
ನವದೆಹಲಿ – ದೇಶದಲ್ಲಿ ಮುಂದಿನ ವರ್ಷದಿಂದ ಪ್ಲಾಸ್ಟಿಕ್ ನೋಟುಗಳು ಚಲಾವಣೆಗೆ ಬರಬಹುದು. ಇದರ ಆರಂಭವು 10 ಮತ್ತು 20 ರೂಪಾಯಿಗಳ ಸಣ್ಣ ನೋಟುಗಳಿಂದಾಗಲಿದೆ. ‘ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ’ದ (ಆರ್.ಬಿ.ಐ.ನ) ನೋಟು ಮುದ್ರಣಾಲಯದ ಬೆಂಗಳೂರು ಶಾಖೆಯು ‘ಒಪೆಸಿಫೈಡ್ ಪಾಲಿಮರ್ ಸಬ್‌ಸ್ಟ್ರೇಟ್ ಶೀಟ್‌ಗಳ’ ಪೂರೈಕೆಗಾಗಿ ವಿಶ್ವಾದ್ಯಂತದ ಇರುವ ಸಂಸ್ಥೆಗಳಿಂದ ಟೆಂಡರ್ ಆಹ್ವಾನಿಸಿದೆ. ದೇಶದಲ್ಲಿ ಪ್ಲಾಸ್ಟಿಕ್ ನೋಟುಗಳ ಶೀಟ್ ತಯಾರಿಸುವ ಸಂಸ್ಥೆಗಳಿಲ್ಲ. ಇತ್ತೀಚೆಗಷ್ಟೇ ಆರ್.ಬಿ.ಐ. ನ ಗವರ್ನರ್ ಸಂಜಯ ಮಲ್ಹೋತ್ರಾರವರು 10 ಮತ್ತು 20 ರೂಪಾಯಿಗಳ ಪಾಲಿಮರ್ ನೋಟುಗಳ ಪ್ರಸ್ತಾವನೆಯು ಪರಿಶೀಲನೆಯಲ್ಲಿದೆ ಎಂದು ತಿಳಿಸಿದ್ದರು. ‘ಪೈಲಟ್ ಪ್ರಾಜೆಕ್ಟ್’ (ಪ್ರಾಯೋಗಿಕ ಯೋಜನೆ) ಆಗಿ ಇದನ್ನು ಜಾರಿಗೆ ತರಲು ಅಧ್ಯಯನ ನಡೆಯುತ್ತಿದೆ.
1. ಆರ್.ಬಿ.ಐ. ನ ಅನುಸಾರ, 10 ಮತ್ತು 20 ರೂಪಾಯಿಗಳ ನೋಟುಗಳು ಅತಿ ಹೆಚ್ಚು ಪ್ರಮಾಣದಲ್ಲಿ ಚಲಾವಣೆಯಲ್ಲಿರುತ್ತವೆ ಮತ್ತು ಬೇಗನೆ ಹಾಳಾಗುತ್ತವೆ. ಇದರಿಂದಾಗಿ ಪ್ರತಿ ವರ್ಷ ದೊಡ್ಡ ಸಂಖ್ಯೆಯಲ್ಲಿ ನೋಟುಗಳನ್ನು ಬದಲಾಯಿಸಬೇಕಾಗುತ್ತದೆ. ಇದಕ್ಕೆ ಸಾವಿರಾರು ಕೋಟಿ ರೂಪಾಯಿ ವೆಚ್ಚವಾಗುತ್ತದೆ. ಪಾಲಿಮರ್ ನೋಟುಗಳು ಸಾಮಾನ್ಯ ಕಾಗದದ ನೋಟುಗಳಿಗಿಂತ ಎರಡು ಮೂರು ಪಟ್ಟು ಹೆಚ್ಚು ಕಾಲ ಬಾಳಿಕೆ ಬರುತ್ತವೆ. ಈ ನೋಟುಗಳ ಮೇಲೆ ನೀರು ಮತ್ತು ಕೊಳಕಿನ ಪರಿಣಾಮ ತೀರಾ ಕಡಿಮೆ ಇರುತ್ತದೆ.
2. ಈ ನೋಟುಗಳಲ್ಲಿ ನಕಲಿ ನೋಟುಗಳ ಹಾವಳಿಯನ್ನು ತಡೆಗಟ್ಟಲು ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಲಾಗುತ್ತದೆ. ಆಸ್ಟ್ರೇಲಿಯಾ, ಕೆನಡಾ ಮತ್ತು ಬ್ರಿಟನ್ ಸೇರಿದಂತೆ 60 ದೇಶಗಳಲ್ಲಿ ಆಯ್ದ ಮುಖಬೆಲೆಯ ಪಾಲಿಮರ್ ನೋಟುಗಳು ಈಗಾಗಲೇ ಚಲಾವಣೆಯಲ್ಲಿವೆ. ಕಳೆದ 16 ವರ್ಷಗಳಲ್ಲಿ ದೇಶದಲ್ಲಿ ಪಾಲಿಮರ್ ಚಲಾವಣೆಯನ್ನು ಜಾರಿಗೆ ತರಲು ನಡೆಯುತ್ತಿರುವ ಮೂರನೇ ಪ್ರಯತ್ನ ಇದಾಗಿದೆ.
Aamir Khan Gets Death Threat : ನಟ ಆಮೀರ್ ಖಾನ್ ಅವರಿಗೆ ‘ಲವ್ ಜಿಹಾದ್’ ಹೆಸರಿನಲ್ಲಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನಿಂದ ಕೊಲೆ ಬೆದರಿಕೆ
ಪಂಢರಪುರ: ಶ್ರೀ ವಿಠ್ಠಲ-ರುಕ್ಮಿಣಿ ಮೂರ್ತಿಯ ಮೇಲೆ ರಾಸಾಯನಿಕ ಲೇಪನದ ತಡೆಯಾಜ್ಞೆ ತೆರವು!
ಹಿಂದೂ ಯುವತಿಯನ್ನು ಪ್ರೇಮ ಜಾಲದಲ್ಲಿ ಸೆಳೆಯಲು ಯತ್ನ, ಮಾನಸಿಕ ಕಿರುಕುಳ ನೀಡಿದ ಸುಫಿಯಾನ್ ಖಾನ್!
Vande Mataram : ‘ವಂದೇ ಮಾತರಂ’ಗೆ ಅವಮಾನ ಮಾಡಿದರೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ !
Hospital Gives Wrong Blood : ರಾಜಸ್ಥಾನ: ಹೆರಿಗೆಯಾದ ಮಹಿಳೆಗೆ ‘ಒ-ಪಾಸಿಟಿವ್’ ಬದಲು ‘ಬಿ-ಪಾಸಿಟಿವ್’ ರಕ್ತ ನೀಡಿದ ಆಸ್ಪತ್ರೆ ಸಿಬ್ಬಂದಿ; ಮಹಿಳೆ ಸ್ಥಿತಿ ಗಂಭೀರ!
ದೇಶದ ಮೊದಲ ಖಾಸಗಿ ಸಂಸ್ಥೆಯಿಂದ ಉಪಗ್ರಹಗಳ ಯಶಸ್ವಿ ಉಡಾವಣೆ