ಆಪತ್ಕಾಲದಲ್ಲಿ ಪೆಟ್ರೋಲ್, ಡೀಸಲ್ ಇತ್ಯಾದಿ ಇಂಧನಗಳ ಕೊರತೆಯಾಗುವ ಸಾಧ್ಯತೆ ಇರುವುದರಿಂದ ಸೈಕಲ್‌ನ ಪರ್ಯಾಯವನ್ನು ಆಯ್ಕೆ ಮಾಡಿ !
‘ಸೈಕಲ್ ಇದು ಇಂಧನವಿಲ್ಲದೇ ನಡೆಯುವ ಸಾರಿಗೆ ಸಾಧನವಾಗಿದೆ. ಸೈಕಲ್ ಓಡಿಸುವುದರಿಂದ ವ್ಯಾಯಾಮವಾಗುತ್ತದೆ ಹಾಗೂ ಇದು ವೈಯಕ್ತಿಕ ಆರೋಗ್ಯಕ್ಕಾಗಿಯೂ ಲಾಭದಾಯಕವಾಗಿದೆ. ಇತರ ವಾಹನಗಳು ವಾಯು ಹಾಗೂ ಶಬ್ದ ಮಾಲಿನ್ಯಕ್ಕೆ ಕಾರಣವಾಗುತ್ತವೆ; ಆದರೆ ಸೈಕಲ್ ಓಡಿಸುವುದರಿಂದ ಯಾವುದೇ ಮಾಲಿನ್ಯವಾಗುವುದಿಲ್ಲ. ಆದ್ದರಿಂದ ಸೈಕಲ್ ಪರಿಸರಸ್ನೇಹಿಯಾಗಿದೆ.