ಬನವಾಸಿಯ ಶ್ರೀ ಮಧುಕೇಶ್ವರ ದೇವಸ್ಥಾನದಲ್ಲಿ ವಸ್ತ್ರ ಸಂಹಿತೆಯನ್ನು ಜಾರಿಗೊಳಿಸುವಂತೆ ಒತ್ತಾಯ

ಹಿಂದೂ ಜನಜಾಗೃತಿ ಸಮಿತಿ ಹಾಗೂ ಸಮಸ್ತ ಹಿಂದೂ ಸಂಘಟನೆಗಳು ಇಂದು ಶ್ರೀ ಮಧುಕೇಶ್ವರ ದೇವಸ್ಥಾನದ ಆಡಳಿತ ವರ್ಗದವರಿಗೆ ಮನವಿ

ಬನವಾಸಿ: ಬನವಾಸಿಯ ಶ್ರೀ ಮಧುಕೇಶ್ವರ ದೇವಸ್ಥಾನದಲ್ಲಿ ಸಾತ್ವಿಕ ಉಡುಪುಗಳನ್ನು ಧರಿಸಿ ಬರುವ ದೃಷ್ಟಿಯಿಂದ ದೇವಾಲಯದಲ್ಲಿ ವಸ್ತ್ರಸಂಹಿತೆ ಜಾರಿಗೆ ತರಬೇಕು ಎಂದು ಒತ್ತಾಯಿಸಿ ಹಿಂದೂ ಜನಜಾಗೃತಿ ಸಮಿತಿ ಹಾಗೂ ಸಮಸ್ತ ಹಿಂದೂ ಸಂಘಟನೆಗಳು ಇಂದು ಶ್ರೀ ಮಧುಕೇಶ್ವರ ದೇವಸ್ಥಾನದ ಆಡಳಿತ ವರ್ಗದವರಿಗೆ ಮನವಿಯನ್ನು ನೀಡಲಾಯಿತು.

ಶ್ರೀ ಮಧುಕೇಶ್ವರ ದೇವಸ್ಥಾನವು ಉತ್ತರಕನ್ನಡ ಜಿಲ್ಲೆಯ ಪ್ರಮುಖ ಮತ್ತು ಐತಿಹಾಸಿಕ ದೇವಾಲಯಗಳಲ್ಲೊಂದಾಗಿದೆ. ಭಕ್ತರು ಬೇಡಿದ್ದನ್ನು ನೀಡುತ್ತಾನೆಂಬ ನಂಬಿಕೆ ಇರುವ ಶ್ರೀ ಮಧುಕೇಶ್ವರ ದೇವಸ್ಥಾನವು ಒಂದು ಕಾರಣಿಕ ಸ್ಥಳವಾಗಿದ್ದು ಅತ್ಯಂತ ಪವಿತ್ರ ಹಾಗೂ ಸಮಾಜಕ್ಕೆ ಚೈತನ್ಯವನ್ನು ನೀಡುವ ಪುಣ್ಯಕ್ಷೇತ್ರವಾಗಿದೆ. ಮಧುಕೇಶ್ವರನ ಅಸ್ತಿತ್ವದಿಂದ ಬನವಾಸಿ ನಗರ ಪಾವನವಾಗಿದೆ. ದೇವಸ್ಥಾನದ ಪಾವಿತ್ರ್ಯವನ್ನು ಜೋಪಾಸನೆ ಮಾಡಿದರೆ ಮಾತ್ರ ಅಲ್ಲಿರುವ ದೇವತ್ವದ ಅನುಭವವನ್ನು ಪಡೆಯಬಹುದು.

ಈ ಸಂಧರ್ಭದಲ್ಲಿ ಹಿಂದೂ ಸಂಘಟನೆಯ ಪ್ರಮುಖರಾದ ಶ್ರೀ ಹಾಲೇಶ್ ಕೆರೋಡಿ, ಶ್ರೀ ಚಂದ್ರಶೇಖರ ಗೌಡರ್, ಶ್ರೀ ಅರವಿಂದ್ ಶೆಟ್ಟಿ, ಶ್ರೀ ಆರ್ ಜಿ ಭಟ್, ಶ್ರೀ ಸಚಿನ್ ಮಾಳವದೆ, ಶ್ರೀ ಮಯೂರ್ ಭೊಂಗಳೆ, ಶ್ರೀ ಶ್ರೀಧರ ಶೆಟ್ಟಿ, ಹಿಂದೂ ಮಹಾಸಭಾದ ಶ್ರೀ ಪ್ರವೀಣ ರಾಮನಬೈಲ್, ಶ್ರೀ ಪ್ರಕಾಶ್ ಸೂಗಿ, ಶ್ರೀ ಅರವಿಂದ್ ಬಳಗಾರ್ ಹಾಗೂ ಮಹಿಳಾ ಮುಖಂಡರಾದ ಶ್ರೀಮತಿ ಮಂಗಳಾ ದಾವಣಗೆರೆ, ಶ್ರೀಮತಿ ಉಮಾ ಸಂಗೀತಗಾರ, ಶ್ರೀಮತಿ ಶಾಂತಾ ಬನವಡಿ, ಶ್ರೀಮತಿ ರೂಪ ಬಂದೇರ್ ಹಿಂದೂ ಜನಜಾಗೃತಿ ಸಮಿತಿಯ ಜಿಲ್ಲಾ ಸಮನ್ವಯಕರಾದ ಶ್ರೀ ಶರತ ಕುಮಾರ ನಾಯ್ಕ್ ಮುಂತಾದವರು ಉಪಸ್ಥಿತರಿದ್ದರು. ಮನವಿಯನ್ನು ಶ್ರೀ ಮಧುಕೇಶ್ವರ ದೇವಸ್ಥಾನದ ಧರ್ಮದರ್ಶಿಗಳಾದ ಶ್ರೀ ರಾಜಶೇಖರ ಒಡೆಯರ್ ಅವರು ಮನವಿಯನ್ನು ಸ್ವೀಕರಿಸಿ ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.