ಈ ಸಂದರ್ಭದಲ್ಲಿ ರಣರಾಗಿಣಿ ಶಾಖೆಯ ಸೌ. ಭವ್ಯ ಗೌಡ, ದುರ್ಗಾ ಸೇನೆಯ ಸೌ. ನಂದಿನಿ ರಾಜ್, ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ನವೀನ ಗೌಡ ಹಾಗೂ ಶ್ರೀರಾಮ ಸೇನೆಯ ಕಾರ್ಯಕರ್ತರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸೌ. ಭವ್ಯ ಗೌಡ ಇವರು ಮಾತನಾಡಿ, ಪ್ರಸ್ತುತ ಇಸ್ಲಾಮಿ ಸಂಸ್ಥೆಗಳು ಪ್ರತಿಯೊಂದು ಪದಾರ್ಥ ಮತ್ತು ವಸ್ತುವನ್ನು ಇಸ್ಲಾಮಿಗನುಸಾರ ಕಾನೂನು ಬದ್ಧ ಅಂದರೆ ‘ಹಲಾಲ್’ ಆಗಿರುವುದರ ಬೇಡಿಕೆಯನ್ನು ಮಾಡುತ್ತಿದೆ. ಈ ಬೇಡಿಕೆಯು ಕೇವಲ ಮಾಂಸಕಷ್ಟೇ ಸೀಮಿತವಾಗಿರದೇ ಎಲೆಕ್ಟ್ರಾನಿಕ್, ಆಸ್ಪತ್ರೆ, ಔಷಧಿ, ಧಾನ್ಯ, ಹಣ್ಣು, ಸೌಂದರ್ಯವರ್ಧಕಗಳು, ಕಟ್ಟಡ ಕಾಮಗಾರಿ ಇತ್ಯಾದಿ ಉತ್ಪನ್ನಗಳು ಹಲಾಲ್ ದೃಢೀಕೃತವಾಗಿರಬೇಕು ಎಂಬ ಬೇಡಿಕೆಯನ್ನು ಮಾಡಲಾಗುತ್ತಿದೆ. ಮ್ಯಾಕ್ಡೊನಾಲ್ಡ್, ಕೆಎಫ್‌ಸಿಯಂತಹ ಬಹುರಾಷ್ಟ್ರೀಯ ಕಂಪನಿಗಳು 100 ಪ್ರತಿಶತ ಹಲಾಲ್ ಪದಾರ್ಥವನ್ನು ಮಾರಾಟ ಮಾಡಿ ಭಾರತದಲ್ಲಿನ ಬಹುಸಂಖ್ಯಾತ ಹಿಂದೂ ಧರ್ಮಿಯರ ಅವಮಾನ ಮಾಡುತ್ತಿವೆ. ಇಸ್ಲಾಮಿನ ಮೇಲಾಧಾರಿತ ಹಲಾಲ್ ವ್ಯವಸ್ಥೆಯನ್ನು ಇಸ್ಲಾಮೇತರ ಸಮಾಜದವರ ಮೇಲೆ ಹೇರುವುದು ಅವರ ಸಾಂವಿಧಾನಿಕ, ಧಾರ್ಮಿಕ ಹಕ್ಕುಗಳ ವಿರುದ್ಧವಾಗಿದೆ ಎಂದರು.

ಅದಲ್ಲದೇ ಪ್ರೇಮದ ಹೆಸರಿನಲ್ಲಿ ಹಿಂದೂ ಹೆಣ್ಣುಮಕ್ಕಳನ್ನು ಪ್ರೀತಿಯ ಬಲೆಯಲ್ಲಿ ಸಿಲುಕಿಸಿ ಇಸ್ಲಾಂಗೆ ಮತಾಂತರಗೊಳಿಸಲಾಗುತ್ತದೆ. ಕರ್ನಾಟಕದ ಮಂಗಳೂರು, ಬೆಂಗಳೂರು, ಉಡುಪಿ, ಶಿವಮೊಗ್ಗ ಸೇರಿದಂತೆ ರಾಜ್ಯಾದ್ಯಂತ ಲವ್ ಜಿಹಾದ್ ಸಮಸ್ಯೆ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದೆ. ರಾಜ್ಯದಲ್ಲಿ ಮತಾಂತರ ನಿಷೇಧ ಕಾಯಿದೆ ಇದ್ದರೂ ಸಹ ವ್ಯಾಪಕವಾಗಿ ಲವ್ ಜಿಹಾದ್ ಮೂಲಕ ಹಿಂದೂ ಯುವತಿಯರನ್ನು ಇಸ್ಲಾಮ್‌ಗೆ ಮತಾಂತರ ಮಾಡುವ ಘಟನೆಗಳು ನಡೆಯುತ್ತಿವೆ. ಲವ್ ಜಿಹಾದ್ ಪ್ರಕರಣಗಳಲ್ಲಿ ಪಿಎಪ್‌ಐನ ಶಾಹಿನ್ ಗ್ಯಾಂಗ್ ಎಂಬ ಮುಸಲ್ಮಾನ ಯುವತಿಯರ ಸಂಘಟನೆ, ಮದರಸಾ ಮತ್ತು ಮಸೀದಿಗಳ ಮೌಲ್ವಿಗಳು ಭಾಗಿಯಾಗಿರುವುದು ಗಮನಕ್ಕೆ ಬಂದಿದೆ. ಅಂತಹ ಸಂಘಟನೆಗಳ ಮೇಲೆ ಕ್ರಮ ಜರುಗಿಸಬೇಕು ಮತ್ತು ತಕ್ಷಣವೇ ನಿಷೇಧಿಸಬೇಕು’ ಇದೆಲ್ಲದಕ್ಕೆ ಪರಿಹಾರವಾಗಿ ರಾಜ್ಯದಲ್ಲಿ ಸಹ ಉತ್ತರ ಪ್ರದೇಶದ ಮಾದರಿಯಲ್ಲಿ ಮತಾಂತರ ನಿಷೇಧ ಕಾಯಿದೆಯನ್ನು ಕಠಿಣವಾಗಿ ಅನುಷ್ಠಾನ ಮಾಡಲು ವಿಶೇಷ ಲವ್ ಜಿಹಾದ್ ವಿರೋಧಿ ಪೊಲೀಸ್ ದಳದ ಸ್ಥಾಪನೆ ಮಾಡಬೇಕು’ ಎಂದು ಆಗ್ರಹಿಸಿದರು.

ಮನವಿಗೆ ಸ್ಪಂದಿಸಿದ ಸಚಿವರು, ‘ಈ ಕುರಿತು ಚಳಿಗಾಲದ ಅಧಿವೇಶನದಲ್ಲಿ ಮಂಡನೆ ಮಾಡುತ್ತೇವೆ ಮತ್ತು ಲವ್ ಜಿಹಾದ್ ವಿರೋಧಿ ಕಠಿಣ ಕಾನೂನು ಜಾರಿ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚೆ ಮಾಡುತ್ತೇವೆ’ ಎಂದರು.